- Advertisement -
Hubli News: ಹುಬ್ಬಳ್ಳಿ: IPL ಕಾಲ್ತುಳಿತ ವಿಚಾರ, ಇದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಡಿಸಿಎಂ ಶಿವಕುಮಾರ್ ಮನೆಗೆ ಹೋಗಬೇಕು ಎಂಬುದು ನಮ್ಮದು ಮೊದಲ ಡಿಮ್ಯಾಂಡ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಲ್ಲೆ ಜನರು ಸತ್ತಿದ್ದು ನಮಗೆ ಕಮಿಷನರ್ ದಯಾನಂದ ಅವರು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮೊದಲು ಡಿ.ಕೆ.ಶಿವಕುಮಾರ್ ಅವರನ್ನ ಅಮಾನತು ಮಾಡಬೇಕು. ಗೋವಿಂದ ರಾಜ್ ಅವರನ್ನ ಬಿಡುಗಡೆ ಮಾಡಿದ್ದಾರೆ. ನಿಂಬಾಳ್ಕರ ನಿಮ್ಮ ಅಧಿಕಾರಿ ಏನ್ ಮಾಡ್ತಾ ಇದ್ದರು. ನಿಂಬಾಳ್ಕರ್ ನಿಮ್ಮ ಪಕ್ಷ ಕಾರ್ಯಕರ್ತ, ಅವರನ್ನ ಏಕೆ ಅಮಾನತು ಮಾಡಿಲ್ಲ. ಕೇವಲ ವರ್ಗಾವಣೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಬೇಕಾದವರಿಗೆ ಬೆಣ್ಣೆ, ಬೇಡವಾದವರಿಗೆ ಸುಣ್ಣ ಹಚ್ಚುತ್ತಿದ್ದಾರೆ ಎಂದು ಕಿಡಿ ಕಾರಿದರು.
- Advertisement -