ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ 90ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು ನೂತನ ಶಾಸಕ ಎಚ್.ಪಿ.ಸ್ವರೂಪ್ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ಪೂಜೆ ಹಾಗೂ ದೇವೇಗೌಡರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಯಿತು.
ಇಂದು ಬೆಳಿಗ್ಗೆ ನಗರದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದಜೆಡಿಎಸ್ ಕಾರ್ಯಕರ್ತರು ಹಾಗೂ ದೊಡ್ಡಗೌಡರ ಅಭಿಮಾನಿಗಳು, ದೇವೇಗೌಡರ ಪರ ಜೈಕಾರ ಕೂಗುವ ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಅಜಾದ್ ರಸ್ತೆಯ ದರ್ಗಾದಲ್ಲಿಯು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ನಂತರ ಹೇಮಾವತಿ ಪ್ರತಿಮೆ ಬಳಿ ದೇವೇಗೌಡರ ಭಾವಚಿತ್ರಕ್ಕೆ, ಕ್ಷೀರಾಭಿಷೇಕ ಮಾಡಿ ದೇವೇಗೌಡರಿಗೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಶಾಸಕ ಎಚ್.ಪೀ ಸ್ವರೂಪ್ ಮಾತನಾಡಿ, ಮಾಜಿ ಪ್ರಧಾನಿಗಳು, ರಾಷ್ಟ್ರ ಕಂಡ ಅಪರೂಪದ ರಾಜಕಾರಿಣಿ ಹಾಗೂ ಧೀಮಂತ ನಾಯಕ ಎಚ್.ಡಿ ದೇವೇಗೌಡ ಅವರ 90ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಳಿಗ್ಗೆಯಿಂದಲೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಜೊತೆ ಉತ್ತಮ ಒಡನಾಟ ಹೊಂದಿರುವ ದೇವೇಗೌಡರು, ಹುಟ್ಟು ಹೋರಾಟಗಾರರಾಗಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರ, ಗಡಿ ಸಮಸ್ಯೆ, ಕಾವೇರಿ ನದಿ ಸಮಸ್ಯೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಮಸ್ಯೆಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಸಲಹೆ ಪಡೆಯುವ ಏಕೈಕ ವ್ಯಕ್ತಿ ಪೂಜ್ಯ ದೇವೇಗೌಡರು ಎಂದು ಬಣ್ಣಿಸಿದರು.
ತಾನು ಶಾಸಕನಾಗುವ ಹಿಂದೆ ಪೂಜ್ಯ ದೇವೇಗೌಡ ಅವರ ಅವಿರತ ಶ್ರಮ ಹಾಗೂ ಆಶೀರ್ವಾದ ಇದೆ, ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಲಪಡಿಸಲು ದೇವೇಗೌಡರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ, ಕಾಯಿ ಒಡೆದು ಹರಕೆ ಸಲ್ಲಿಕೆ: ಕೊಟ್ಟೂರು ಮಂಜುನಾಥ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ
‘ಒಂದು ಕ್ಷೇತ್ರದಲ್ಲಾದರೂ ಬಿಜೆಪಿ ಗೆಲ್ಲಿಸು ಎಂದು ಚಾಲೆಂಜ್ ಹಾಕಿದ್ದೆ, ಅವರಿಗೆ ನಮ್ಮ ನೋವೇ ಶಾಪವಾಗಿ ತಟ್ಟಿದೆ’