ಬಾಗಲಕೋಟೆ: ಪಂಚಮಸಾಲಿ ಸಮಾಜದ ಗುರುಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವೀಡಿಯೋ ಮೂಲಕ, ತಮ್ಮ ಸಮಾಜದ ಶಾಸಕನಿಗೆ ಮಂತ್ರಿ ಸ್ಥಾನ ನೀಡಬೇಕೆಂದು, ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಮಾತನಾಡಿದ ಸ್ವಾಮೀಜಿ, ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಲಿಂಗಾಯತ ಪಂಚಮಸಾಲಿ ಸಮುದಾಯದವರು, ಸುಮಾರು 12 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ, ಹೆಚ್ಚಿನನ ಆದ್ಯತೆ ಸಿಗಬೇಕೆನ್ನುವಂಥ ಅಪೇಕ್ಷೆ ಇದೆ. ಧಾರವಾಡ, ಬೆಳಗಾವಿ, ಕಲ್ಬುರ್ಗಿ, ಬಿಜಾಪುರ ಸೇರಿ ನಮ್ಮ ಸಮುದಾಯದ ಅನೇಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಮ್ಮ ಬಾಗಲಕೋಟೆ ಜಿಲ್ಲೆಯ ಪ್ರಾತಿನಿಧ್ಯದ ಅಡಿಯಲ್ಲಿ, ನಮ್ಮ ಮೀಸಲಾತಿ ಚುನಾವಣೆ ಶುರುವಾಗಿದ್ದೇ, ಕೂಡಲಸಂಗಮದ ಶ್ರೀಪೀಠದ ವತಿಯಿಂದ. ಆ ಕಾರಣಕ್ಕೆ ಸುಮಾರು 30 ವರ್ಷಗಳಿಂದ, ಈ ಬಾಗಲಕೋಟೆ ಜಿಲ್ಲೆಯಲ್ಲಿ, ಇದುವರೆಗೂ ನಮ್ಮ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷ ಯಾವುದೇ ಸಚಿವ ಸ್ಥಾನ ಕೊಡಲಿಲ್ಲ. ಈ ಕಾರಣಕ್ಕಾಗಿ, ಉಳಿದ ಜಿಲ್ಲೆಯವರಿಗೆ ಏನು ಅವಕಾಶ ಕೊಡುತ್ತಿರೋ, ಅದರ ಜೊತೆ, ಬಾಗಲಕೋಟೆ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಏಕೈಕ ಶಾಸಕರಾಗಿ ಆಯ್ಕೆಯಾದ ವಿಜಯಾನಂದ ಕಾಶಪ್ಪನವರಿಗೆ, ಸಚಿವ ಸ್ಥಾನ ನೀಡಬೇಕೆಂದು ಹೇಳಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ, ಮಲ್ಲಿಕಾರ್ಜುನ ಖರ್ಗೆಯವರಿಗೆ, ಸಿದ್ದರಾಮಯ್ಯನವರಿಗೂ, ಡಿ.ಕೆ.ಶಿವಕುಮಾರ್ ಅವರಿಗೂ ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ವೀಡಿಯೋದಲ್ಲಿ ಸ್ವಾಮೀಜಿ ಹೇಳಿದ್ದಾರೆ.
‘ಸಿಎಂ ಯಾರೇ ಆದರೂ ಸ್ವಾಗತ ಮಾಡ್ತೀನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ’
‘ಮಾಜಿ ಶಾಸಕರಿಗೆ ಹೆದರಿ ಅಧಿಕಾರಿಗಳು ಯಾವುದೇ ಕಳ್ಳ ಬಿಲ್‌ಗಳಿಗೆ ಸಹಿ ಹಾಕಬಾರದು’