Monday, December 23, 2024

Latest Posts

‘ಅಕ್ರಮಗಳನ್ನು ಬುಲ್ಡೋಜರ್‌ನಿಂದ ತಡೆದ ನಾಯಕ ಯೋಗಿಜಿ’

- Advertisement -

ಮಂಡ್ಯ: ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಬ್ಬರದ ಭಾಷಣ ಮಾಡಿದ್ದು, ಯೋಗಿ ಆದಿತ್ಯನಾಥ್‌ಗೆ ಅದ್ಧೂರಿ ಸ್ವಾಗತ ಮಾಡಿದ್ದಾರೆ.

ಉತ್ತರ ಪ್ರದೇಶ ಒಂದು ಕಾಲದಲ್ಲಿ ಗೂಂಡಾ ರಾಜ್ಯವಾಗಿತ್ತು. ಜನಸಾಮಾನ್ಯರು ಓಡಾಡಲು ಆಗ್ತಿರಲಿಲ್ಲ. ರೌಡಿಗಳಿಗೆ ಮಾಮೂಲು ಕೊಟ್ಟು ಕೊಟ್ಟು ಸಾಕಾಗಿದ್ದರು. ಯೋಗಿಜೀ ಅಧಿಕಾರಕ್ಕೆ ಬಂದ ನಂತರ ರೌಡಿಗಳು ಭಯದಿಂದ ಓಡೋಗುವ ವಾತಾವರಣ ಇದೆ. ಜನಸಾಮಾನ್ಯರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅಕ್ರಮಗಳನ್ನು ಬುಲ್ಡೋಜರ್‌ನಿಂದ ತಡೆದ ನಾಯಕ ಯೋಗಿಜಿ. ಇದು ನಮ್ಮಲ್ಲೂ ಅನ್ವಯ ಆಗಬೇಕಾದರೆ ಡಬಲ್ ಎಂಜಿನ್ ಸರ್ಕಾರ ಬೆಂಬಲಿಸಿ ಎಂದು ಸುಮಲತಾ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ವಿಶ್ವ ಮೆಚ್ಚಿದ ಧೀಮಂತ ನಾಯಕ ನರೇಂದ್ರ ಮೋದಿ. ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಸಾಧಿಸಿದೆ. ಅದು ಮುಂದುವರಿಯಬೇಕು, ಆ ಜವಬ್ದಾರಿ ನಮ್ಮ ಕೈಲಿದೆ. ಮಂಡ್ಯದಲ್ಲಿ ಬದಲಾವಣೆ ಸಂಧರ್ಭ ಬಂದಿದೆ. ಪಕ್ಷೇತರ ಸಂಸದೆ ಆಗಿ ಮಾಡಿದ ಸಾಧನೆಗೆ ಸಹಕಾರ ನೀಡಿದ್ದು ನರೇಂದ್ರ ಮೋದಿ ಸರ್ಕಾರ. ಕಳೆದ ಬಾರಿ 7ಕ್ಕೆ 7 ಸ್ಥಾನ ಜೆಡಿಎಸ್‌ ಗೆದ್ದರು ಯಾವುದೇ ಅಭಿವೃದ್ಧಿ ಆಗಿಲ್ಲ. ಮೈಶುಗರ್ ಕಾರ್ಖಾನೆ ಓಪನ್ ಮಾಡಲು ಸಂಸದೆನೆ ಬಂದ್ರು ಎಂದು ಸುಮಲತಾ ಹೇಳಿದ್ದಾರೆ.

ಅಲ್ಲದೇ, ಪಾಂಡವಪುರ ಕಾರ್ಖಾನೆ ಆರಂಭಿಸಲು ಯಾವ ಶಾಸಕರು ಮನಸ್ಸು ಮಾಡಲಿಲ್ಲ. ಅದು ಮಾಡಿದ್ದು ಸುಮಲತಾ ಅಂಬರೀಶ್. ಇದಕ್ಕೆಲ್ಲಾ ಸಹಕಾರ ಕೊಟ್ಟಿದ್ದು ಬಿಜೆಪಿ ಸರ್ಕಾರ. ಅತಂತ್ರ ಆದರೆ ಸಾಕು ಸಿಎಂ ಆಗ್ತೀನಿ ಎಂದು ಒಬ್ಬರು ಕಾಯ್ದು ಕುಳಿತಿದ್ದಾರೆ. ಒಂದು ಕುಟುಂಬದವರನ್ನು ಬೆಂಬಲಿಸಿದ್ದೀರಾ. ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ ಯೋಚಿಸಿ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಎಂದು ಸುಮಲತಾ ಮನವಿ ಮಾಡಿದ್ದಾರೆ.

‘ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆಂದು ನೀವು ಅಂದುಕೊಂಡಿರಬಹುದು. ಆದರೆ..’

ಯೋಗಿ ಸ್ವಾಗತಕ್ಕೆ ರೆಡಿಯಾದ ಸಕ್ಕರೆನಾಡು: ವೇದ ಘೋಷ ಪಠನೆಗೆ ಸಿದ್ದತೆ.

‘ಯೋಗಿ ಬರಲಿ, ಮೋದಿ ಬರಲಿ, ನಮಗೆ ದೊಡ್ಡ ಶಕ್ತಿ ದೇವೇಗೌಡರು’

- Advertisement -

Latest Posts

Don't Miss