www.karnatakatv.net:ಚಾಲೆoಜಿoಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ಕ್ರಾಂತಿ, ವಿಜಯದಶಮಿ ಹಬ್ಬದಂದು ಸಿಂಪಲ್ಲಾಗಿ ಮುಹೂರ್ತವಾಗಿತ್ತು. ಮೊದಲ ಹಂತದ ಚಿತ್ರೀಕರಣ ಇತ್ತಿಚೆಗಷ್ಟೆ ಶುರುವಾಗುಗಿತ್ತು, ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಕೆಲ ದಿನಗಳಕಾಲ ಗ್ಯಾಪ್ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಶೂಟಿಂಗ್‌ನತ್ತ ಮರಳುತ್ತಿದೆ ಕ್ರಾಂತಿ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಕ್ಲೀನ್ ಶೇವ್ ನಲ್ಲಿರೊ ಡಿಬಾಸ್, ಕ್ರಾಂತಿ ಚಿತ್ರದಲ್ಲಿ ಹಲವಾರು ಶೇಡ್ ನಲ್ಲಿ ಕಾಣಲಿದ್ದಾರೆ ಎಂಬ ಮಾಹಿತಿಗಳು ಹೊರಬೀಳುತ್ತಿವೆ ಹಾಗೂ ದಿನ ನಿತ್ಯ ಜಿಮ್ ನಲ್ಲಿ ವರ್ಕಔಟ್ ಮಾಡುತ್ತಿರೊ ದರ್ಶನ್ ಕ್ರಾಂತಿ ಚಿತ್ರದ ಚಾಲೆಂಜಿoಗ್ ಪಾತ್ರಕ್ಕಾಗಿ ಕೊಂಚ ತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ.
ಇನ್ನೂ ಕ್ರಾಂತಿ ಚಿತ್ರದ ಮುಹೂರ್ತದ ಸಂಧರ್ಬದಲ್ಲಿ ಬೇಟಿನೀಡಿ ವಿಷ್ ಮಾಡಿದ್ದ ಸುಮಲತಾ ಅಂಬರೀಶ್ ಹಾಗೂ ರವಿಚಂದ್ರನ್ ಅವರು ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಗಾಂದಿನಗರದಲ್ಲಿ ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ಕ್ರಾಂತಿ ಚಿತ್ರದಲ್ಲಿ ದರ್ಶನ್ ತಾಯಿ ಪಾತ್ರಕ್ಕೆ ಸುಮಲತಾ ಹಾಗೂ ತಂದೆಯ ಪಾತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬಣ್ಣಹಚ್ಚಲಿದ್ದಾರೆ ಎಂಬ ವಿಷಯಗಳು ತಿಳಿದು ಬಂದಿವೆ. ಈ ಹಿಂದೆ ಕುರುಕ್ಷೇತ್ರ ಚಿತ್ರದಲ್ಲಿ ಕ್ರೇಜಿ ಸ್ಟಾರ್ ಮತ್ತು ದರ್ಶನ್ ನಟಿಸಿದ್ದರು. ಸುಮಲತಾ ಅವರು ಕೂಡ ಹಲವು ಸಿನಿಮಾಗಳಲ್ಲಿ ಡಿಬಾಸ್ ಜೊತೆ ನಟಿಸಿದ್ದರು, ಅಲ್ಲದೆ ಭೂಪತಿ ಚಿತ್ರದಲ್ಲಿ ದರ್ಶನ್ ತಾಯಿ ಪತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಕ್ರಾಂತಿ ಚಿತ್ರದಲ್ಲಿ ಮತ್ತೆ ಚಾಲೆಂಜಿoಗ್ ಸ್ಟಾರ್ ಜೊತೆ ಸುಮಲತಾ & ರವಿಚಂದ್ರನ್ ಅವರು ನಟಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಇನ್ನೂ ಕ್ರಾಂತಿ ಚಿತ್ರದಲ್ಲಿ ನಾಯಕಿಯಾಗಿ ರಚಿತಾರಾಮ್ ನಟಿಸಲಿದ್ದು ಮತ್ತೋರ್ವ ನಾಯಕಿ ಕೂಡ ಕ್ರಾಂತಿ ಚಿತ್ರದಲ್ಲಿ ಇರುವ ಬಗ್ಗೆ ಮಾಹಿತಿಗಳು ಸಿಗುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವ ಮಾಹಿತಿಯಾನ್ನು ಹೊರಹಾಕಿಲ್ಲ.
ಇನ್ನೂ ಚಿತ್ರತಂಡ ಅಂದು ಕೊಂಡoತೆ 70-100 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ನಲ್ಲಿದೆ. ಈ ಹಿಂದೆ ಯಜಮಾನ ಚಿತ್ರವನ್ನು ಮಾಡಿದ್ದ ಬಿ,ಸುರೇಶ್ ಹಾಗೂ ಶೈಲಜ ನಾಗ್ ಅವರ ಮೀಡಿಯ ಹೌಸ್ ಸಂಸ್ಥೆ ಈಗ ಕ್ರಾಂತಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ಮೊದಲು ಯಜಮಾನ ಚಿತ್ರದಲ್ಲಿ ಕೆಲಸ ಮಾಡಿದ್ದ ವಿ,ಹರಿಕೃಷ್ಣ, ಅಲ್ಲಿ ತೈಲ ಕ್ರಾಂತಿಯ ಬಗ್ಗೆ ತಿಳಿಸಿದ್ದರು. ಈಗ ಅವರೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಬಗ್ಗೆ ತಿಳಿಸಲು ಮುಂದಾಗಿದ್ದಾರೆ. ಮೊದಲಬಾರಿ ಚಾಲೆಂಜಿoಗ್ ಸ್ಟಾರ್ ದರ್ಶನ್ ಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ಹರಿಕೃಷ್ಣ ಅವರಿಗೆ ಕ್ರಾಂತಿ ಚಿತ್ರ ಚಾಲೆಂಜಿoಗ್ ಆಗಿರಲಿದೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.