Tuesday, July 22, 2025

Latest Posts

ನಾಯಿಗೆ ಹಿಂಸಿಸಿದ್ದ ಪೆಟ್ ಕ್ಲಿನಿಕ್ ಸಿಬ್ಬಂದಿಗಳು ಅರೆಸ್ಟ್..

- Advertisement -

National News: ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾ ವೈರಲ್ ಆಗಿತ್ತು. ಮುದ್ದು ಮುದ್ದಾದ ಶ್ವಾನಕ್ಕೆ, ನೀಲಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಮನಸ್ಸೋ ಇಚ್ಛೆ ಹೊಡೆದಿದ್ದ. ಮೊದ ಮೊದಲು ಅವರು ಟೆಡ್ಡಿಗೆ ಹೊಡೆಯುತ್ತಿದ್ದಾನೆ ಅಂತಲೇ ಹಲವರು ಭಾವಿಸಿದ್ದರು. ಬಳಿಕ ಆ ನಾಯಿ ಓಡಿ ಹೋದಾಗ, ಅದು ಜೀವಂತ ನಾಯಿ ಅನ್ನೋದು ಗೊತ್ತಾಗಿತ್ತು. ಇದೀಗ ಪಾಪದ ಪ್ರಾಣಿಗೆ ಹೊಡೆದ ದುಷ್ಟನನ್ನು, ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟು ವೀಡಿಯೋ ಮಾಡಿದವನನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಆ ನಾಯಿ ಯಾವುದು..? ಅದನ್ಯಾಕೆ ಆ ದುರುಳರು ಹಿಂಸಿಸಿದರು ಎಂದರೆ, ಮಹಾರಾಷ್ಟ್ರದ ಥಾಣೆಯಲ್ಲಿರುವ ವೆಟಿಕ್ ಪೆಟ್ ಕ್ಲಿನಿಕ್‌ಗೆ ಬಂದ ಓರ್ವ ವ್ಯಕ್ತಿ, ತನ್ನ ನಾಯಿಯನ್ನು ಕ್ಲಿನಿಕ್ ಸಿಬ್ಬಂದಿಗೆ ಗ್ರೂಮಿಂಗ್‌ಗಾಗಿ ಒಪ್ಪಿಸಿ ಹೋಗಿದ್ದರು. ಆದರೆ ಅಲ್ಲಿನ ಓರ್ವ ಸಿಬ್ಬಂದಿ ನಾಯಿಯ ಮುಖಕ್ಕೆ, ಹೊಟ್ಟೆಗೆ ಮನಬಂದಂತೆ ಹೊಡೆದಿದ್ದಾನೆ.

ಇನ್ನೋರ್ವ ಸಿಬ್ಬಂದಿ ನಾಯಿಯನ್ನು ಹೊಡೆಯುವುದಲ್ಲದೇ, ವೀಡಿಯೋ ಮಾಡಿ, ಮಜಾ ತೆಗೆದುಕೊಂಡಿದ್ದಾನೆ. ಅಲ್ಲದೇ, ವೀಡಿಯೋವನ್ನು ಫನ್ನಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಹಲವು ಸೆಲೆಬ್ರಿಟಿಗಳು ಸೇರಿ, ಪ್ರಾಣಿಪ್ರಿಯರೆಲ್ಲ, ಈ ವೀಡಿಯೋಗೆ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಇವರನ್ನು ಆದಷ್ಟು ಬೇಗ ಬಂಧಿಸಲೇಬೇಕು ಎಂದು ಆಗ್ರಹಿಸಿದ್ದರು. ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಳಿಕ ಕ್ಲಿನಿಕ್ ಓನರ್‌ ಎಲ್ಲರಲ್ಲಿ ಕ್ಷಮೆಯಾಚಿಸಿ, ಇಬ್ಬರನ್ನೂ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ. ಪ್ರಾಣಿಗಳನ್ನು ರಕ್ಷಿಸಿ, ಆರೈಕೆ ಮಾಡಬೇಕಾದವರೇ, ಈ ರೀತಿ ಮಾಡಿದ್ದು ವಿಪರ್ಯಾಸದ ಸಂಗತಿ.

ಅಮೆರಿಕದ ಮನೆಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಕುಟುಂಬ..

ಇಂಡಿಗೋ ವಿಮಾನದಲ್ಲಿ ಕೊಟ್ಟ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಪತ್ತೆ..?

ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ಬೈ ಹೇಳಿದ ಲಾಲ್‌ ಬಹಾದ್ದೂರ್ ಶಾಸ್ತ್ರಿ ಮೊಮ್ಮಗ ವಿಭಾಕರ್ ಶಾಸ್ತ್ರಿ

- Advertisement -

Latest Posts

Don't Miss