ಮಂಡ್ಯ: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದು, ಗೆಲ್ಲುವ ಭರವಸೆ ಇದೆ ಎಂದಿದ್ದಾರೆ.
ಮಂಡ್ಯ ಬಗ್ಗೆ ಇಷ್ಟು ಕಾಳಜಿಯನ್ನಿರಿಸಿಕೊಂಡು, ಮಂಡ್ಯದಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದು ಟಾರ್ಗೆಟ್ ಇಟ್ಟುಕೊಂಡು, ಕೇಂದ್ರ ಬಿಜೆಪಿ ನಾಯಕರು ಮಂಡ್ಯಕ್ಕೆ ಬರುತ್ತಿರುವುದು ನಿಜವಾಗಲೂ ಇದೊಂದು ಪಾಸಿಟಿವ್ ಡೆವಲೆಪಮೆಂಟ್ ಆಗಿದೆ. ಪ್ರಧಾನಮಂತ್ರಿಗಳು ಹೋದಕಡೆ, ಬರೀ ಜನಜಂಗುಳಿ ಬರುವುದಿಲ್ಲ. ಆ ಜನಜಂಗುಳಿ ಎಲ್ಲ ವೋಟ್ ಆಗಿ ಪರಿವರ್ತನೆಯಾಗತ್ತೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಅಲ್ಲದೇ, ನಾಳೆ ಚೆನ್ನಪಟ್ಟಣಕ್ಕೂ ಮೋದಿ ಬರಲಿದ್ದಾರೆ. ನಾವೆಲ್ಲ ಆ ಸಭೆಯಲ್ಲಿ ಭಾಗವಹಿಸಲಿದ್ದೇವೆ. ಖಂಡಿತ ಇದೆಲ್ಲ ಮಂಡ್ಯಕ್ಕೆ ಒಂದು ದೊಡ್ಡ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾರೆ. ಅಲ್ಲದೇ, ಇದು ಚುನಾವಣಾ ತಂತ್ರನಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಸ್ಟ್ರ್ಯಾಟಜಿ ಏನಿಲ್ಲ, ನಮ್ಮದೆಲ್ಲ ಸ್ಟ್ರೇಟ್ ಫಾರ್ವರ್ಡ್. ನಾವು ಅಭಿವೃದ್ಧಿಯನ್ನಿಟ್ಟುಕೊಂಡು, ಜನರಲ್ಲಿ ಓಟ್ ಕೇಳುತ್ತಿದ್ದೇವೆ. ಹಾಗಾಗಿ ಇದರಲ್ಲಿ ಟ್ರಿಕ್ಸ್, ಸ್ಟ್ರ್ಯಾಟಜಿ ಏನಿಲ್ಲ. ಬೇರೆಯವರು ಬೇಕಾದ ಕುತಂತ್ರಗಳನ್ನು ಮಾಡಿಕೊಳ್ಳಲಿ, ನಮ್ಮದೇನಿದ್ದರೂ ಅಭಿವೃದ್ಧಿಯ ಮಂತ್ರ ಅಷ್ಟೇ ಎಂದು ಸುಮಲತಾ ಹೇಳಿದ್ದಾರೆ.
ಈ ಭೂಮಿ ಉರಿಗೌಡ- ನಂಜೇಗೌಡ ಹುಟ್ಟಿದ ನಾಡು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
‘ಅಂದಿನ ಕಾಲದಲ್ಲೇ ಕಾಂಗ್ರೆಸ್ಸಿಗರು ಬಾಬಾ ಸಾಹೇಬರಿಗೆ ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದಾರೆ’