Saturday, July 27, 2024

Latest Posts

ಬಿಎಸ್ ವೈ ಅಭಿಮಾನಿ ಆತ್ಮಹತ್ಯೆ, ಕುಟುಂಬಕ್ಕೆ ಮಾಜಿ ಸಚಿವರ ಸಾಂತ್ವಾನ

- Advertisement -

www.karnatakatv.net : ಚಾಮರಾಜನ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರಾಜಪ್ಪ (ರವಿ)ಯವರ ಮನೆಗೆ ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರ ರಾಜಿನಾಮೆ ಸುದ್ದಿ ಕೇಳಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವ್ವನ ಹೇಳಿದರು…

ಶಾಸಕ ನಿರಂಜನಕುಮಾರ್ ವೈಯಕ್ತಿಕ ಧನಸಹಾಯ ಮಾಡಿ  ಧೈರ್ಯ ತುಂಬಿದರು. ಚಾಮರಾಜನಗರ ಜಿಲ್ಲೆಯ ನಿಕಟಪೂರ್ವ ಉಸ್ತುವಾರಿ ಸಚಿವರೂ ಆದ ಸುರೇಶ್ ಕುಮಾರ್ ಮೃತನ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ರವಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಅಭಿಮಾನಿ

ಯಾಗಿದ್ದರು….ಯಡಿಯೂರಪ್ಪನವರ ರಾಜಿನಾಮೆಯನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿಪರೀತ ಕೃತ್ಯಕ್ಕೆ ಅವರು ಮುಂದಾಗಬಾರದಾಗಿತ್ತು…

ಅವರ ಕುಟುಂಬವನ್ನು ಅವರು ಅನಾಥರನ್ನಾಗಿಸಿ ಪೋಷಕರು ಮತ್ತು ಕುಟಂಬದ ಸದಸ್ಯರನ್ನು ತೀವ್ರ ಸಂಕಷ್ಟಕ್ಕೆ ಈಡು ಮಾಡುವ ನಿರ್ಧಾರವನ್ನು ಅವರು ತೆಗೆದುಕೊಳ್ಳಬಾರದಿತ್ತೆಂದು ವಿಷಾದ ವ್ಯಕ್ತಪಡಿಸಿದರು..ಮೃತ ರವಿಯವರ ಮನೆಗೆ ಭೇಟಿ ನೀಡಿ ಅವರ ತಾಯಿಯೊಂದಿಗೆ ಕುಳಿತು ಸುದೀರ್ಘವಾಗಿ ಮಾತನಾಡಿದರು..

ಯಾವುದೇ ಅಭಿಮಾನಿಗಳಾಗಿರಲಿ, ಪಕ್ಷದ ಕಾರ್ಯಕರ್ತರಾಗಿರಲಿ, ಯಾರೇ ಆಗಿರಲಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು… ಜೀವನದಲ್ಲಿ ಇಂತಹ ಹಲವಾರು ಘಟನೆಗಳು, ಕಷ್ಟನಷ್ಟಗಳು ಬರುತ್ತವೆ. ಎಲ್ಲವನ್ನೂ ಸಮಾಧಾನದಿಂದ ಅವರು ಹೇಳಿದರು…

ರವಿಯವರು ತಮ್ಮ ರಾಜಿನಾಮೆ ಸುದ್ದಿ ಕೇಳಿ ಆತ್ಮಹತ್ಯೆಗೆ ಮುಂದಾಗಿದ್ದನ್ನು ತಿಳಿದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ತೀವ್ರ ನೊಂದು ಕೊಂಡಿದ್ದಾರೆಂದು ಸುರೇಶ್ ಕುಮಾರ್ ಹೇಳಿದರು….

ತಮ್ಮ ಅಭಿಮಾನಿ ರವಿಯವರ ಆತ್ಮಹತ್ಯೆ ಸುದ್ದಿ ತಿಳಿದ ಬಿ.ಎಸ್. ಯಡಿಯೂರಪ್ಪನವರೂ ಸಹ ಸೋಮವಾರವೇ ಮೃತನ ಪೋಷಕರೊಂದಿಗೆ ದೂರವಾಣಿ ಮೂಲಕವೇ ಮಾತನಾಡಿ ಸಾಂತ್ವನ ಹೇಳಿದ್ದರು. ಹಾಗೆಯೇ ಯಾವುದೇ ಕಾರ್ಯಕರ್ತ, ಅಭಿಮಾನಿಗಳು ಸಹ ಇಂತಹ ಕೃತ್ಯಕ್ಕೆ ಮುಂದಾಗಬಾರದೆಂದು ಹೇಳಿದ್ದರಲ್ಲದೇ ಅಭಿಮಾನ ಅತಿರೇಕಕ್ಕೆ ಹೋಗಬಾರದು ಎಂದು ಸಲಹೆ ನೀಡಿದ್ದರು….

ವರದಿ :ಪ್ರಸಾದ್ ಯಡಹುಂಡಿ ಕರ್ನಾಟಕ ಟಿವಿ ಚಾಮರಾಜನಗರ

- Advertisement -

Latest Posts

Don't Miss