ಮಂಡ್ಯ: ಮಳೆಯಿಂದ ಹಾನಿಯಾಗಿರುವ ಮಂಡ್ಯ ಬುದುನುರೂ ಕೆರೆಗೆ ಸಂಸದೆ ಸುಮಲತಾ ಅಂಬರೀಷ್ ಭೇಟಿ ನೀಡಿದ್ದು, 2ನೇ ಭಾರಿ ಕೊಡಿ ಒಡೆದ ಕಾರಣ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಆಗುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಸುಮಲತಾ ಕ್ಲಾಸ್ ತೆಗೆದುಕೊಂಡರು.
‘ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ’
ಸಂಸದೆ ಸುಮಲತಾ ಅಂಬರೀಷ್ ಭೇಟಿ ಕೊಟ್ಟರು ಸಹ ಅಧಿಕಾರಿಗಳು ಸ್ಥಳಕ್ಕೆ ಬರದಿದ್ದನ್ನು ಕಂಡು ಸುಮಲತಾ ಅಂಬರೀಷ್ ಕಿಡಿ ಕಾರಿದರು. ಅಧಿಕಾರಿಗಳ ಬೇಜವಾಬ್ದರಿತನಕ್ಕೇ ಕಿಡಿ ಕಾರಿದ್ದು, ಪತ್ರದ ಮೂಲಕ ಎಲ್ಲಾ ಮಾಹಿತಿಯನ್ನು ನನಗೆ ನೀಡಬೇಕು ಎಂದು ಆದೇಶಿಸಿದರು. ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಂಸದೆ, ರೈತರಿಗೆ ಕೂಲಿಕಾರರಿಗೆ ಸಂಚಾರಕ್ಕೆ ಮಳೆಯಿಂದಾಗಿ ತುಂಬಾ ತೊಂದರೆ ಉಂಟಾಗಿದೆ. ಅಧಿಕಾರಿಗಳು ತುಂಬಾ ಬೇಜವಾಬ್ದಾರಿತನಕ್ಕೆ ಎಷ್ಟು ಬಾರಿ ಲೆಟರ್ ಬರೆದರು ಒಂದಕ್ಕೂ ಸ್ಪಂದನೆ ಇಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು. ನೆಪ ಹೇಳೋದೇ ಒಂದು ಕೆಲಸ ಮಾಡ್ಕೊಂಡಿದ್ದಾರೆ. ಮುಂದೆ ಜನನೆ ರೊಚ್ಚಿಗೆಳ್ತಾರೆ ಅಧಿಕಾರಿಗಳ ಮೇಲೆ ಎಂದು ಹೇಳಿದರು.
ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತನಿಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ..
ಇನ್ನು ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಜೆಡಿಎಸ್ ಶಾಸಕರ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ನನ್ನ ಬಳಿಯೂ ದಾಖಲೆ ಇದ್ದು, ಬಿಡುಗಡೆ ಮಾಡುತ್ತೇನೆಂದಿದ್ದರು. ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲೆಗೆ ಸಂಸದೆ ಕೊಡುಗೆ ಏನೆಂದು ಟೀಕಿಸಿದ್ದರು.
ಸುಮಲತಾ, ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ. ದಾಖಲೆ ಸಮೇತ ಆಣೆ-ಪ್ರಮಾಣ ಮಾಡೋಣ, ಯಾರು ಏನು ಎಂದು ಗೊತ್ತಾಗುತ್ತದೆ. ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಎಂದು ಜೆಡಿಎಸ್ ಶಾಸಕರಿಗೆ ಸವಾಲು ಎಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ದಿನಾಂಕ ಸಮಯ ಅವರೇ ನಿರ್ಧಾರ ಮಾಡಲಿ ಎಂದು ಇಂದು ಬುದುನೂರೂ ಕೆರೆ ವಿಚಾರಣೆ ನಡೆಸಲು ಬಂದಿದ್ದ ಸುಮಲತಾ ಶಾಸಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.