ಕೈಲಾಸ ವಾಸಿ ಶಿವನ ಅವತಾರಕ್ಕೆ ಮನಸೋಲದವರೇ ಇಲ್ಲ. ಶಿವನು ಅತ್ಯಂತ ಸುಂದರನೂ, ಶಕ್ತಿಶಾಲಿಯೂ, ಶಾಂತಸ್ವರೂಪಿಯೂ ಆಗಿದ್ದಾನೆ. ಇಂಥ ಶಿವ ಹಣೆಗೆ ವಿಭೂತಿ ಇಡಲು ಕಾರಣವೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಾರ್ತಿಕೇಯನಿಂದ ತಾರಕಾಸುರ ಸಂಹಾರನಾದ. ಈ ಸಾವಿನ ನಂತರ ತಾರಕಾಸುರನ ಮೂವರು ಮಕ್ಕಳಾದ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಬ್ರಹ್ಮ ಏನು ವರ ಬೇಕೆಂದು ಕೇಳಿದ. ಅದಕ್ಕೆ ಉತ್ತರಿಸಿದ ತಾರಕಾಸುರನ ಪುತ್ರರು, ನಮಗೆ ಉಳಿದುಕೊಳ್ಳಲು ಒಂದು ನಗರವನ್ನು ಸೃಷ್ಟಿಸಬೇಕು. ಅದು ಶಾಶ್ವತವಾಗಿರಬೇಕು ಎಂದು ಕೇಳಿದರು.
ಅದಕ್ಕೆ ನಿರಾಕರಿಸಿದ ಬ್ರಹ್ಮ, ಈ ಲೋಕದಲ್ಲಿ ಯಾವುದು ಶಾಶ್ವತವಲ್ಲ ಎನ್ನುತ್ತಾನೆ. ಆಗ ಮೂವರು ರಾಕ್ಷಸರು ಆಯಿತು ನಾವೇ ಮೂರು ನಗರವನ್ನು ನಿರ್ಮಿಸಿಕೊಳ್ಳುತ್ತೇವೆ. ಆ ನಗರವು ಒಂದೇ ಅಳತೆಯಲ್ಲಿ ಬಂದರೆ ಮಾತ್ರ, ಅದನ್ನ ಯಾರಾದರೂ ಧ್ವಂಸ ಮಾಡಬಹುದು. ನಮ್ಮ ಬಳಿ ಯುದ್ಧಕ್ಕೆ ಬರಬಹುದು. ಆದರೆ ಆ ಮೂರು ನಗರ ನೇರವಾಗಿರದಿದ್ದಲ್ಲಿ ಅಲ್ಲಿ ಯಾರೂ ಸುಳಿಯುವಂತಿಲ್ಲ ಎನ್ನುತ್ತಾರೆ. ಇದಕ್ಕೆ ಒಪ್ಪಿದ ಬ್ರಹ್ಮ ತಥಾಸ್ತು ಎನ್ನುತ್ತಾನೆ.
ತಮ್ಮನ್ನು ಯಾರೂ ಮುಟ್ಟಲಾರರು ಎಂಬ ಗರ್ವದಿಂದ ಮೂವರು ರಾಕ್ಷಸರು, ಮೂರು ನಗರವನ್ನು ಬೇರೆ ಬೇರೆ ದಿಕ್ಕಿನಲ್ಲಿ ನಿರ್ಮಿಸಿಕೊಂಡು ಹಾಯಾಗಿದ್ದರು. ಈ ನಗರಕ್ಕೆ ತ್ರಿಪುರ ಎಂದು ಹೆಸರಿಡಲಾಗಿತ್ತು. ಈ ನಗರಗಳು ಚಲಿಸುತ್ತಿದ್ದವು. ಒಮ್ಮೆ ಈ ನಗರವನ್ನು ನಿರ್ಮಿಸಿದ್ದ ಮಾಯಾವಿಗೆ ತ್ರಿಪುರ ನಾಶವಾದಂಥ ಕನಸು ಬಿತ್ತು.
ಅವನು ಮೂವರು ರಾಕ್ಷಸರ ಬಳಿ ಬಂದು, ತನಗೆ ಈ ರೀತಿಯ ಕನಸು ಬಿದ್ದಿದ್ದು, ನಿಮ್ಮ ತ್ರಿಪುರಾ ನಗರಕ್ಕೆ ಕಂಠಕ ಬರುವ ಸಾಧ್ಯತೆ ಇದೆ ಎಂದನು. ಮಾಯಾವಿಯ ಮಾತು ಕೇಳಿದ ರಾಕ್ಷಸರು ದೇವಲೋಕದ ಮೇಲೆ ದಾಳಿ ಮಾಡಿದರು, ದೇವತೆಗಳು ಆದಷ್ಟು ಹೋರಾಡಿ, ಬಳಿಕ ಶಿವನಲ್ಲಿ ಬಂದು ತಮ್ಮನ್ನು ಕಾಪಾಡುವಂತೆ ಹೇಳಿದರು.
ಶಿವ ದೇವತೆಗಳನ್ನು ರಕ್ಷಿಸಲು ಮುಂದಾದ, ಹಲವು ದಿನಗಳ ಕಾಲ ದೇವತೆಗಳು ರಾಕ್ಷಸರ ಬಳಿ ಹೋರಾಡಿದರು. ತ್ರಿಪುರ ನೇರವಾಗುವ ಸಮಯ ಬಂದಿತು. ಮೂರು ನಗರಗಳು ನೇರವಾದಾಗಾ, ಶಿವ ತನ್ನ ಬಾಣದಿಂದ ತ್ರಿಪುರವನ್ನು ಸುಟ್ಟು ಭಸ್ಮ ಮಾಡಿದ. ಆ ಮೂರು ನಗರಗಳ ಬುದಿಯನ್ನ ತನ್ನ ಹಣೆಗೆ ಹಚ್ಚಿದ. ಅಂದಿನಿಂದ ಶಿವ ಮತ್ತು ಶಿವನ ಭಕ್ತರು ವಿಭೂತಿ ಹಚ್ಚಲು ಶುರು ಮಾಡಿದರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ