Hubli News: ಹುಬ್ಬಳ್ಳಿ: ರಾಜ್ಯ ರಾಜಕಾರಣ ಹೊಲಸು ಎದ್ದು ಹೋಗಿದೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಒಂದು ಕಡೆ ವಿಜೇಯಂದ್ರ ಬಸನಗೌಡರ ಪಾಟೀಲ್ ಯತ್ನಾಳ ಗಲಾಟೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇನ್ನು ವಕ್ಪ್ ವಿಚಾರವಾಗಿ ಭಾರತೀಯ ಜನತಾ ಪಕ್ಷ ಸಾಕಷ್ಟು ಗೊಂದಲ ಸೃಷ್ಟಿ ಮಾಡತಾ ಇದ್ದಾರೆ. ವಕ್ಪ್ ವಿಚಾರವನ್ನ ಕೇವಲ ಕಾಟಚಾರಕ್ಕೆ ಇರಿಸಿಕೊಂಡಿದ್ದಾರೆ. ಏನು ವಿಷಯ ಇಲ್ಲ ಇದೊಂದು ಕಾಲಹರಣ ಮಾಡತಾ ಇದ್ದಾರೆ ಎಂದರು. ವಕ್ಪ್ ಕಾಯ್ದೆ ಜಾರಿ ತಂದಿದ್ದು ಕಾಂಗ್ರೆಸ್ ಜಾರಿ ಮಾಡಿಲ್ಲ ಇದನ್ನು ಬ್ರಿಟಿಷ್ ರು ಮಾಡಿದ್ದರು ಯಾವುದೇ ಆಸ್ತಿ ವಕ್ಪ್ ಮಾಡಲು ಆಗಲ್ಲ ಸಚಿವ ಜಮೀರ್ ಅಹ್ಮದ್ ಲೋಕ್ ಅದಾಲತ್ ಮಾಡಲು ಹೋಗಿ ಮೈಮೇಲು ಹಾಕಿಕೊಂಡಿದ್ದಾರೆ .
ನಾನು ರೈತ ನಾಯಕರನ್ನ ,ಮಾಜಿ ಐಎಸ್ ಅಧಿಕಾರ ಜೊತೆಗೆ ನಾನೇ ಹೋಗುವೆ ಪಹಣಿ ಯಾರ ಹೆಸರಿನಲ್ಲಿ ಇದೆ ಅದನ್ನ ಅವರಿಗೆ ಕೊಡಿಸುವೆ ಎಂದರು. ಇನ್ನು ವಿಜೇಯಂದ್ರ ತಮ್ಮ ನಡುವೆ ಇರುವ ಜಗಳದಲ್ಲಿ ಮುಸ್ಲಿಮ್ಲರನ್ನ ಮಧ್ಯ ತರಬೇಡಿ ಎಂದರು. ಭಾರತೀಯ ಜನತಾ ಪಕ್ಷ ಬಸನಗೌಡ ಪಾಟೀಲ್ ಯತ್ನಾಳ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅವರು ನೋಟಿಸ್ ದಿಂದ ಏನು ಆಗಲ್ಲ ಯತ್ನಾಳ ಬಿಟ್ಟರು ಪಾರ್ಟಿಗೆ ಏನು ಆಗಲ್ಲ ಈ ಹಿಂದೆ ಯಡಿಯೂರಪ್ಪ ಮೇಲೆ ಕ್ರಮ ಆದರೆ ಹಾನಿಯಾಗುತ್ತದೆ ಇದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಎಂದರು.
ಜನಜಾಗೃತಿ ದಿಂದ ದೊಡ್ಡ ಸಮ್ಮೇಳನ್ನ ಬಿಜೆಪಿ ಅವರು ಮಾಡಲು ಹೊರಟಿದ್ದು ಏನು ಉಪಯೋಗ ಇಲ್ಲ ಇದೇ ಜಾಗೃತಿಯನ್ನ ಮಹದಾಯಿಗಾಗಿ ಮಾಡಿ ಎಂದರು.