Sunday, September 8, 2024

Latest Posts

ಯಾಕೆ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಗನನ್ನು ಮಾರಿದ…? ಅಂಥಾದ್ದೇನಾಗಿತ್ತು..?- ಭಾಗ 1

- Advertisement -

ಯಾರಾದರೂ ನಾನು ಇಲ್ಲಿತನಕಾ ಸುಳ್ಳೇ ಹೇಳಲಿಲ್ಲಾ ಅಂತಾ ಹೇಳಿದ್ರೆ, ಅಥವಾ ನಾನು ಯಾವಾಗಲೂ ಸತ್ಯಾನೇ ಮಾತಾಡ್ತೀನಿ ಅಂತಾ ಹೇಳಿದ್ರೆ, ಅಂಥವರಿಗೆ ಹೌದೌದು ನೀನು ಸತ್ಯ ಹರಿಶ್ಚಂದ್ರನ ಮೊಮ್ಮಗ ನೋಡು ಅಂತಾ ಹೇಳ್ತಾರೆ. ಯಾಕಂದ್ರೆ ಹರಿಶ್ಚಂದ್ರ ತನ್ನ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಿದವನೇ ಅಲ್ಲ. ಆತ ಎಂಥ ಕಷ್ಟ ಬಂದರೂ ಸತ್ಯವಂತನಾಗಿದ್ದ. ಆದರೆ ಅವನ ಸತ್ಯ ಹೇಳುವ ಉತ್ತಮ ಬುದ್ಧಿಯಿಂದಾಗಿಯೇ ಅವನ ಹೆಂಡತಿ ಮತ್ತು ಮಗನನ್ನು ಮಾರುವ ಪರಿಸ್ಥಿತಿ ಎದುರಾಗಿತ್ತು. ಹಾಗಾದ್ರೆ ಯಾಕೆ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಗನನ್ನು ಮಾರಿದ…? ಅಂಥಾದ್ದೇನಾಗಿತ್ತು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ರಘು ಕುಲ, ರಘುವಂಶಸ್ಥರಲ್ಲಿ ಮೊಟ್ಟ ಮೊದಲನೇಯದಾಗಿ ಬರುವವನು ಶ್ರೀರಾಮ. ಶ್ರೀರಾಮ ತಾನು ಸತ್ಯವಂತನೆಂದು ಸಾಬೀತು ಮಾಡಲು, ಸೀತೆಯನ್ನೇ ಕಾಡಿಗೆ ಕಳುಹಿಸಿದ. ಇನ್ನು ಎರಡನೇಯದಾಗಿ ಸತ್ಯ ಹರಿಶ್ಚಂದ್ರ. ಈತನೂ ಕೂಡ ತನ್ನ ಸತ್ಯವಂತಿಕೆಗೆ ಬದಲಾಗಿ, ಪತ್ನಿ ಮತ್ತು ಮಗನನ್ನು ಮಾರುವ ಸ್ಥಿತಿ ತಂದುಕೊಂಡ.

ತ್ರೇತಾಯುಗದಲ್ಲಿದ್ದ ಸತ್ಯ ಹರಿಶ್ಚಂದ್ರ, ಸಾಮಾನ್ಯ ಮನುಷ್ಯನೇನಾಗಿರಲಿಲ್ಲ. ಈತ ರಾಜನಾಗಿದ್ದ. ಈತನನ್ನು ರಾಜಾ ಹರಿಶ್ಚಂದ್ರ ಅಂತಾ ಕರೆಯುತ್ತಿದ್ದರು. ಹರಿಶ್ಚಂದ್ರ ರಾಜನಾಗಿದ್ದಾಗ, ಒಮ್ಮೆ ಕಾಡಿಗೆ ಬೇಟೆಗೆಂದು ಹೋದ. ಅಲ್ಲಿ ಕಾರಣಾಂತರದಿಂದ ವಿಶ್ವಾಮಿತ್ರನ ತಪಸ್ಸು, ಹರಿಶ್ಚಂದ್ರನಿಂದ ಹಾಳಾಯಿತು. ಆದರೆ ವಿಶ್ವಾಮಿತ್ರರಿಗೆ ಇದು ಹರಿಶ್ಚಂದ್ರನ ತಪ್ಪಲ್ಲ, ವಿಘ್ನರಾಜನ ತಪ್ಪೆಂದು ತಿಳಿಯಿತು.

ಆದರೆ, ತನ್ನ ತಪಸ್ಸು ಹಾಳಾಯಿತು. ಇದಕ್ಕಾಗಿ ನೀನು ಬೆಲೆ ತೆರಬೇಕು. ನಾನು ಕೇಳಿದನ್ನ ನೀನು ಕೊಡಬೇಕು ಎಂದು ಹರಿಶ್ಚಂದ್ರನಲ್ಲಿ ವಿಶ್ವಾಮಿತ್ರರು ಕೇಳುತ್ತಾರೆ. ಅದಕ್ಕೆ ಒಪ್ಪಿದ ಹರಿಶ್ಚಂದ್ರ, ತಾನು ಋಷಿಗಳಿಗಾಗಿ ಕೆಲ ಸಂಪತ್ತನನ್ನು ನೀಡುತ್ತೇನೆಂದು ಹೇಳುತ್ತಾನೆ. ಆದ್ರೆ ಅದಕ್ಕೆ ಒಪ್ಪದ ಮುನಿಗಳು, ನನಗೆ ನಿನ್ನ ಇಡೀ ಸಂಪತ್ತು ಬೇಕೆಂದು ಹೇಳುತ್ತಾರೆ. ಇದಕ್ಕೆ ಒಪ್ಪಿದ ಹರಿಶ್ಚಂದ್ರ, ತನ್ನ ದೇಹ ಮತ್ತು ಪತ್ನಿ , ಮಗನನ್ನು ಬಿಟ್ಟು, ತನ್ನಲ್ಲಿರುವ ಎಲ್ಲವನ್ನೂ ವಿಶ್ವಾಮಿತ್ರರಿಗೆ ನೀಡುತ್ತಾನೆ.

ಇದಾದ ಬಳಿಕ ಬರೀಗೈಯಲ್ಲಿದ್ದ ಹರಿಶ್ಚಂದ್ರ, ಪತ್ನಿ- ಮಗನೊಡನೆ ಹೊರಟಾಗ, ವಿಶ್ವಾಮಿತ್ರರು ಎದುರಾಗುತ್ತಾರೆ. ಆಗಲೂ ವಿಶ್ವಾಮಿತ್ರರು, ತನಗೆ ಇನ್ನೂ ಸಂಪತ್ತು ಬೇಕೆಂದು ಕೇಳುತ್ತಾರೆ. ಆಗ ಹರಿಶ್ಚಂದ್ರನ ಬಳಿ ಏನೂ ಇರುವುದಿಲ್ಲ, ತನಗೆ ಕೆಲ ಕಾಲ ಸಮಯ ಕೊಡಿ ಎಂದು ಕೇಳುತ್ತಾನೆ. ಇದಾದ ಬಳಿಕ ರಾಜ ವಾರಣಾಸಿಗೆ ತೆರಳುತ್ತಾನೆ. ಅಲ್ಲೂ ಕೂಡ ಬಂದ ವಿಶ್ವಾಮಿತ್ರರು, ತನಗೆ ರಾಜಸೂಯ ಯಜ್ಞ ಮಾಡಲು ಹಣ ನೀಡುವುದು ಯಾವಾಗೆಂದು ಕೇಳುತ್ತಾರೆ. ತನಗೆ ಸೂರ್ಯಾಸ್ತದ ಮುನ್ನ ಹಣ ಸಿಗದಿದ್ದಲ್ಲಿ, ನಿನಗೆ ನಾನು ಶಾಪ ಹಾಕುತ್ತೇನೆ ಎನ್ನುತ್ತಾರೆ.

 ಆಗ ಹರಿಶ್ಚಂದ್ರನ ಪತ್ನಿ ತನನ್ನು ಮಾರಿ, ಶಾಪದಿಂದ ಮುಕ್ತಿ ಪಡೆ ಎನ್ನುತ್ತಾಳೆ. ಹರಿಶ್ಚಂದ್ರ ತನ್ನ ಪತ್ನಿ ಮತ್ತು ಮಗನನ್ನು ಓರ್ವ ಶ್ರೀಮಂತನಿಗೆ ಮನೆ ಕೆಲಸ ಮಾಡಿಕೊಂಡಿರಲು ಮಾರುತ್ತಾನೆ.. ಅದರಿಂದ ಬಂದ ಹಣವನ್ನು ವಿಶ್ವಾಮಿತ್ರರಿಗೆ ನೀಡುತ್ತಾನೆ. ಆದರೂ ವಿಶ್ವಾಮಿತ್ರರಿಗೆ ಸಾಕಾಗುವುದಿಲ್ಲ. ಮತ್ತೂ ಹಣ ಬೇಕೆನ್ನುತ್ತಾರೆ. ಇದಕ್ಕೆ ಹರಿಶ್ಚಂದ್ರ ಏನು ಮಾಡುತ್ತಾನೆ..? ಹರಿಶ್ಚಂದ್ರ ತನ್ನ ಪತ್ನಿ ಮತ್ತು ಮಗನನ್ನು ಹಿಂದಿರುಗಿ ಪಡೆಯುತ್ತಾನಾ..? ಹರಿಶ್ಚಂದ್ರನಿಗೆ ರಾಜನ ಪಟ್ಟ ಮತ್ತೆ ಸಿಗುತ್ತದಾ ಇಲ್ಲವಾ..? ಇದೆಲ್ಲದ ಬಗ್ಗೆ ಮುಂದಿನ ಕಥೆಯಲ್ಲಿ ತಿಳಿಯೋಣ…

- Advertisement -

Latest Posts

Don't Miss