Thursday, May 30, 2024

Latest Posts

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

- Advertisement -

Political News: ಇಂದು ಹಾಸನದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪರ ಪ್ರಚಾರ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.

ನಿಮಗೆ ಉಚಿತವಾಗಿ ಕರೆಂಟ್ ಬಂದಿದೆಯೋ ಇಲ್ಲವೋ..? ನಿಮ್ಮ ಪತ್ನಿಗೆ 2 ಸಾವಿರ ಬಂದಿದೆಯೋ ಇಲ್ಲವೋ..? ಹತ್ತು ಕೆಜಿ ಅಕ್ಕಿ ಬರ್ತಾ ಇದೆಯೋ ಇಲ್ಲವೋ..? ಎಂದು ಪ್ರಶ್ನಿಸಿದ ಡಿಕೆಶಿ, ತಾಯಿ ಹಾಸನಾಂಬೆಯ ಆಶೀರ್ವಾದ ಈ ತಾಯಿ ಮಕ್ಕಳ ಮೇಲಿದೆ. 2 ಲಕ್ಷಕ್ಕೂ ಹೆಚ್ಚಿನ ವೋಟ್‌ಗಳ ಅಂತರದಿಂದ ಗೆದ್ದೇ ಗೆಲ್ತಾರೆ. ನೀವು ಬರ್ದಿಟ್ಟುಕೊಳ್ಳಿ, ದೇವೇಗೌಡರು ಹೇಳಿದ್ದಾರೆ, ನಾಲ್ಕು ಸೀಟು ನಮಗೆ ಬಿಜೆಪಿಯವರು ಕೊಟ್ಟಿದ್ದಾರೆ ಅಂತಾ. ಆದರೆ ನಿಮ್ಮ ಅಳಿಯನನ್ನು ಗೆಲ್ಲಿಸಲು ಆಗದಿದ್ದ ಮೇಲೆ ನಿಮ್ಮ ಪಕ್ಷದಲ್ಲಿ ಎಲ್ಲಿದೆ ಶಕ್ತಿ ಅಂತಾ ಡಿಕೆಶಿ ಪ್ರಶ್ನಿಸಿದ್ದಾರೆ..

ಅಲ್ಲದೇ, ಜೆಡಿಎಸ್‌ನ ನಾಲ್ಕು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಬಿಜೆಪಿ ಚಿಹ್ನೆ ಮೇಲೆ, ಮೂವರನ್ನು ಜೆಡಿಎಸ್‌ ಚಿಹ್ನೆ ಮೇಲೆ ನಿಲ್ಲಿಸಿದ್ದಾರೆ. ಈ ನಾಲ್ಕೂ ಜನ ಗೆಲ್ಲಲು ಸಾಧ್ಯವಿಲ್ಲ. ಶ್ರೇಯಸ್ ಗೆ ಈ ಎಲೆಕ್ಷನ್ ಬುನಾದಿ. ಏಳಕ್ಕೆ ಏಳು ಕ್ಷೇತ್ರ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಶ್ರೇಯಸ್ ಪಟೇಲ್ ಗೆಲ್ಲಬೇಕು. ಇಷ್ಟು ಒಗ್ಗಟ್ಟು, ಇಷ್ಟ ಐಕ್ಯತೆ ಬೇರೆ ಚುನಾವಣೆಯಲ್ಲಿ ಇರಲಿಲ್ಲ. ಎಲ್ಲರೂ ಕೂಡಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

ಅಲ್ಲದೇ, ಬಿಜೆಪಿ ಕಾರ್ಯಕರ್ತರಿಗೆ ಹೇಳುತ್ತಿದ್ದೇನೆ. ನನ್ನೇ ಬಿಡಲಿಲ್ಲ. ಇನ್ನು ನಿಮ್ಮನ್ನ ಬಿಡ್ತಾರೇನ್ರಿ..? ಸುರೇಶಾ ನಿನ್ನ ಬಿಡೋದಿಲ್ಲಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ.  ಅಂತಾ ಜೆಡಿಎಸ್ ವಿರುದ್ಧ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ, ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಲು ಮನವಿ ಮಾಡಿದ್ದಾರೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss