Tuesday, November 18, 2025

Latest Posts

‘ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದ್ರು ಉಚಿತವಾಗಿ ನೀಡ್ತಾರೆ’

- Advertisement -

ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಇಂಪ್ಲಿಮೆಂಟ್ ಮಾಡೋದು ಅಸಾಧ್ಯ. ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದ್ರು ಉಚಿತವಾಗಿ ನೀಡ್ತಾರೆ ಎಂದು ಸುಮಲತಾ ವ್ಯಂಗ್ಯವಾಡಿದ್ದಾರೆ.

ಅಭಿವೃದ್ಧಿಯೇ ನನ್ನ ಮಂತ್ರ ಅಂತ ನಂಬಿ ಮಾಡ್ತಿರುವವರು ನರೇಂದ್ರ ಮೋದಿ. ದಿನ ಪೂರ್ತಿ ಕೆಲಸ ಮಾಡುವಂತಹ ದೊಡ್ಡ ವ್ಯಕ್ತಿ. ಮೋದಿಗೆ ಇಡೀ ವಿಶ್ವದಲ್ಲೇ ನಂಬರ್ ಒನ್ ರೇಟಿಂಗ್ ಸಿಕ್ಕಿದೆ. ನಮ್ಮ ಅಕ್ಕಪಕ್ಕದ ದೇಶ ಪಾಕಿಸ್ತಾನ, ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿದೆ. ಅವರು ಸರಿಯಾಗಿ ಕೆಲಸ ಮಾಡದೆ ಭ್ರಷ್ಟಾಚಾರ, ಉಚಿತ ಸೇವೆ ಕೊಟ್ಟು ಹಾಳು ಮಾಡಿದ್ದಾರೆ ಎಂದು ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನವರು 2 ಸಾವಿರ ಗೃಹಿಣಿಗೆ ಕೊಡ್ತಿವಿ ಅಂತಾರೆ. ನಿರುದ್ಯೋಗ ಯುವಕರಿಗೆ 3 ಸಾವಿರ, ಕರೆಂಟ್ ಉಚಿತ, ಬಸ್ ಸೇವೆ ಉಚಿತ. ಈ ಎಲ್ಲಾ ಸೇವೆ ಉಚಿತ ಅಂತಾರೆ. ಇದಕ್ಕೆ ಡಿಕೆಶಿವಕುಮಾರ್ ಸ್ಪಷ್ಟನೆ ಕೊಟ್ಟಿಲ್ಲ. ಇದು ಸುಳ್ಳು ಭರವಸೆ ಆಗುತ್ತೆ. ವರ್ಷಕ್ಕೆ ಎಷ್ಟು ಸಾವಿರ ಕೋಟಿ ನೀವು ಕೊಡ್ತಿನಿ ಅಂತ ಪ್ರಾಮಿಸ್ ಮಾಡ್ತಿರಾ? ನಮ್ಮ ಆರ್ಥಿಕ ವ್ಯವಸ್ಥೆ ಶ್ರೀಲಂಕಾ, ಪಾಕಿಸ್ತಾನದ ತರ ಸಾಲಗಾರರಾಗಿ ಕರ್ನಾಟಕ ರಾಜ್ಯವನ್ನ ನಿಲ್ಲಿಸುವಾಗೆ ಆಗುತ್ತೆ ಎಂದು ಸುಮಲತಾ ಹೇಳಿದ್ದಾರೆ.

ಅಲ್ಲದೇ, ಕರ್ನಾಟಕ ಜಿಎಸ್‌ಟಿ ಕಟ್ಟುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಗ್ಯಾರಂಟಿ ಇಂಪ್ಲಿಮೆಂಟ್ ಮಾಡೋದು ಅಸಾಧ್ಯ. ಯಾವ ಸರ್ಕಾರಕ್ಕೂ ಆ ರೀತಿಯ ಬಜೆಟ್ ಉಚಿತವಾಗಿ ಸಿಗಲ್ಲ. ಉಚಿತವಾಗಿ ಬಜೆಟ್ ಸಿಗುವುದಾದಾರೆ ಎಲ್ಲರು ಫ್ರೀಯಾಗಿ ಕೊಡಬಹುದಲ್ಲ. ಸುಳ್ಳು ಹೇಳಿ ಜನರನ್ನ ನಂಬಿಸಬೇಡಿ. ಸುಳ್ಳು ಆಶ್ವಾಸನೆ ಕೊಟ್ಟು ಜಾರಿ ಮಾಡಿಲ್ಲವಾದರೆ ಹೇಗೆ? ಸಾವಿರಾರು ಜನರು ಕೆಲಸ ಮಾಡುವವರು ಇದ್ದಾರೆ. ನೀವು ಫ್ರೀ ಅಂದ್ರೆ ಅವರಿಗೆ ಸಂಬಳ ಯಾರು ಕೊಡ್ತಾರೆ.? ಸಂಸ್ಥೆಗಳು ಮುಚ್ಚಿಹೋಗುತ್ತವೆ, ಹಿಂದೆ ಎಷ್ಟೋ ಸಂಸ್ಥೆ ಮುಚ್ಚಿವೆ‌. ಜನರು ಪ್ರಬುದ್ದರಿದ್ದಾರೆ, ತಿಳುವಳಿಕೆಯಿಂದ ಈ ಭಾರಿ ನಿರ್ಧಾರ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ದ ಸಂಸದೆ ಸುಮಾಲತಾ ವಾಗ್ದಾಳಿ ನಡೆಸಿದ್ದಾರೆ.

ನನ್ನ ಪತಿ ಯಾವತ್ತೂ ಹಣದಿಂದ ಚುನಾವಣೆ ಮಾಡಿರಲಿಲ್ಲ: ಸ್ವರೂಪ್ ತಾಯಿ ಲಲಿತಮ್ಮ ಸುದ್ದಿಗೋಷ್ಠಿ

‘ಹೆಚ್ಡಿಕೆ ಪೂರ್ಣ 5 ವರ್ಷ ಸಿಎಂ ಆಗಿರ್ತಾರೆ, ಅವರ ಜೊತೆ ನಾ ಇರುತ್ತೇನೆ, ‘

ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್‌ಶೋ ಬಗ್ಗೆ ರೇವಣ್ಣ ವ್ಯಂಗ್ಯ

- Advertisement -

Latest Posts

Don't Miss