Wednesday, April 24, 2024

Latest Posts

ಸುನೀತ್ ಹಲಗೇರಿ: ಕನ್ನಡಕ್ಕೆ ಮತ್ತೊಬ್ಬ ಕ್ಯಾಮೆರಾಮನ್

- Advertisement -

Movie News: ಕನ್ನಡ ಚಿತ್ರರಂಗದಲ್ಲೀಗ ಸಾಕಷ್ಟು ಯುವ ಪ್ರತಿಭೆಗಳ ಆಗಮನವಾಗುತ್ತಿದೆ. ಕಲಾವಿದರ ಜೊತೆ ತಾಂತ್ರಿಕ ವಿಭಾಗದಲ್ಲೂ ಹೊಸಬರ ಕೈಚಳಕವೇ ಎದ್ದು ಕಾಣುತ್ತಿದೆ. ಒಂದು ಚಿತ್ರ ತೆರೆಯ ಮೇಲೆ ಸುಂದರವಾಗಿ ಕಾಣಬೇಕಾದರೆ, ಕ್ಯಾಮೆರಾ ವರ್ಕ್ ಚೆನ್ನಾಗಿರಬೇಕು. ಚಿತ್ರದ ದೃಶ್ಯವನ್ನು, ಕಲಾವಿದರನ್ನು ಆಕರ್ಷಕವಾಗಿ ತೋರಿಸುವಲ್ಲಿ ಛಾಯಾಗ್ರಾಹಕನ ಕೈಚಳಕ ಪ್ರಮುಖವಾಗುತ್ತದೆ. ಇತ್ತೀಚೆಗೆ ತೆರೆಕಂಡ ಜೋಗ್ 101 ಚಿತ್ರದ ಕ್ಯಾಮೆರಾ ವರ್ಕ್ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದಕ್ಕೆ ಕಾರಣವಾಗಿದ್ದು ಇಡೀ ಚಿತ್ರವನ್ನು ಅಷ್ಟು ಚೆನ್ನಾಗಿ ಸೆರೆಹಿಡಿದ ಕ್ಯಾಮೆರಾ ಮನ್ ಸುನೀತ್ ಹಲಗೇರಿ.

ಈ ಯುವ ಪ್ರತಿಭೆ ತನ್ನ ನಾಲ್ಕನೇ ಚಿತ್ರದಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ರಂಗಪಯಣ, ಸಾತ್ವಿಕ ತಂಡದಲ್ಲಿ ಲೈಟಿಂಗ್ ಡಿಸೈನರ್ ಆಗಿ ಕೆಲಸ ಮಾಡುವ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ತನ್ನ ಪಯಣ ಆರಂಭಿಸಿದ ಸುನೀತ್ ಹಲಗೇರಿಗೆ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿಯಿತ್ತು. ನಂತರ ರಂಗಭೂಮಿ ಸ್ನೇಹಿತ ರಾಜ್ ಗುರು ಹೊಸಕೋಟೆ ನಿರ್ದೇಶಿಸಿದ ಸಮಯದ ಹಿಂದೆ ಸವಾರಿ ಚಿತ್ರಕ್ಕೆ ಮೊದಲಬಾರಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಸುನೀತ್, ನಂತರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಜೂಟಾಟ ಚಿತ್ರಗಳ ಕ್ಯಾಮೆರಾ ವರ್ಕ್ ನಿಭಾಯಿಸಿದರು.
ಇದೀಗ ವಿನಯ ಶಾಸ್ತ್ರಿ ನಿರ್ದೇಶನದ, ಪ್ರಮೋದ್ ಶೆಟ್ಟಿ ಅಭಿನಯದ ಕಾಶೀಯಾತ್ರೆ ಚಿತ್ರಕ್ಕೂ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಒಂದಷ್ಟು ಚಿತ್ರಗಳು ಮಾತುಕತೆ ಹಂತದಲ್ಲಿವೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss