ಚೆನ್ನೈ: ನೆಹರೂ ಮತ್ತು ರಾಜೀವ್ ಗಾಂಧಿ ಬಳಿಕ ಮೋದಿಯೂ ಕೂಡ ಅವರಂತೆಯೇ ವರ್ಚಸ್ಸು ಹೊಂದಿರೋ ನಾಯಕ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಫಲಿತಾಂಶದ ಕುರಿತಾಗಿ ಮಾತನಾಡಿದ ಸೂಪರ್ ಸ್ಟಾರ್, ಇದು ಬಿಜೆಪಿ ಗೆಲುವಲ್ಲ. ಬದಲಾಗಿ ಮೋದಿಯವರ ಗೆಲುವು ಅಂತ ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ ನ ನೆಹರೂ ಮತ್ತು ರಾಜೀವ್ ಗಾಂಧಿಯಂತಹ ನಾಯಕರ ವರ್ಚಸ್ಸು ಇದೀಗ ಮೋದಿಯವರಲ್ಲೂ ಇದೆ ಅಂತ ಹೇಳಿದ್ರು.
ಇನ್ನು ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು ಮೇ 30ರಂದು ನಾನು ನವದೆಹಲಿಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ರಜನಿಕಾಂತ್ ಹೇಳಿದ್ದಾರೆ.
‘ರಾಹುಲ್ ಎದೆಗುಂದಬಾರದು’
ಇನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಕುರಿತಾಗಿ ಪ್ರತಿಕ್ರಿಯಿಸಿದ ಸೂಪರ್ ಸ್ಟಾರ್, ರಾಹುಲ್ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ರಾಜೀನಾಮೆ ನೀಡೋದು ಸರಿಯಲ್ಲ. ಅವರು ಸಮರ್ಥರು ಅಂತ ಸಾಬೀತುಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ಬಹಳ ಪ್ರಮುಖ ಪಾತ್ರ ವಹಿಸೋದ್ರಿಂದ ರಾಹುಲ್ ಗಾಂಧಿ ಎದೆಗುಂದಬಾರದು ಅಂತ ರಜನಿಕಾಂತ್ ಸಲಹೆ ನೀಡಿದ್ದಾರೆ.
ಈ ತಪ್ಪುಗಳಿಂದಲೇ ರಾಹುಲ್ ಗಾಂಧಿ ಸೋತಿದ್ದು… ಈ ವಿಡಿಯೋ ತಪ್ಪದೇ ನೋಡಿ