Saturday, July 27, 2024

Latest Posts

ಫಲಿಸಿದ ಪ್ರಯತ್ನ! ಸವಣೂರು ದೊಡ್ಡಹುಣಸೆ ಮರಕ್ಕೆ ಮರುಜೀವ

- Advertisement -

Haveri News: ಹಾವೇರಿ: ಕಳೆದ ಐದು ತಿಂಗಳ ಹಿಂದೆ ಫಂಗಸ್ ಕಾರಣದಿಂದ ಧರೆಗೆ ಉರುಳಿದ್ದ ಹುಣಸೆಮರಕ್ಕೆ ಜೀವಕಳೆ ಮರಳಿದೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ದೊಡ್ಡಹುಣಸೆ ಕಲ್ಮಠದಲ್ಲಿಯ ಐತಿಹಾಸಿಕ ಹುಣಸೆ ಮರವೊಂದು ಇದೀಗ ಚಿಗುರೊಡೆದು ಸದ್ದು ಮಾಡುತ್ತಿದೆ. ನೆಲಸಮವಾಗಿದ್ದ ಮರವನ್ನು ಮತ್ತೆ ರೀ ಪ್ಲ್ಯಾಂಟ್ ಮಾಡಿದ್ದ ಅರಣ್ಯಾಧಿಕಾರಿಗಳ ಪ್ರಯತ್ನ ಫಲಿಸಿದೆ.

25 ಲಕ್ಷದಲ್ಲಿ ರೀ ಪ್ಲಾಂಟ್
ಜುಲೈ 7 ರಂದು ಬಿದ್ದಿದ್ದ ಸವಣೂರು ದೊಡ್ಡಹುಣಸೆ ಮರವನ್ನು ಜುಲೈ 13 ರಂದು ಅರಣ್ಯಾಧಿಕಾರಿಗಳು ಬರೋಬ್ಬರಿ 25 ಲಕ್ಷ ಖರ್ಚು ಮಾಡಿ ರೀ ಪ್ಲ್ಯಾಂಟ್ ಮಾಡಿ ನಿಲ್ಲಿಸಿದ್ದರು.

ಆದರೂ ಮರ ಮತ್ತೆ ಚಿಗುರುವ ನಂಬಿಕೆ ಇರಲಿಲ್ಲ. ಇದೀಗ ಐತಿಹಾಸಿಕ ಮಹತ್ವದ ಮರ ಸಂಪೂರ್ಣ ಚಿಗುರೊಡೆದು ಬೆಳೆಯುತ್ತಿರುವುದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ.

ಬಿದ್ದ ಮರವನ್ನು ಮತ್ತೆ ನಿಲ್ಲಿಸಿದ್ದು ಹೇಗೆ?

ಬಿದ್ದ ಮರವನ್ನು ಮತ್ತೆ ನಿಲ್ಲಿಸಿದಾಗ ರೂಟ್ ಇಂಡಿಯೋಜಿಂಗ್ ಹಾರ್ಮೊನ್ ಸಿಂಪಡಿಸಿ, ಕ್ಲೊರೊಪೈಡ್, ವರ್ಮಿಕಾಂಪೆಕ್ಸ್ ಎಂಬ ರಾಸಾಯನಿಕ ಸಿಂಪಡಣೆ ಮಾಡಿ ಮರದ ಬೇರು ಹಾಳಾಗಿ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಒಟ್ಟಾರೆ ಐತಿಹಾಸಿಕ ಹಿನ್ನೆಲೆಯ ಮರಕ್ಕೆ ಮರುಜೀವ ಬಂದಿರುವ ಕಾರಣ ಮಠದ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಸೇರಿದಂತೆ ಭಕ್ತರು ಮರದ ಬಳಿ ನಿಂತು ಹರ್ಷ ವ್ಯಕ್ತಪಡಿಸಿದ್ದಾರೆ.

ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಪ್ರದರ್ಶನ: ಸಚಿವರ ಅಸಮಾಧಾನ

ಅಧಿಕಾರಿ ವಿರುದ್ಧ ಗರಂ ಆದ ಸಂಸದ ವೈ.ದೇವೇಂದ್ರಪ್ಪ

ಹಿರಿಯ ನಟಿ ಲೀಲಾವತಿ ನಿರ್ಮಾಣದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss