ಐಸಿಸಿ ಟಿ20 ರಾಂಕ್:  ಸೂರ್ಯ ಕುಮಾರ್‍ಗೆ ನಂ.1 ಪಟ್ಟ ಜಸ್ಟ್ ಮಿಸ್ 

ಹೊಸದಿಲ್ಲಿ:  ಯುವ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಐಸಿಸಿ ಟಿ20 ರಾಂಕಿಂಗ್‍ನಲ್ಲಿ  ಎರಡನೆ ಸ್ಥಾನ ಪಡೆದಿದ್ದಾರೆ.

ಮೊನ್ನೆ ಆತಿಥೇಯ ವಿಂಡೀಸ್ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ  ಹೊರತಾಗಿಯೂ 11 ಅಂಕಗಳನ್ನು ಕಳೆದುಕೊಂಡಿದ್ದಾರೆ.

ಮೊನ್ನೆ ಭಾನುವಾರ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ  ವಿಶ್ರಾಂತಿ ಪಡೆದಿದ್ದರಿಂದ ಸೂರ್ಯ ಕುಮಾರ್ ಯಾದವ್ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರನ್ನು ರ್ಯಾಂಕಿಂಗ್‍ನಲ್ಲಿ ಹಿಂದಿಕ್ಕಲು ಸಾಧ್ಯಯವಾಗಲಿಲ್ಲ ಎಂದು ಐಸಿಸಿ ಮೂಲಗಳು ತಿಳಿಸಿವೆ. ಸೂರ್ಯ ಕುಮಾರ್ ಹೊರತುಪಡಿಸಿ ಟಾಪ್ 10ರಲ್ಲಿ ಯಾವ ಭಾರತೀಯ ಬ್ಯಾಟರ್‍ಗಳು ಸ್ಥಾನ ಪಡೆದಿಲ್ಲ.

ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ರ್ಯಾಂಕಿಂಗ್‍ನಲ್ಲಿ ಬಡ್ತಿ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಆರು ಸ್ಥಾನ ಜಿಗಿದು 19ನೇ ಸ್ಥಾನ ಪಡೆದಿದ್ದಾರೆ.

ಟಿ 20 ಆವೃತ್ತಿಯಲ್ಲಿ  ಬಾಬರ್ ಅಜಮ್ ಸ್ಥಿರ ಪ್ರದಶ್ನ ನೀಡಿ ನಂ.1 ಪಟ್ಟದಲ್ಲಿ  ಮುಂದುವರೆದಿದ್ದಾರೆ.ಮುಂಬರುವ ಏಷ್ಯಾಕಪ್‍ನಲ್ಲಿ  ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ. ಆ.28ರಂದು ಸಾಂಪ್ರದಾಯಿಕ ಎದುರಾಳಿ ಭಾರತ – ಪಾಕಿಸ್ಥಾನ ಆಡಲಿವೆ.

ಏಷ್ಯಾಕಪ್‍ಗೂ ಮುನ್ನ ಪಾಕಿಸ್ಥಾನ ಯುಎಇಯಲ್ಲಿ ನೆದರ್‍ಲ್ಯಾಂಡ್ ವಿರುದ್ಧ 3 ಏಕದಿನ ಸರಣಿ ಆಡಲಿದೆ. ವಿಂಡೀಸ್ ಪ್ರವಾಸ ಮುಗಿಸಿರುವ  ಟೀಮ್ ಇಂಡಿಯಾ ಶಿಖರ್ ಧವನ್ ನೇತೃತ್ವದಲ್ಲಿ  ಆತಿಥೇಯ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲಿದೆ.

ಅನುಭವಿ ಭವನೇಶ್ವರ್ ಕುಮಾರ್ ಒಳ್ಳೆಯ ಪ್ರದರ್ಶನ ನೀಡಿದ ಹೊರತಾಗಿಯೂ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.  ವಿಂಡೀಸ್ ವಿರುದ್ಧ 8 ವಿಕೆಟ್ ಪಡೆದ ಸ್ಪಿನ್ನರ್ ರವಿ ಬಿಷ್ಣೋಯಿ 50ನೇ ಸ್ಥಾನದಿಂದ 44ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಉಳಿದಂತೆ ಆವೇಶ್ ಖಾನ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಬಡ್ತಿ ಪಡೆದಿದ್ದಾರೆ.

About The Author