Saturday, September 21, 2024

Latest Posts

ಶುಗರ್ ಬಂದ್ರೆ ಕಿಡ್ನಿ ಫೇಲ್ ಆಗುತ್ತಾ? ಕಿಡ್ನಿ ವೈಫಲ್ಯ ಗೊತ್ತಾಗೋದು ಹೇಗೆ?

- Advertisement -

Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಶುಗ್ರ ಬರುತ್ತಿರುವುದು ಕಾಮನ್ ಆಗಿದೆ. ಆದರೆ ಶುಗರ್ ಬಂದಾಗ, ಆಹಾರ ಸೇವಿಸುವ ಆಸೆಯನ್ನು ಕಂಟ್ರೋಲ್ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಾದ್ರೆ ಶುಗರ್ ಬಂದಾಗ, ಕಿಡ್ನಿ ಫೇಲ್ ಆಗುತ್ತಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.

ಭಾರತದಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಜನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಭಯಾನಕ ಸತ್ಯವನ್ನ ವೈದ್ಯರೇ ಹೇಳಿದ್ದಾರೆ. ಏಕೆಂದರೆ, ಪ್ರತೀ ವರ್ಷ, ಶುಗರ್ ಸಮಸ್ಯೆ ಹೆಚ್ಚುತ್ತಿದ್ದು, ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಮತ್ತು ಮಧುಮೇಹ ಬಂದಾಗ, ಕಾಳಜಿ ವಹಿಸದಿದ್ದಲ್ಲಿ ಕಿಡ್ನಿ ಆರೋಗ್ಯ ಬೇಗ ಹಾಳಾಗುತ್ತದೆ. ಹಾಗಾಗಿ ಶುಗರ್ ಬಂದಾಗ, ಸರಿಯಾದ ರೀತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಇನ್ನು ಕಿಡ್ನಿ ಸಮಸ್ಯೆ ಇದೆ ಎಂದಾಗ, ನಾವು ಹೆಚ್ಚು ಹೊತ್ತು ನಿಂತುಕೊಂಡಾಗ, ಕಾಲು ಬಾವು ಬರುತ್ತದೆ. ಊಟ ಸೇರುವುದಿಲ್ಲ. ರಕ್ತದ ಅಂಶ ಕಡಿಮೆಯಾಗುವುದು. ಶಕ್ತಿ ಕಡಿಮೆಯಾಗುವುದು. ಕೆಲಸ ಮಾಡಲು ಚೈತನ್ಯ ಸಾಕಾಗದಿರುವುದು. ಇವೆಲ್ಲವೂ ಕಿಡ್ನಿ ಸಮಸ್ಯೆಯಾಗುತ್ತಿದೆ ಎನ್ನುವುದರ ಲಕ್ಷಣವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss