Friday, April 18, 2025

Latest Posts

ಸುದೀಪ್ ಕಾಂಗ್ರೆಸ್ ಗೆ ಎಂಟ್ರೀ..?!MLA ಆಗ್ತಾರಾ ರಂಗ SSLC..?!

- Advertisement -

Film News:

 ಕನ್ನಡದ ಕೀರ್ತಿಯನ್ನು ನಟನೆ ನಿರೂಪಣೆ ಮೂಲಕ  ಮತ್ತಷ್ಟು  ಇಮ್ಮಡಿ ಗೊಳಿಸಿದ ನಟ ಇವರು. ಸ್ಪರ್ಷ ಮೂಲಕ ಕನ್ನಡಿಗರ ಮನಗೆದ್ದು  ಕರುನಾಡಿನ ಪ್ರೀತಿಯ ಕಿಚ್ಚನಾಗಿ ಇಂದು ಬಹುಭಾಷಾ  ನಟನಾಗಿ ಬೆಳೆದು ನಿಂತಿರೋ  ಆರಡಿ ಕಟೌಟ್  ಕಿಚ್ಚ ಸುದೀಪ್. ಇದೀಗ ಸ್ಯಾಂಡಲ್ ವುಡ್  ನಲ್ಲಿ ಮತ್ತೆ ಸುದ್ದಿ ಮಾಡುತ್ತಿದ್ದಾರೆ ರನ್ನ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ರಾಜಕೀಯ ರಂಗದಲ್ಲೂ  ರಂಗ ಎಸ್ ಎಸ್ ಎಲ್ ಸಿ ದೇ ಸುದ್ದಿ.

ಹೌದು ಕಿಚ್ಚ ಸುದೀಪ್  ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಇತ್ತೀಚೆಗೆ ವಿಕ್ರಾಂತ್  ರೋಣನಾಗಿ ಅಬ್ಬರಿಸಿದ ಆರಡಿ ಕಟೌಟ್ .ಪ್ರಶಸ್ತಿಗಳ  ಮೇಲೆ ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡದ  ಬಾದ್ ಶಾ..ಇದೀಗ  ರಾಜಕೀಯಕ್ಕೆ ಎಂಟ್ರಿ ಕೊಡೋ ಸುಳಿವು ಕೊಟ್ಟಿದ್ದಾರೆ.

ಬಿಗ್ ಬಾಸ್ ನಿರೂಪಣೆಯಲ್ಲೂ ಸೈ ಎನಿಸಿಕೊಂಡ ಕಿಚ್ಚನಿಗೆ ತನ್ನ ಸಹ ನಟಿಯಿಂದಲೇ ರಾಜಕೀಯ ಎಂಟ್ರಿಗೆ ಆಹ್ವಾನ ಬಂದಿತ್ತಂತೆ. ಅದು  ಬೇರೆ ಯಾರೂ ಅಲ್ಲ ಮಾಜಿ ಸಂಸದೆ ಕನ್ನಡದ ಮೋಹಕ ತಾರೆ ರಮ್ಯಾ ಹೌದು ಇತ್ತೀಚೆಗಷ್ಟೇ ಸುದೀಪ್ ಮನೆಗೆ ಭೇಟಿ ನೀಡಿದ್ದ ರಮ್ಯಾ ಜಸ್ಟ್ ಮಾತ್ ಮಾತಲ್ಲೇ ಈ ಬಿನ್ನಹವೊಂದನ್ನು ಸುದೀಪ್ ಮುಂದಿಟ್ಟಿದ್ದರಂತೆ. ಇನ್ನು ರಮ್ಯಾ ಜೊತೆಗೆ  ರಾಹುಲ್ ಗಾಂಧಿ ಆಪ್ತರೂ ಕೂಡಾ ಕಾಂಗ್ರೆಸ್ ಪಕ್ಷ ಸೇರುವಂತೆ ಮನವೊಲಿಸಿದ್ರಂತೆ. ಅಷ್ಟೇ ಅಲ್ಲದೆ ಶಿವಮೊಗ್ಗ ಚಿತ್ರದುರ್ಗದಿಂದಲೇ ಸ್ಪರ್ಧೇ ನಡೆಸುವಂತೆ ಯೋಜನೆ ಕೂಡಾ ಮಾಡಲಾಗಿದೆಯಂತೆ. ಹೀಗಾಗಿ ಸದ್ಯ ರಾಜ್ಯ ಸಿನಿರಂಗದಲ್ಲಿ ಮಾತ್ರವಲ್ಲ  ರಾಜಕೀಯ ರಣರಂಗದಲ್ಲೂ ಸುದೀಪ್ ಬಗ್ಗೆ ಮಾತು ಕೇಳಿ ಬರುತ್ತಿದೆ.

ಒಟ್ಟಾರೆ ಒಂದೆಡೆ ಸುದೀಪ್ ರಾಜಕೀಯ ಸೇರುತ್ತಾರಾ ಎಂಬ ಚರ್ಚೆ ಶುರುವಾಗಿದ್ರೆ ಮತ್ತೊಂದೆಡೆ ಎಸ್ ಸಮುದಾಯವನ್ನು ಓಲೈಸುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆಯೇ ಎಂಬುವುದೇ ಬಹಳಷ್ಟು ಕುತೂಹಲ ಮೂಡಿಸುತ್ತಿದೆ. ಒಟ್ಟಾರೆ ಸುದೀಪ್ ಉತ್ತರಕ್ಕಾಗಿ ಕರುನಾಡೇ ಕಾದು ಕುಳಿತಿದೆ.

ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಕಾಂತಾರ ಚಿತ್ರ ನಾಮ ನಿರ್ದೇಶನ…!

ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಗರಡಿ ಸಿನಿಮಾ

ವಿನಯ್ ‘ದಿ’ ಸಿನಿಮಾಗೆ ಸಿಂಪಲ್ ಸುನಿ ಸಾಥ್- ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಕೆ

- Advertisement -

Latest Posts

Don't Miss