Saturday, July 27, 2024

Latest Posts

ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಾಯಿಸಬಾರದು- ರಾಜೀನಾಮೆ ಇತ್ಯರ್ಥ ಕುರಿತು ಸ್ಪೀಕರ್ ನಿರ್ಧರಿಸಲಿ-ಸುಪ್ರೀಂ ತೀರ್ಪು

- Advertisement -

ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದೆ. ಅತೃಪ್ತ ಶಾಸಕರು ಹಾಗೂ ಸ್ಪೀಕರ್ ಹಕ್ಕುಗಳನ್ನು ಎತ್ತಿಹಿಡಿಯೋ ಮೂಲಕ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸಮತೋಲನ ಕಾಯ್ದುಕೊಂಡಿದೆ.

ರಾಜೀನಾಮೆ ಅಂಗೀಕರಿಸಲು ವಿಧಾನಸಭಾ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಅಂತ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ನಿರ್ದಿಷ್ಟ ಸಮಯದವರೆಗೆ ಶಾಸಕರ ರಾಜೀನಾಮೆ ಕುರಿತಾಗಿ ಇತ್ಯರ್ಥಪಡಿಸಿ ಅಂತ ಹೇಳಿದೆ. ಈ ಮೂಲಕ ನಾಳಿನ ವಿಶ್ವಾಸ ಮತಯಾಚನೆಗೆ ಅತೃಪ್ತ ಶಾಸಕರು ಹಾಜರಾಗಲೇ ಬೇಕು ಅಂತ ಒತ್ತಾಯ ಮಾಡುವಂತಿಲ್ಲ. ಅಲ್ಲದೆ ಅವರೆಲ್ಲರಿಗೂ ಜಾರಿಯಾಗಿರುವ ವಿಪ್ ಸದ್ಯಕ್ಕೆ ಅನ್ವಯವಾಗೋದಿಲ್ಲ ಅನ್ನೋದನ್ನು ಸುಪ್ರೀಂ ಸ್ಪಷ್ಟಪಡಿಸಿದೆ.

ಇನ್ನು ಇದರಿಂದಾಗಿ ನಾಳಿನ ವಿಶ್ವಾಸಮತ ಯಾಚನೆಗೆ 15ಮಂದಿ ಶಾಸಕರು ಹಾಜರಾಗ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೀಗಾಗಿ ಮೈತ್ರಿ ಸರ್ಕಾರ ನಾಳಿನ ತನ್ನ ಬಲ ಪ್ರದರ್ಶನದಲ್ಲಿ ಹಿನ್ನಡೆಯಾಗಲಿದೆ ಅನ್ನೋದು ಬಹುತೇಕ ಖಚಿತವಾಗಿದೆ. ಆದ್ರೆ ನಾಳೆಯ ಒಳಗಾಗಿ ಕೊನೆಯ ಕ್ಷಣದಲ್ಲಿ ಅತೃಪ್ತರು ತಮ್ಮ ನಿರ್ಧಾರ ಬದಲಿಸಿದರೂ ಆಶ್ಚರ್ಯಪಡಬೇಕಿಲ್ಲ.

- Advertisement -

Latest Posts

Don't Miss