Friday, November 22, 2024

Latest Posts

ರಾಹುಲ್ ಗಾಂಧಿ ಜಾಮೀನು ವಿಸ್ತರಿಸಿದ ಸೂರತ್ ಸೆಷನ್ ಕೋರ್ಟ್..

- Advertisement -

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಜಾಮೀನು ವಿಸ್ತರಣೆಗಾಗಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಂದಿದೆ. ಸೂರತ್ ಸೆಷನ್ ಕೋರ್ಟ್, ಏಪ್ರಿಲ್ 13ರವರೆಗೆ ರಾಹುಲ್ ಗಾಂಧಿಗೆ ಜಾಮೀನು ವಿಸ್ತರಣೆ ಮಾಡಿದೆ.

2019ರಲ್ಲಿ ಚುನಾವಣಾ ಭಾಷಣದ ವೇಳೆ ರಾಹುಲ್ ಗಾಂಧಿ ಎಲ್ಲ ಕಳ್ಳರ ಉಪನಾಮ ಮೋದಿ ಅಂತಾ ಹೇಗೆ ಇದೆ ಎಂದು ಕೇಳಿದ್ದರು. ಈ ಹೇಳಿಕೆಯನ್ನ ವಿರೋಧಿಸಿ, ಗುಜರಾತ್ ಬಿಜೆಪಿ ಎಂಎಲ್‌ಎ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕಿದ್ದರು. ಕೆಲ ದಿನಗಳ ಹಿಂದೆ ಈ ತೀರ್ಪು ಬಂದಿದ್ದು, ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ವಿಧಿಸಿ, ಮುಂದಿನ 6 ವರ್ಷಗಳ ಕಾಲ ಅವರು ಚುನಾವಣೆಗೆ ನಿಲ್ಲದಂತೆ ಸೂಚನೆ ನೀಡಿತ್ತು. ಆದರೆ ರಾಹುಲ್ ಗಾಂಧಿಗೆ ಜಾಮೀನು ಸಿಕ್ಕಿತ್ತು.

ಜಾಮೀನು ವಿಸ್ತರಣೆ ಮಾಡಲು, ರಾಹುಲ್ ಗಾಂಧಿಯವರ ಕಾನೂನು ತಂಡ ಸೂರತ್ ಸೆಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಗಾಗಿ ರಾಹುಲ್ ಇಂದು ಸೂರತ್ ಕೋರ್ಟ್‌ಗೆ ಆಗಮಿಸಿದ್ದರು. ಇಂದು ಸೂರತ್ ಕೋರ್ಟ್, ಏಪ್ರಿಲ್ 13ರವರೆಗೆ ರಾಹುಲ್ ಗಾಂಧಿ ಜಾಮೀನು ವಿಸ್ತರಣೆ ಮಾಡಿದೆ. ಮೇ 3ಕ್ಕೆ ರಾಹುಲ್ ಗೆ ನೀಡಿರುವ ತೀರ್ಪಿನ ವಿರುದ್ಧದ ಮನವಿಯನ್ನು ಆಲಿಸಲು ಒಪ್ಪಿಗೆ ನೀಡಿದೆ.

ಈ ವೇಳೆ ರಾಹುಲ್‌ ಗಾಂಧಿ ಜೊತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ತೀರ್ಪು ಬರುತ್ತಿದ್ದಂತೆ, ರಾಹುಲ್‌ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಕೆಲಸಗಳಿಗೆ ಮರಳಿದ್ದಾರೆ.

‘ಸಂಸದೆ ಸುಮಲತಾ ಒಬ್ಬರು ಅಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು’

2ನೇ ಬಾರಿ ಸತ್ಯಮೇವ ಜಯತೆ ಕಾರ್ಯಕ್ರಮ ಮುಂದೂಡಿಕೆ

‘ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲ ಬದ್ಧ’

- Advertisement -

Latest Posts

Don't Miss