ನವದೆಹಲಿ: ಕಳೆದೊಂದು ವಾರದಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಅತೃಪ್ತ ಶಾಸಕರ ಮುಂಬೈ ವಾಸ್ತವ್ಯಕ್ಕೆ ಇಂದು ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಇಂದು ಸಂಜೆಯೊಳಗೆ ಬೆಂಗಳೂರಿಗೆ ತೆರಳಿ ಸ್ಪೀಕರ್ ಭೇಟಿಯಾಗುವಂತೆ ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಬಿಕ್ಕಟ್ಟಿಗೆ ಕಾರಣರಾಗಿರೋ ಅತೃಪ್ತ ಶಾಸಕರು ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡೋದಕ್ಕೆ ಇಲ್ಲ ಸಲ್ಲದ ಕಾರಣ ಕೊಟ್ಟು ವಿಳಂಬ ಮಾಡ್ತಿದ್ದಾರೆ ಅಂತ ಅತೃಪ್ತರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್, ಮುಂಬೈ ನಲ್ಲಿ ವಾಸ್ತವ್ಯ ಹೂಡಿರೋ ಅತೃಪ್ತ ಶಾಸಕರು ಸಂಜೆ 6 ಗಂಟೆಯೊಳಗೆ ಸ್ಪೀಕರ್ ರಮೇಶ್ ಕುಮಾರ್ ರನ್ನ ಖುದ್ಧು ಭೇಟಿಯಾಗುವಂತೆ ಆದೇಶ ನೀಡಿದೆ. ಇನ್ನು ನಿನ್ನೆ ಸ್ಪೀಕರ್ ಕಚೇರಿ ಬಳಿ ಉಂಟಾದ ಗದ್ದಲವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಮುಂಜಾಗೃತಾ ಕ್ರಮವಾಗಿ ಅತೃಪ್ತ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಅಂತ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಹೀಗಾಗಿ ಇದೀಗ ಮುಂಬೈನಲ್ಲಿ ಬೀಡುಬಿಟ್ಟಿರೋ ಎಲ್ಲಾ ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳಸಲು ಸಿದ್ಧತೆ ನಡೆಸಿದ್ದಾರೆ.
ಯಡಿಯೂರಪ್ಪಾಗೆ ರಾಜ್ಯಾಪಾಲರು ಕೊಟ್ರಾ ಶಾಕ್..!? ಮಿಸ್ ಮಾಡದೇ ಈ ವಿಡಿಯೋ ನೋಡಿ