ನಮ್ಮ ಮೇಲೆ ಶನಿಕೃಪೆ ಇರಬೇಕು. ಶನಿಯಿಂದ ನಮಗೆ ಏನೂ ತೊಂದರೆ ಆಗಬಾರದು. ಶನಿಯನ್ನು ತೃಪ್ತನಾಗಿಸಬೇಕು ಅಂದ್ರೆ ಶನಿ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಬೇಕು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವು. ಇಂದು ನಾವು ನಿಮಗೆ, ಯಾಕೆ ಶನಿದೇವನಿಗೆ ಎಳ್ಳೆಣ್ಣೆ ನೀಡಬೇಕು. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒಮ್ಮೆ ಆಂಜನೇಯ ರಾಮನನ್ನು ಧ್ಯಾನ ಮಾಡುತ್ತ ಕುಳಿತಿದ್ದಾಗ, ಆ ಸ್ಥಳಕ್ಕೆ ಶನಿದೇವ ಬಂದು, ದೇವರೆಲ್ಲ ದೇವಲೋಕದಲ್ಲಿರಬೇಕು. ಭೂಮಿಯ ಮೇಲೆ ಯಾರೇ ಇದ್ದರೂ ಅವರ ಮೇಲೆ ನಾನು ಪ್ರಭಾವ ಬೀರುತ್ತೇನೆ. ಇಂದು ನೀವು ಭೂಲೋಕದ ಮೇಲಿದ್ದೀರಿ. ಹಾಗಾಗಿ ನಾನೀಗ ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆ ಎನ್ನುತ್ತಾನೆ.
ಶನಿದೇವನ ಮಾತು ಕೇಳಿ ಉತ್ತರಿಸಿದ ಆಂಜನೇಯ, ನಾನು ರಾಮಭಕ್ತ. ಈ ಭೂಮಿಯಲ್ಲಿ ಯಾರು ರಾಮನನ್ನು ಸ್ಮರಿಸುತ್ತಾರೋ, ಅವರ ಮೇಲೆ ಯಾರ ಪ್ರಭಾವವೂ ಬೀರುವುದಿಲ್ಲ. ನನ್ನ ಮೇಲೆ ನನ್ನ ಶ್ರೀರಾಮನನ್ನು ಬಿಟ್ಟು ಬೇರೆ ಯಾರ ಪ್ರಭಾವವೂ ಬೀರುವುದಿಲ್ಲವೆಂದು ಹೇಳುತ್ತಾನೆ.
ಹೀಗೆ ಇಬ್ಬರ ಮಾತುಕತೆ ಮುಂದುವರಿಯುತ್ತದೆ. ಆಗ ಹನುಮಂತ, ಆಯಿತು ನೀವು ನನ್ನ ಮೇಲೆ ಪ್ರಭಾವ ಬೀರಬಹುದು. ಆದರೆ ನೀವು ನನ್ನ ದೇಹದ ಯಾವ ಭಾಗದ ಮೇಲೆ ಕುಳಿತುಕೊಳ್ಳುವಿರಿ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಶನಿದೇವ, ಮೊದಲು 2ವರೆ ವರ್ಷ, ಮನುಷ್ಯನ ತಲೆಯ ಮೇಲೆ ಕುಳಿತು, ಆತನ ಮಾನಸಿಕ ನೆಮ್ಮದಿ ಹಾಳು ಮಾಡುತ್ತೇನೆ. ನಂತರ 2ವರೆ ವರುಷ, ಆತನ ಉದರದಲ್ಲಿ ಕುಳಿತು, ಮನುಷ್ಯನ ಆರೋಗ್ಯ ಹಾಳು ಮಾಡುತ್ತೇನೆ. ನಂತರ 2 ವರ್ಷ ಆತನ ಕಾಲಿನಲ್ಲಿ ಕುಳಿತು, ಆತನನ್ನು ಅಲೆದಾಡಿಸುತ್ತೇನೆ ಎನ್ನುತ್ತಾನೆ.
ಸರಿ ಎಂದು ತನ್ನ ಮೇಲೆ ಕುಳಿತುಕೊಳ್ಳಲು ಶನಿಗೆ ಆಂಜನೇಯ ಅನುಮತಿ ಸೂಚಿಸುತ್ತಾನೆ. ಶನಿ ಹನುಮನ ತಲೆಯ ಮೇಲೆ ಕುಳಿತಾಗ, ಹನುಮನಿಗೆ ತಲೆ ಕೆರೆಯಲು ಶುರುವಾಗುತ್ತದೆ. ಆತ ಒಂದು ಬೆಟ್ಟವನ್ನು ತೆಗೆದು ತನ್ನ ತಲೆಯ ಮೇಲೆ ಇರಿಸಿಕೊಳ್ಳುತ್ತಾನೆ. ಆಗ ಶನಿಗೆ ಬೆಟ್ಟದ ಒತ್ತಡ ತಡೆದುಕೊಳ್ಳಲಾಗುವುದಿಲ್ಲ. ಹೀಗೆ ಹನುಮ ಮೂರು ಮೂರು ಬೆಟ್ಟವನ್ನು ತಲೆಯ ಮೇಲಿರಿಸಿಕೊಳ್ಳುತ್ತಾನೆ.
ಆಗ ಹನುಮನ ಶಕ್ತಿ ಎಂಥದ್ದು ಎಂದು ಶನಿಗೆ ಅರಿವಾಗುತದೆ. ತನ್ನ ತಪ್ಪಿಗೆ ಕ್ಷಮೆ ಕೇಳಿದ ಶನಿ, ಹನುಮನ ತಲೆಯಿಂದ ಇಳಿದುಬಿಡುತ್ತಾನೆ. ಆಗ ಹನುಮ, ನೀನು ನನ್ನನ್ನು, ಶ್ರೀರಾಮನನ್ನು ಸ್ಮರಿಸುವ ಮನುಷ್ಯನ ಬಳಿ ಹೋಗಬಾರದು. ಅವರಿಗೆ ತೊಂದರೆ ಕೊಡಬಾರದು. ನಿನ್ನ ನೋವಿಗೆ ಪರಿಹಾರವೆಂಬಂತೆ ತೆಗೆದುಕೊ ಈ ಎಳ್ಳೆಣ್ಣೆ ಹಚ್ಚಿಕೋ ಎಂದು ಹೇಳುತ್ತಾನೆ.
ಎಳ್ಳೆಣ್ಣೆಯಿಂದ ಶನಿದೇವನ ದೇಹದ ನೋವು ಶಮನವಾಗುತ್ತದೆ. ಆದ್ದರಿಂದಲೇ ಶನಿದೇವನಿಗೆ ಯಾರು ಎಳ್ಳೆಣ್ಣೆ ದಾನ ಮಾಡುತ್ತಾರೋ, ಅವರ ಮೇಲೆ ಶನಿದೇವನ ಕೃಪೆ ಇರುತ್ತದೆ. ರಾಮನಾಮ ಜಪ, ಹನುಮಾನ್ ಚಾಲೀಸಾ ಹೇಳುವುದರಿಂದಲೂ ಅಂಥವರಿಗೆ ಶನಿದೇವ ತೊಂದರೆ ನೀಡುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754