Friday, December 13, 2024

Latest Posts

ಚಿತ್ರರಂಗದಿಂದ ಹೋಮ, ನಾಗರಾಧನೆ; ಕನ್ನಡ ಚಿತ್ರರಂಗಕ್ಕೆ 7 ರಾಷ್ಟ್ರ ಪ್ರಶಸ್ತಿ- ನೆಟ್ಟಿಗರು ಹೇಳಿದ್ದೇನು?

- Advertisement -

ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದಲ್ಲಿ ಬುಧವಾರವಷ್ಟೇ ಹೋಮ, ಹವನ ಹಾಗೂ ನಾಗರಾಧನೆ ಮಾಡಲಾಗಿತ್ತು. ಇದಾದ ಎರಡು ದಿನದಲ್ಲೇ ಕನ್ನಡ ಚಿತ್ರರಂಗಕ್ಕೆ ಗುಡ್​ನ್ಯೂಸ್ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಬರೋಬ್ಬರಿ 7 ಪ್ರಶಸ್ತಿಗಳು ಲಭಿಸಿವೆ. ಹೀಗಾಗಿ, ಕನ್ನಡ ಚಿತ್ರರಂಗ ಮಾಡಿದ್ದ ಹೋಮ, ಹಮನ ಹಾಗೂ ನಾಗರಾಧನೆ ಫಲಕೊಟ್ಟಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತನಾಡಿಕೊಳ್ತಿದ್ದಾರೆ.

2020ರಲ್ಲಿ ತೆರೆ ಕಂಡಿದ್ದ ರಾಕಿಂಗ್​ ಸ್ಟಾರ್​ ಯಶ್ ನಟನೆಯ ಕೆಜಿಎಫ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ​ ನಟನೆಯ ಕಾಂತಾರ ಸಿನಿಮಾಗಳು ಭರ್ಜರಿ ಸೌಂಡ್​ ಮಾಡಿತ್ತು. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಸಿನಿಮಾಕ್ಕಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ, ಹಾಗೂ ರಾಕಿ ಭಾಯ್​ ನಟಿಸಿದ್ದ ಕೆಜಿಎಫ್​2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ ದೊರಕಿವೆ.

ಕಾಂತಾರ ಸಿನಿಮಾ ವೀಕ್ಷಿಸಿದಾಗಲೇ ರಿಷಬ್​ ಶೆಟ್ಟಿ ನಟನೆಗೆ ಫಿದಾ ಆಗದವರೇ ಇಲ್ಲ. ಸಿನಿಮಾದ ಕ್ಲೈಮ್ಯಾಕ್ಸ್​​ ಅಂತೂ ವಾವ್​ ಅನ್ನೋ ಲೆವೆಲ್​ನಲ್ಲಿ ಇತ್ತು. ಸಿನಿಮಾ ವೀಕ್ಷಿಸಿದ್ದ ಪ್ರತಿಯೊಬ್ಬ ಅಭಿಮಾನಿಯೂ ಹೇಳಿದ್ದೊಂದೇ ಮಾತು. ಈ ಸಿನಿಮಾಗಾಗಿ ರಿಷಬ್​​ಗೆ ನ್ಯಾಷನಲ್​ ಅವಾರ್ಡ್​ ಬರಲೇಬೇಕು ಅಂತ. ಅಭಿಮಾನಿಗಳು ಅಂದುಕೊಂಡಂತೆ ರಿಷಬ್​ ಶೆಟ್ಟಿಗೆ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ನಲ್ಲಿ ಬೆಸ್ಟ್‌ ಆ್ಯಕ್ಟರ್‌ ಪ್ರಶಸ್ತಿ ಜೊತೆಗೆ ಅತ್ಯುತ್ತಮ ಮನರಂಜನಾ ಚಿತ್ರದ ಗರಿಯೂ ಚಿತ್ರತಂಡಕ್ಕೆ ಸಿಕ್ಕಿದೆ. ಬೆಸ್ಟ್ ಆ್ಯಕ್ಟರ್ ಅವಾರ್ಡ್​ ರೇಸ್​ನಲ್ಲಿ ಭಾರತದ ವಿವಿಧ ಚಿತ್ರರಂಗದ ಹೆಸರಾಂತ ನಟರು ರೇಸ್​ನಲ್ಲಿರುತ್ತಾರೆ. ಅವರನ್ನೆಲ್ಲಾ ಹಿಂದಿಕ್ಕಿ ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್​ ಅವಾರ್ಡ್​ ಬಂದಿರೋದು ಕನ್ನಡ ಚಿತ್ರರಂಗದ ಜೊತೆಗೆ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇನ್ನೂ, ಬೆಸ್ಟ್ ಆ್ಯಕ್ಟರ್​ ಅವಾರ್ಡ್ ಯಶಸ್ಸನ್ನ, ರಿಷಬ್ ಶೆಟ್ಟಿಯ ಈ ಚಿತ್ರದಲ್ಲಿ ಮೊದಲು ನಟಿಸಬೇಕಿದ್ದ ಪುನೀತ್ ರಾಜ್​ಕುಮಾರ್​ಗೆ, ದೈವಕ್ಕೆ ಹಾಗೂ ಚಿತ್ರತಂಡಕ್ಕೆ ಅರ್ಪಿಸಿದ್ದಾರೆ.

ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ರಾಕಿಂಗ್​ ಸ್ಟಾರ್​ ನಟನೆಯ ಕೆಜಿಎಫ್2. ಈ ಚಿತ್ರಕ್ಕೆ ಎರಡು ನ್ಯಾಷನಲ್ ಅವಾರ್ಡ್​ಗಳು ಸಿಕ್ಕಿವೆ. ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಾಹಸ ವಿಭಾಗದಲ್ಲಿ ಎರಡು ನ್ಯಾಷನಲ್ ಅವಾರ್ಡ್​ ಸಿಕ್ಕಿದೆ.
ನ್ಯಾಷನಲ್ ಫಿಲ್ಮ್ ಅವಾರ್ಡ್​ನಲ್ಲಿ ಬೆಸ್ಟ್ ಆ್ಯಕ್ಟರ್​ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ರಿಷಭ್​ ಶೆಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ರಾಕಿಂಗ್​ ಸ್ಟಾರ್​ ಯಶ್, ಜೂನಿಯರ್​ ಎನ್​ಟಿಆರ್​ ಸೇರಿದಂತೆ ಹಲವಾರು ನಟರು ಶುಭಾಶಯಗಳನ್ನ ಕೋರಿದ್ದಾರೆ. ಒಟ್ನಲ್ಲಿ ಕಾಂತರ, ಕೆಜಿಎಫ್ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಒಟ್ಟು 7 ಪ್ರಶಸ್ತಿಗಳು ಬಂದಿರೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

*ಸ್ವಾತಿ.ಎಸ್.

- Advertisement -

Latest Posts

Don't Miss