Wednesday, July 2, 2025

Latest Posts

ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು..

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಇದು ಸಿದ್ಧಗೊಂಡಿರುವ ಸತ್ಯ. ಕೋರ್ಟ್ ನಲ್ಲಿ ಸತ್ಯ ಆಗಿಲ್ಲ ಅನ್ನೋದ ಬಿಟ್ರೆ ಎಲ್ಲವೂ ನಡೆದಿದ್ದು ಸತ್ಯ. ಪೊಲೀಸರು ಮೊದಲೇ ಅನುಮತಿ ನಿರಾಕರಿಸಿದ್ದರು. ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗೋದಿಲ್ಲ ಎಂದಿದ್ದರು. ಪೊಲೀಸ್ ಆಯುಕ್ತ ದಯಾನಂದ ಈ ಮಾತು ಸಿಎಂಗೆ ಹೇಳಿದ್ದರು. ರಾತ್ರಿ ಎಕ್ಕ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಕುಡಿದು ಕುಪ್ಪಳಿಸಿದ್ದರು. ಅವರನ್ನು ನಿರ್ವಹಿಸೋದೇ ಪೊಲೀಸರಿಗೆ ಸಾಕಾಗಿತ್ತು. ಪೊಲೀಸ್ ಆಯುಕ್ತರಲ ದಯಾನಂದ ಅವತ್ತು ಬೆಳಗಿನ ಬ್ರಿಫೀಂಗ್‌ಗೂ ಹೋಗಿರಲಿಲ್ಲ.

ಪೆಂಡಾಲ್ ಹಾಕೋದೆಲ್ಲ ನೋಡಿಣ ತಯಾರಿ ಕಂಡು, ಸಿಎಂಗೆ ಆಯುಕ್ತರು ಭದ್ರತೆ ಆಗೋದಿಲ್ಲ ಎಂದೇ ಹೇಳಿದ್ದರು. ಆದರೆ ಸಿಎಂ ಅನುಮತಿ ಕೊಟ್ರೆ ನಾ ಹಿಂದೆ ಬೀಳುವೆ ಅಂತಾ ಡಿಸಿಎಂ. ಡಿಸಿಎಂ ಕೊಟ್ರೆ ನಾ ಹಿಂದೆ ಬೀಳುವೆ ಅಂತಾ ಸಿಎಂ. ಹೀಗೆ ಮಾಡಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದ್ರು. ಈಗ ತಮ್ಮ ಮೇಲೆ ಆರೋಪ‌ ಜಾಡಿಸಲು ಅಧಿಕಾರಿಗಳ ಅಮಾನತು ಮಾಡಿಸುದ್ದಾರೆ. ಇದೊಂದು ಎಸ್ಕೇಪಯಿಸಮ್. ಇದನ್ನು ನಾವು ಒಪ್ಪುವುದಿಲ್ಲ ಎಂದು ಜೋಶಿ ಹೇಳಿದ್ದಾರೆ.

ಸಿಎಂ ಕಾರ್ಯದರ್ಶಿ ಗೋವಿಂದ‌ರಾಜ್ ತೆಗೆದಿದ್ದು ಯಾಕೆ? ಏನಾದರೂ ತಪ್ಪು ಮಾಡಿರಬಹುದಲ್ವಾ? ಅವರ ಮೇಲೆ ಯಾಕೆ FIR ಇಲ್ಲ..? ಇವರಿವರನ್ನು ಸಸ್ಪೆಂಡ್ ಮಾಡಿ ಜನರಿಂದ ಈ ಕೇಸ್ ಮರೆಸುವ ಕೆಲಸ ಮಾಡುತ್ತಿದ್ದಾರೆ. ಜನ ಇದನ್ನು ಮರೆಯುವುದಿಲ್ಲ. ಸಿಎಂ, ಡಿಸಿಎಂ ಪೈಪೋಟಿಯಲ್ಲಿ ಹೀಗೆ ಮಾಡಿದ್ದಾರೆ. ಸಿಎಂ, ಮಂತ್ರಿಗಳ ಮಕ್ಕಳು ವಿಧಾನಸೌಧ ಎದುರು ಸೆಲ್ಫಿ ತಗೊಂಡ್ರು. ವಿಧಾನಸೌಧಕ್ಕೆ ಅನುಮತಿ ಕೊಟ್ಟಿದ್ದು ಯಾರು? ಎಂದು ಜೋಶಿ ಪ್ರಶ್ನಿಸಿದ್ದಾರೆ.

ನೂರಾರು ಜನ ವೇದಿಕೆಯಲ್ಲಿದ್ದರು. ಸಿಎಂ ಹುದ್ದೆಗೆ ನಮಗೆ ಗೌರವ ಇದೆ. ಸಿಎಂ ನಮ್ಮ ರಾಜ್ಯದ ನಾಯಕರು. ಸಿಎಂ ಇರೋ ವೇದಿಕೆಯಲ್ಲಿ ಹೀಗೆಲ್ಲ ಮಾಡಿದ್ದು ಎಷ್ಟು ಸರಿ? ಇದಕ್ಕೆ ಯಾರು ಹೊಣೆ? ಇದರ ಮೇಲೆ ಯಾಕೆ ಕ್ರಮ‌ ಇಲ್ಲ. ಮಧ್ಯಾಹ್ನ 3.10ಕ್ಕೆ ಬೋರಿಂಗ್ ಆಸ್ಪತ್ರೆಯಲ್ಲಿ ಮೊದಲ ನಿಧನ ಆಯ್ತು. ಅದು ಆದ ಬಳಿಕವೂ ಕಾರ್ಯಕ್ರಮ‌ ಮಾಡಿದ್ರು. ಸಿಎಂ, ಡಿಸಿಎಂಗೆ ನಾಚಿಕೆ ಬರೋಲ್ವಾ? ಉನ್ನತ ಅಧಿಕಾರಿಗಳು ಏನ ಮಾಡತಾ ಇದ್ರು. ಇದಕ್ಕೆಲ್ಲ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರದಲ್ಲಿ ಈಗ ಇರೋರು ಮುಂದುವರಿಯೋಕೆ ಸಾಧ್ಯವಿಲ್ಲ ಎಂದು ಜೋಶಿ ಹೇಳಿದ್ದಾರೆ.

ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಕ್ಕೆ ಪ್ರಹ್ಲಾದ ಜೋಶಿ ಅಡ್ಟಗಾಲು ಹಾಕುತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಆರೋಪಕ್ಕೆ ಜೋಶಿ ಪ್ರತಿಕ್ರಿಯಿಸಿದ್ದು,  ನಮ್ಮ ಸ್ಥಳೀಯ ಮೇಯರ್ ಉತ್ತರ ಕೊಡಲಿದ್ದಾರೆ. ಬಹಳಷ್ಟು ಜನ ಚಿಲ್ಲರೇ ಆರೋಪ ಮಾಡ್ತಾ ಒಡಾಡುತ್ತಾರೆ. ಆ ಬಗ್ಗೆ ನಾನು ಏನು ಮಾತಾಡಲ್ಲ. ಇದಕ್ಕೆ ಸಂಬಂಧಿಸಿದವರು ಇದಾರೆ. ಪಾಲಿಕೆಯಲ್ಲಿ ನಾನು ಯಾವತ್ತೂ ಕೈ ಹಾಕಿಲ್ಲ. ಮೇಯರ್ ಚುನಾವಣೆಯಲ್ಲಿ ಒಟು ಹಾಕಲು ಮಾತ್ರ ಬರ್ತೆನೆ. ಈ ರೀತಿ‌ ಚಿಲ್ಲರೆ ಆರೋಪಕ್ಕೆ ಉತ್ತರ ಕೊಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಾಖಂಡಿತವಾಾಗಿ ಹೇಳಿದ್ದಾರೆ.

- Advertisement -

Latest Posts

Don't Miss