ಅಭಿಷೇಕ್ ಅಂಬರೀಷ್ ಕೈಯ್ಯಲ್ಲಿದೆ ೨ ದೊಡ್ಡ ದೊಡ್ಡ ಸಿನಿಮಾ, ಈ ನಡುವೆ ಮದ್ದೂರು ಚುನಾವಣೆಗೂ ಮಂಡ್ಯದ ಗಂಡು ಅಂಬಿ ಪುತ್ರ ರೆಡಿಯಾಗ್ತಿದ್ದಾರೆ. ಹೀಗೆ ಹಲವು ವಿಷಯಗಳ ರೆಬೆಲ್ ಫ್ಯಾಮಿಲಿ ಸುತ್ತ ಓಡಾಡ್ತಿವೆ. ಇದೆಲ್ಲಾ ನಿಜಾನಾ..? ಅಭಿಷೇಕ್ ಮಾಡ್ತಿರೋ ಬಿಗ್ ಸಿನಿಮಾಗಳ್ಯಾವುದು ಈ ಸ್ಟೋರಿ ನೋಡಿ..
ನಾಳೆ ರೆಬೆಲ್‌ಸ್ಟಾರ್ ಅಂಬರೀಷ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಜೋಷಲ್ಲಿ ಅಂಬಿ ಕುಟುಂಬದ ಮುಂದಿನ ಯೋಜನೆಗಳನ್ನು ನಿಮ್ಮ ಮುಂದೆ ಇಡೋ ಪ್ರಯತ್ನ ನಮ್ಮದು. ಸುಮಲತಾ ಈಗಾಗ್ಲೇ ಸಂಸದೆಯಾಗಿ ಮಂಡ್ಯದಲ್ಲಿ ಕೆಲಸಗಳನ್ನು ಮಾಡುತ್ತಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗುತ್ತಿಲ್ಲ ಅನ್ನೋ ಮಾತುಗಳು ಕೇಳಿರ‍್ತಿವೆ. ಸುಮಲತಾರನ್ನು ಮಂಡ್ಯದ ಜನರು ಗೆಲ್ಲಿಸಿದ ಅಬ್ಬರ ನೋಡಿದ್ರೆ ನಿರೀಕ್ಷೆಗಳು ಸಹಜ.
ಈ ನಡುವೇ ಸುಮಲತಾ ಬಿಜೆಪಿ ಸರ‍್ತಾರೆ ಅನ್ನೋ ಸುದ್ದೊಗಳೂ ಹರಿದಾಡಿದ್ವು. ಯಾವುದಕ್ಕೂ ನನ್ನ ಜನರ ಜೊತೆ ಮಾತಾಡ್ತೀನಿ ಅಂದ್ರು ಸುಮಲತಾ. ಇದರ ಜೊತೆಗೆ ರೆಬೆಲ್‌ಸ್ಟಾರ್ ಪುತ್ರ ಅಭಿಷೇಕ್ ಅಂಬರೀಷ್ ಮುಂದಿನ ೨೦೨೩ರ ವಿಧಾನಸಭಾ ಚುನಾವಣೆಗೆ ಮದ್ದೂರಿನಿಂದ ಮದಗಜನಾಗಿ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ. ಅಭಿಷೇಕ್ ಯಾವ ಪಕ್ಷದಿಂದ ಕಣಕ್ಕಿಳೀತಾರೆ ಅನ್ನೋದು ಕನ್ಫರ್ಮ್ ಆಗಿಲ್ಲ. ಆದರೆ ಚುನಾವಣೆಗೆ ಈಗಲೇ ಇಳಿಯುವಷ್ಟು ಅಭಿಷೇಕ್ ರಾಜಕೀಯದಲ್ಲಿ ಪ್ರಬುದ್ಧರಾ ಅನ್ನೋ ಪ್ರಶ್ನೆಗಳು ಕೇಳಿರ‍್ತಿವೆ.
ಚುನಾವಣೆ ಗೆದ್ದರೂ ಸೋತರೂ ದೊಡ್ಡ ದೊಡ್ಡ ಸಿನಿಮಾಗಳು ಅಭಿಷೇಕ್‌ಗಾಗಿ ಕಾಯುತ್ತಿವೆ. ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ ಕಾಳಿ ಚಿತ್ರ ಶೂಟಿಂಗ್ ಆರಂಭಿಸುವ ತುದಿಗಾಲಲ್ಲಿದ್ದು, ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಬಹುತೇಕ ಮುಗಿದಿದೆ. ಇನ್ನು ಮದಗಜ ಮಹೇಶ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ನಾಳೆ ಅಂದ್ರೆ ಅಂಬಿ ಹುಟ್ಟುಹಬ್ಬದ ದಿನ ಘೋಷಣೆಯಾಗಲಿದೆ. ಇನ್ನು ನಾಳೆ ಅಂಬಿ ಹುಟ್ಟಿದ ಹಬ್ಬದಲ್ಲಿರೋ ಮತ್ತಷ್ಟು ವಿಶೇಷತೆಗಳಿಗಾಗಿ ಕರ್ನಾಟಕ ನ್ಯೂಸ್ ಯೂಟ್ಯೂಬ್ ಚಾನೆಲ್ ನೋಡ್ತಾ ಇರಿ
ಮೇ ೨೯ರ ಅಂಬಿ ಹುಟ್ಟುಹಬ್ಬಕ್ಕೆ ಅಭಿಷೇಕ್ ಅಂಬರೀಷ್ ಕೊಡ್ತಾರೆ ಗುಡ್‌ನ್ಯೂಸ್..!
- Advertisement -
- Advertisement -