Tuesday, April 15, 2025

Latest Posts

ಅಭಿಷೇಕ್ ಅಂಬರೀಷ್ ಮದುವೆಗೆ ಆಮಂತ್ರಣ ಕೊಟ್ಟಿದ್ದು ಯಾರ್ಯಾರಿಗೆ ಗೊತ್ತಾ..?

- Advertisement -

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಗ, ನಟ ಅಭಿಷೇಕ್ ಅಂಬರೀಷ್ ಮದುವೆಗೆ ಈಗಾಗಲೇ ಭರ್ಜರಿ ತಯಾರಿ ಶುರುವಾಗಿದೆ. ಗ್ರ್ಯಾಂಡ್ ಆಗಿ ಅಭಿಷೇಕ್- ಅವೀವಾ ಎಂಗೇಜ್‌ಮೆಂಟ್ ಆಗಿದ್ದು, ಇದೀಗ ಮದುವೆ ಆಮಂತ್ರಣ ಪತ್ರಿಕೆ ಹಂಚೋಕ್ಕೆ ಸುಮಲತಾ ರೆಡಿಯಾಗಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಮದುವೆಗೆ ಆಹ್ವಾನಿಸಲಾಗಿದೆ.

ಅದೇ ರೀತಿ ಇನ್ನು ಹಲವು ಕೇಂದ್ರ ಸಚಿವರಿಗೆ ಸುಮಲತಾ ವೆಡ್ಡಿಂಗ್ ಕಾರ್ಡ್ ಹಂಚಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸೇರಿ ಇನ್ನು ಹಲವು ಕೇಂದ್ರ ಸಚಿವರಿಗೆ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಷ್ ಮದುವೆ ಆಮಂತ್ರಣ ಪತ್ರಿಕೆ ಹಂಚಿದ್ದಾರೆ.

ಕಳೆದ ವರ್ಷ ಡಿಸೆಂಬರ್ 11ಕ್ಕೆ ಉದ್ಯಮಿ ಪ್ರಸಾದ್ ಬಿದ್ದಪ್ಪ ಪುತ್ರಿಯಾದ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ನಿಶ್ಚಿತಾರ್ಥವಾಗಿತ್ತು. ಫ್ಯಾಷನ್ ಡಿಸೈನರ್, ಮಾಡೆಲ್ ಆಗಿ ಅವಿವಾ ಬಿದ್ದಪ್ಪ ಗುರುತಿಸಿಕೊಂಡಿದ್ದಾರೆ. ಇದೇ ವರ್ಷ ಜೂನ್ 5ಕ್ಕೆ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿಷೇಕ್- ಅವಿವಾ ಮದುವೆ ನಡೆಯಲಿದ್ದು, ಚಿತ್ರರಂಗದ ಗಣ್ಯರು, ಉದ್ಯಮಿಗಳು, ರಾಜಕಾರಣಿಗಳು ಈ ಶುಭಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

- Advertisement -

Latest Posts

Don't Miss