ಸಿನಿಮಾ ಸುದ್ದಿ: ಅಭಿಮಾನಿಗಳಿಗೆ ಸಿನಿಮಾ ನಟರೆಂದರೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಅವರು ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಅವರು ಎಂತಹ ಸಾಹಸಕ್ಕೆ ಬೇಕಾದರೂ ಸಿದ್ದರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಿಚ್ಚನ ಅಭಿಮಾನಿ ವಿಭಿನ್ನವಾದ ರೀತಿಯಲ್ಲಿ ಆಭಿಮಾನ ವ್ಯಕ್ತಪಡಿಸಿದ್ದಾಳೆ.
ಕಿಚ್ಚ ಸುದೀಪ್ ಕನ್ನಡದ ಹೆಮ್ಮೆ . ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸಾಕಷ್ಟು ಜನರ ಅಭಿಮಾನಿಗಳನ್ನು ಸಂಪಾಧಿಸಿಕೊಂಡಿದ್ದಾರೆ. ಅವರನ್ನು ಹಿಂಬಾಲಿಸುವ ಕೋಟ್ಯಂತರ ಮಂದಿ ಇದ್ದಾರೆ. ಅದೇ ರೀತಿ ಅನೇಕರು ಅವರ ಮೇಲೆ ಇರುವ ಅಭಿಮಾನಿವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
ವೈಷ್ಣವಿ ದೀಪು ಶಿವಮೊಗ್ಗ ರವರು ನಮ್ಮ ಕಿಚ್ಚ ಸುದೀಪ್ ಅಣ್ಣನಿಗಾಗಿ ಅವರ ರಕ್ತದಲ್ಲಿ ಅಣ್ಣನ ಚಿತ್ರವನ್ನು ಬಿಡಿಸಿದ್ದಾರೆ. ರಕ್ತ ಮೊಟ್ಟೆ ಮಾಂಸವನ್ನು ನೋಡದೆ ಇರುವ ಇವರು ನಿಜಕ್ಕೂ ಗ್ರೇಟ್ ಇವರ ರಕ್ತ ನೀಡಿ ಚಿತ್ರ ಬಿಡಿಸಲು ಸಹಾಯ ಆಗಿರುವುದು.@KicchaSudeep @KicchaSudeep @iampriya06 #Kiccha #KicchaBOSS #Kiccha46 pic.twitter.com/tt14R4tJ1J
— NELAMANGALA TALUK KSSS ® (@NKSSSOFFICIAL) July 27, 2023
ಶಿವಮೊಗ್ಗದ ವೈಷ್ಣವಿ ಅವರು ತಮ್ಮದೇ ರಕ್ತದಲ್ಲಿ ಸುದೀಪ್ ಅವರ ಫೋಟೋನ ಬಿಡಿಸಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಕೂಡ ಇದನ್ನು ರೀಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದಾಳೆ. ಇನ್ನು ಕೆಲವರುರಕ್ತ ಅತ್ಯಮೂಲ್ಯವಾದುದ್ದು. ಅದನ್ನು ಈ ರೀತಿ ಅಭಿಮಾನ ತೋರಿಸಲು ಬಳಕೆ ಮಾಡುವುದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಈ ರೀತಿ ಅಭಿಮಾನ ತೋರಿದ ಫ್ಯಾನ್ಸ್ಗೆ ಕೆಲ ಸ್ಟಾರ್ಗಳು ತಿಳಿ ಹೇಳಿದ್ದಿದೆ.
School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ