Sunday, September 8, 2024

Latest Posts

Star Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ

- Advertisement -

ಧಾರವಾಡ: ವಿಮಾನ ರದ್ದಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ‘ಸ್ಟಾರ್ ಏರಲೈನ್ಸ್‌’ಗೆ ಜಿಲ್ಲಾ ಗ್ರಾಹಕರ ಆಯೋಗ ಬರೋಬರಿ 8,10,000 ರೂ ದಂಡ ವಿಧಿಸಿದೆ.

ವಕೀಲೆ ಮಹೇಶ್ವರಿ ಉಪ್ಪಿನ ( ದೇಸಾಯಿ ) ಹಾಗೂ ಅವರೊಂದಿಗೆ 26 ಜನ ಹುಬ್ಬಳ್ಳಿಯ ಸುರಕ್ಷಾ ಟೂರ್‌ ಮತ್ತು ಟ್ರಾವೆಲ್ಸ್ ಮೂಲಕ 2022 ರ ಅ . 9 ರಿಂದ 19 ರವರೆಗೆ ದೆಹಲಿ , ಹರಿದ್ವಾರ , ಪ್ರಯಾಗರಾಜ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿದ್ದರು. ದೆಹಲಿಯಿಂದ ಎಲ್ಲ ಕ್ಷೇತ್ರಗಳ ದರ್ಶನದ ಬಳಿಕ ಹುಬ್ಬಳ್ಳಿಗೆ ಕರೆತರುವ ಜವಾಬ್ದಾರಿ ಸುರಕ್ಷಾ ಟೂರ್ ಮತ್ತು ಟ್ರಾವಲ್ ನವರದಾಗಿತ್ತು.

ಅದರಂತೆ ಸಂಸ್ಥೆ ಮಾಲೀಕ ಸುನೀಲ ತೊಗರಿ ಅವರಿಗೆ ತಲಾ 21,000 ರೂ ನೀಡಿದ್ದರು. ಹುಬ್ಬಳ್ಳಿಯಿಂದ ದೆಹಲಿಗೆ ತೆರಳಲು ಸ್ಟಾರ್ ಏರಲೈನ್ – ಟಿಕೆಟ್ ಬುಕ್ ಮಾಡಿದ್ದರು. ದಿನಾಂಕ 9-10-2022ರಂದು ಹುಬ್ಬಳ್ಳಿಯಿಂದ ದೆಹಲಿಗೆ ಸ್ಟಾರ್‌ಏರಲೈನ್ಸ್ ಹೋಗಬೇಕಾದ ರದ್ದಾಗಿತ್ತು . ಆದರೆ ಏರಲೈನ್ಸ್‌ನವರು ಬೇರೆ ವ್ಯವಸ್ಥೆ ಮಾಡದ ಕಾರಣ ಸುರಕ್ಷಾ ಸಂಸ್ಥೆಯವರು ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ , ಕ್ಷೇತ್ರಗಳ ದರ್ಶನ ಬಳಿಕ ಹುಬ್ಬಳ್ಳಿಗೆ ಕರೆತಂದಿದ್ದರು.

ಪ್ರವಾಸಕ್ಕೂ ಕೆಲ ತಿಂಗಳು ಮುನ್ನ ಟಿಕೆಟ್ ಬುಕ್ ಮಾಡಿದ್ದರೂ ಸಹ ಸ್ಟಾರ್ ಏರಲೈನ್ಸ್ ರದ್ದಾಗಿದ್ದರಿಂದ ಅನಾನುಕೂಲ ಹಾಗೂ ಮಾನಸಿಕ ತೊಂದರೆಯಾಗಿದೆ. ಸೇವಾ ನ್ಯೂನತೆ ಆಗಿದೆ ಎಂದು ಸುರಕ್ಷಾ ಟೂರ್ ಮತ್ತು ಸ್ಟಾರ್‌ಏರಲೈನ್ಸ್ ವಿರುದ್ಧ 2023 ರ ಫೆಬ್ರವರಿಯಲ್ಲಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಅದರಂತೆ ಈ ಪ್ರಕರಣವನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ , ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ , ವಿಮಾನ ರದ್ದಾದರೂ ಸುರಕ್ಷಾ ಟೂರ್‌ ಮಾಲೀಕ ಸುನೀಲ ಸ್ವಂತ ಹಣದಲ್ಲಿ ಸಮಯಕ್ಕೆ ದೆಹಲಿ ತಲುಪಿಸಿದ್ದಾರಲ್ಲದೆ , ಕ್ಷೇತ್ರ ದರ್ಶನ ಬಳಿಕ ಹುಬ್ಬಳ್ಳಿಗೆ ಬರುವ ವ್ಯವಸ್ಥೆ ಮಾಡಿದ್ದಾರೆ . ಹೀಗಾಗಿ ಅವರಿಂದ ಸೇವಾ ನ್ಯೂನತೆ ಆಗಿಲ್ಲ . ಸ್ಟಾರ್ ಏರಲೈನ್ ಸೇವಾ ನ್ಯೂನತೆ ಎಸಗಿದ್ದು 27 ಜನರಿಗೆ ತಲಾ 25,000 ರೂ . ಪರಿಹಾರ , 5000 ರೂ . ಪ್ರಕರಣ ವೆಚ್ಚ ಎಂದು ಒಟ್ಟು 8,10,000 ರೂ.ಗಳನ್ನು ಒಂದು ತಿಂಗಳಲ್ಲಿ ನೀಡಬೇಕು ಎಂದು ಸೋಮವಾರ ಆದೇಶ ನೀಡಿದ್ದಾರೆ.

ಇನ್ನು ವಿಮಾನ ರದ್ದಾದ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿದ್ದರಿಂದ 1,66,823 ರೂ . ಹೆಚ್ಚಿಗೆ ವೆಚ್ಚವಾಗಿದೆ ಎಂಬ ಸುರಕ್ಷಾ ಟೂರ್ ಮಾಲೀಕ ಸುನೀಲ ತೊಗರಿ ಬೇಡಿಕೆ ಪುರಸ್ಕರಿಸಿದ ಆಯೋಗ , ಆ ಹಣವನ್ನು ಒಂದು ತಿಂಗಳಲ್ಲಿ ನೀಡಬೇಕು. ನಿಗದಿತ ಸಮಯದಲ್ಲಿ ಹಣ ನೀಡದಿದ್ದರೆ ತೀರ್ಪು ನೀಡಿದ ದಿನಾಂಕದಿಂದ ಶೇ .8 ರಂತೆ ಬಡ್ಡಿ ನೀಡಬೇಕಾಗುತ್ತದೆ ಎಂದು ಸ್ಟಾರ್ ಏರಲೈನ್ಸ್‌ಗೆ ಆಯೋಗ ಎಚ್ಚರಿಸಿದೆ.

Super sisters: ಸಮಯಪ್ರಜ್ಞೆಯಿಂದ ತಮ್ಮನ ಪ್ರಾಣ ಉಳಿಸಿದ ಸಹೋದರಿಯರು..!

Maluru :ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ; ಕೆ.ವೈ ನಂಜೇಗೌಡ.

‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’

- Advertisement -

Latest Posts

Don't Miss