Friday, February 21, 2025

Latest Posts

ಬೇಸಿಗೆಯಲ್ಲಿ ಚರ್ಮದ ಆರೈಕೆ | SUNSCREEN ಬಳಸಬೇಕೋ ಬೇಡವೋ?

- Advertisement -

Health Tips: ಬೇಸಿಗೆಗಾಲ ಶುರುವಾಗಿದೆ. ಇಂಥ ಸಮಯದಲ್ಲಿ ಬಿಸಿಲಿನ ಬೇಗೆಯಿಂದ ನಾವು ಹೇಗೆ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಗೊಂದಲ ಇರುವುದು ಸಹಜ. ಹಾಗಾಗಿ ಡಾ.ದೀಪಿಕಾ ಅವರು ಬೇಸಿಗೆಯಲ್ಲಿ ನಾವು ಯಾವ ರೀತಿ ನಮ್ಮ ತ್ವಚೆಯ ಆರೈಕೆ ಮಾಡಬೇಕು ಎಂದು ವಿವರಿಸಿದ್ದಾರೆ.

ಬೇಸಿಗೆಯಲ್ಲಿ ಮೊದಲನೇಯದಾಗಿ ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಬೇಕು ಅಂತಾರೆ ವೈದ್ಯರು. ಅಂದರೆ ನಿಮಗೆ ಸಾಧ್ಯವಾದಷ್ಟು ನಾವು ನೀರು ಕುಡಿಯಬೇಕು. ಮಜ್ಜಿಗೆ, ಎಳನೀರು, ಮನೆಯಲ್ಲೇ ತಯಾರಿಸಿದ ಜ್ಯೂಸ್ ಕುಡಿಯಬಹುದು. ನೀರಿನ ಅಂಶ ಹೊಂದಿರುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ಕಲ್ಲಂಗಡಿ ಹಣ್ಣು, ಸೌತೇಕಾಯಿ, ಕಿತ್ತಳೆ ಹಣ್ಣು ಇತ್ಯಾದಿ ಹಣ್ಣು, ತರಕಾರಿ ಸೇವನೆ ಮಾಡುವ ಮೂಲಕ ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಬೇಕು.

ಇನ್ನು ನಮ್ಮ ತ್ವಚೆಯನ್ನು ಸೇಫ್ ಆಗಿ ಇರಿಸಲು ನಾವು ಸನ್‌ಸ್ಕ್ರೀನ ಲೋಶನ್ ಬಳಸಬೇಕು. ಇದರಿಂದ ನಮ್ಮ ಚರ್ಮಕ್ಕೆ ರಕ್ಷಣೆ ಸಿಗುತ್ತದೆ. ಬರೀ ಬಿಸಿಲಿನಲ್ಲಿ ಹೋಗುವವರಷ್ಟೇ ಅಲ್ಲದೇ, ಮನೆಯಲ್ಲಿ ಕೂರುವವರು ಕೂಡ ಸನ್‌ಸ್ಕ್ರೀನ್ ಲೋಶನ್ ಬಳಸಬೇಕು. ಏಕೆಂದರೆ ಮನೆಯಲ್ಲಿ ಇದ್ದರೂ ಕೆಲವರು ಲ್ಯಾಪ್‌ಟಾಪ್ ಬಳಸುತ್ತಾರೆ. ಮೊಬೈಲ್ ಬಳಸುತ್ತಾರೆ. ಹಾಗಾಗಿ ಇದರಿಂದಲೂ ನಮ್ಮ ತ್ವಚೆಗೆ ರೇಡಿಯೇಷನ್ ಎಫೆಕ್ಟ್ ಆಗುತ್ತದೆ. ಹಾಗಾಗಿ ಸನ್‌ಸ್ಕ್ರೀನ್ ಬಳಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss