ನವದೆಹಲಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ವರದಿ ಬಹಿರಂಗವಾದ ಬಳಿಕ ಇವಿಎಂ-ವಿವಿ ಪ್ಯಾಟ್ ಚೀಟಿ ತಾಳೆಗೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ತಜ್ಞರ ತಂಡ ಶೇ.100ರಷ್ಚು ವಿವಿ ಪ್ಯಾಟ್ ಚೀಟಿ ಹೊಂದಾಣಿಕೆ ಆಗಬೇಕು ಅಂತ ಕೋರಿ ಅರ್ಜಿ ಸಲ್ಲಿಸಿತ್ತು. ವಿವಿ ಪ್ಯಾಟ್ ಮತ್ತು ಇವಿಎಂ ನಲ್ಲಿ ಮತದಾನ ಚೀಟಿಯನ್ನು ಶೇ.100ರಷ್ಟು ತಾಳೆ ಮಾಡಬೇಕು. ಇದರಿಂದ ಯಾವುದೇ ಅಕ್ರಮ ನಡೆದಿದ್ದರೆ ಅದು ಬೆಳಕಿಗೆ ಬರುತ್ತೆ ಅಂತ ವಿಪಕ್ಷಗಳು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಚುನಾವಣಾ ಫಲಿತಾಂಶಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಇಡೀ ದೇಶವೇ ನೂತನ ಸರ್ಕಾರ ರಚನೆ ಕುರಿತಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ 7 ಹಂತದಲ್ಲಿ ನಡೆದ ಚುನಾವಣೆಯ ಮತದಾನ ಚೀಟಿಯನ್ನು ತಾಳೆ ಹಾಕೋದಕ್ಕೆ ಬಹಳ ಸಮಯ ಬೇಕಾಗುತ್ತದೆ. ಈ ಕುರಿತು ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕಿತ್ತು. ಇದೀಗ ಸಮಯ ಮೀರಿ ಹೋಗಿದೆ. ಅಲ್ಲದೆ ಜನತೆಯ ಆಯ್ಕೆಯನ್ನು ಅನುಮಾನಿಸೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದಕ್ಕೂ ಮೊದಲು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಗೆ ಶೇ.50ರಷ್ಟು ಇವಿಎಂ-ವಿವಿ ಪ್ಯಾಟ್ ಚೀಟಿ ತಾಳೆಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯಂದು ಕೇವಲ ಒಂದೇ ಒಂದು ನಿಮಿಷದಲ್ಲೇ ಸುಪ್ರೀಂ ಕೋರ್ಟ್ ಅರ್ಜಿಯನ್ನ ತಿರಸ್ಕರಿಸಿತ್ತು.
ನಿಜಕ್ಕೂ ಗೆಲ್ತಾರಾ ಸೋಲಿಲ್ಲದ ಸರದಾರ…? ಯಾವ ನಾಯಕನಿಗೆ ಶುರುವಾಗಿದೆ ಸೋಲಿನ ಭೀತಿ? ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.