Tuesday, October 14, 2025

Latest Posts

ಉರಿಗೌಡ- ನಂಜೇಗೌಡ ವಿಚಾರದ ಬಗ್ಗೆ ಸುಮಲತಾ ಹೇಳಿದ್ದಿಷ್ಟು..

- Advertisement -

ಮಂಡ್ಯ : ಮಂಡ್ಯದಲ್ಲಿ ಶಾಲೆ ಉದ್ಘಾಟಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನಗೆ ಮಾಹಿತಿ ಇಲ್ಲದ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಮಂಡ್ಯವನ್ನ ಅಭಿವೃದ್ಧಿ ಮಾಡಿವ ಬಗ್ಗೆ ಮಾತ್ರ ನನ್ನ ಚಿಂತನೆ. ಈ ಬಗ್ಗೆ ಮಾತನಾಡಲು ಬೇರೆ ಬೇರೆ ಎಕ್ಸಪರ್ಟ್ ಇದ್ದಾರೆ ಅವರನ್ನೆ ಕೇಳಿ. ಚುನಾವಣೆ ಸಂದರ್ಭದಲ್ಲಿ ಹೆಚ್ಚು ಕಾಂಟುವರ್ಸಿಯಾಗೋದು ಸಹಜ. ನಾನು ಕಾಮೆಂಟ್ ಮಾಡಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.

ಸ್ವಾಭಿಮಾನ ಹೆಸರು ಬಳಸಬೇಡಿ ಎಂದು ಡಾ. ರವೀಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಮಲತಾ,  ಬಿಜೆಪಿ ಏನು ಇಂಡಿಯಾದಲ್ಲಿ ಇಲ್ವಾ? ಏನು ಪಾಕಿಸ್ತಾನದಲ್ಲಿದ್ಯಾ? ಪಾಕಿಸ್ತಾನದಲ್ಲಿ ಇದ್ಯಾ ಬಿಜೆಪಿ ಅನ್ನೋ ಪಕ್ಷ? 8 ವರ್ಷಗಳಿಂದ ನಮ್ಮ ದೇಶ ಆಳುತ್ತಿರುವ ಪಕ್ಷ. ಎರಡೂನು ರಾಷ್ಟ್ರೀಯ ಪಕ್ಷಗಳೇ. ಒಂದು ಪಕ್ಷಕ್ಕೆ ಹೋದ್ರೆ ಸ್ವಾಭಿಮಾನ, ಇಲ್ಲದಿದ್ರೆ ಇಲ್ವಾ? ಅವರು ಮಾತನಾಡಲಿ ಬಿಡಿ. ನನ್ನ ಬಗ್ಗೆ ಮಾತನಾಡುದ್ರೆ ಮೈಲೆಜ್ ಸಿಗುತ್ತೆ. ಕೆಲವರು ಪಕ್ಷ ಸೇರಿ ಕೊಳ್ಲೋಕ್ಕೆ ಪ್ರಯತ್ನ ಪಡ್ತಿದ್ದಾರೆ.ಅವರಿಗೆಲ್ಲ ಆಲ್ ದಿ ಬೆಸ್ಟ್. ಅಲ್ಲದೇ, ನನ್ನ ಗೆಲ್ಲಿಸೋಕ್ಕೆ 15 ಲಕ್ಷ ಜನ ಶ್ರಮ ಪಟ್ಟಿದ್ದಾರೆ. ಮತ ಹಾಕಿದ್ದಾರೆ.‌ ಯಾರೋ ಒಬ್ಬರು ನನ್ನಿಂದ ಅಂತ ಹೇಳ್ಕೋದು ಸರಿಯಲ್ಲ ಎಂದು ಸುಮಲತಾ ರವೀಂದ್ರ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ..

ಬಿಜೆಪಿಗೆ ಸುಮಲತಾ ಬೆಂಬಲ ನೀಡಿದ್ದಕ್ಕೆ, ಅವರ ಅಭಿಮಾನಿಗಳ ಬೇಸರದ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ಅಭಿಮಾನಿಗಳು ಇಷ್ಟ ಪಡೋದು ಪಕ್ಷ ನೋಡಿ ಅಲ್ಲ. ನಾವು ಯಾವುದೇ ಪಕ್ಷದಲ್ಲಿದ್ರು ಪ್ರೀತಿಸುವ ಅಭಿಮಾನಿಗಳು. ರಾಜಕಾರಣ ಬೆರಸುವುದು ಸರಿಯಲ್ಲ. ಮಂಡ್ಯದಲ್ಲಿ ಬಿಜೆಪಿ ಪರ ಪ್ರಚಾರದ ವಿಚಾರ .ಇದು ಇನ್ನು ತಿರ್ಮಾನ ಆಗಿಲ್ಲ. ಸಂಪೂರ್ಣ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಧರ್ಮೆಂದ್ರ ಅವರು ಎಲೆಕ್ಷನ್ ಉಸ್ತುವಾರಿ ಇದ್ದಾರೆ. ನಮ್ಮ ರಾಜ್ಯಕ್ಕೆ  ಇನ್ನೆರಡು ದಿನ ಕರ್ನಾಟಕಕ್ಕೆ ಬರ್ತಿದ್ದಾರೆ. ಬಂದ ಮೇಲೆ ಚರ್ಚೆ, ನಿರ್ಧಾರ. ಹಳೆ ಮೈಸೂರು ಭಾಗದಲ್ಲಿ ಸುಮಲತಾ ಸಂಚಾರ ನಿರ್ದಿಷ್ಟವಾಗಿ ಪ್ಲಾನ್ ನಡೆದಿಲ್ಲ ಎಂದಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ನನ್ನ ಮೈಂಡ್ ನಲ್ಲಿ ಬಂದ್ರೆ ನಿರ್ಧಾರ ಮಾಡ್ತೆನೆ. ಎಂಪಿಗೆ ಮುಂದಿನ ವರ್ಷ ನೋಡೋದ? ಪಕ್ಷ ಒಪ್ಪಿಗೆ ಕೊಡೋದು ಏನು? ಪಕ್ಷದ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇನೆ. ನಾನು ಈ ವರೆಗೆ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಬಯಸಿಲ್ಲ ಎಂದು ಹೇಳಿದ್ದಾರೆ.

ಕೋರ್ಟ್ ಆವರಣದಲ್ಲೇ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪತಿ..

47ನೇ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಯ ತಾಯಿ..

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

- Advertisement -

Latest Posts

Don't Miss