Thursday, October 16, 2025

Latest Posts

ಸಿನಿಮಾ ನಂಟಿನ ಸುಕೇಶ್ ನೆಚ್ಚಿನ ಐಷಾರಾಮಿ ಕಾರುಗಳ ಹರಾಜು

- Advertisement -

National News: ಬಹುಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ನೆಚ್ಚಿನ ಐಷಾರಾಮಿ ಕಾರುಗಳನ್ನು ಹರಾಜಿಗೆ ಇಟ್ಟಿದ್ದಾರೆ ಐಟಿ ಅಧಿಕಾರಿಗಳು. ನೂರಾರು ಕೋಟಿ ರೂಪಾಯಿ ವಂಚನೆ ಕೇಸಲ್ಲಿ ಬಂಧನ ಆಗಿರೋ ಸುಕೇಶ್ ಚಂದ್ರಶೇಖರ್, ಸದ್ಯ ದೆಹಲಿ ಕಾರಾಗೃಹದಲ್ಲಿದ್ದಾರೆ. ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು.

ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 12 ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಿದ್ದ ಐಟಿ ಅಧಿಕಾರಿಗಳು BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಇದೀಗ ಹರಾಜಿಗೆ (Auction) ಇಟ್ಟಿದ್ದಾರೆ. ನ.28 ರಂದು ಹರಾಜು ಹಾಕಲು ಮುಂದಾಗಿದ್ದು, ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಇದಾಗಿದೆ.

ಈಗ ಕಾರು ಹರಾಜಿನ ಕಾರಣದಿಂದಾಗಿ ಸುದ್ದಿ ಆಗಿರುವ ಸುಕೇಶ್, ಈ ಹಿಂದೆ ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪ್ರೇಮ ಪತ್ರ (Love Letter) ಬರೆಯುವ ಮೂಲಕ ಸುದ್ದಿಯಾಗಿದ್ದ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದ.

ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ. ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದಾನೆ. ಜೊತೆಗೆ ಪ್ರೇಮ ಸಂದೇಶ ಕಳುಹಿಸಿದ್ದಾನೆ.

ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!

ಧಮ್ಮಿದ್ದರೆ RSS ಬ್ಯಾನ್ ಮಾಡಲಿ : ಆರ್. ಅಶೋಕ್ ಸವಾಲ್

ತೆಲಂಗಾಣದಲ್ಲಿ ಸಚಿವ ಸಂತೋಷ್‌ ಲಾಡ್‌ ಬಿರುಸಿನ ಪ್ರಚಾರ

- Advertisement -

Latest Posts

Don't Miss