’20ನೇ ತಾರೀಕು ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಡಿಕೆ, ರೇವಣ್ಣ, ಪ್ರಜ್ವಲ್‌, ಸೂರಜ್ ಭಾಗಿಯಾಗಲಿದ್ದಾರೆ’

ಹಾಸನ: ಹಾಸನದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ, ಇಂದು ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆ ಮೂಲಕ, ತಮ್ಮ ಕಾರ್ಯಕರ್ತರೊಂದಿಗೆ ಕಚೇರಿಗೆ ಬಂದ ಸ್ವರೂಪ್ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಸ್ವರೂಪ್, ನಮ್ಮ ನಾಯಕರಾದಂಥ ದೇವೇಗೌಡರು, ಕುಮಾರಣ್ಣನವರು, ರೇವಣ್ಣನವರು, ಪ್ರಜ್ವಲ್, ಸೂರಜ್, ಭವಾನಿ ಮೇಡಂ ಆಶೀರ್ವಾದದೊಂದಿಗೆ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ. ಜೊತೆಗೆ ದೇವರ ಆಶೀರ್ವಾದವೂ ಪಡೆದಿದ್ದೇನೆ. ಇದೇ 20ನೇ ತಾರೀಖು ಹಾಸನದಲ್ಲಿ ದೊಡ್ಡ ಜೆಡಿಎಸ್ ಸಮಾವೇಶ ನಡೆಯಲಿದೆ. ಆ ಸಂದರ್ಭ ಮೆರವಣಿಗೆ ನಡೆಸಿ, ನಂತರ ಇನ್ನೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು, ರೇವಣ್ಣನವರು, ಪ್ರಜ್ವಲ್, ಸೂರಜ್ ಎಲ್ಲರೂ ಭಾಗಿಯಾಗಲಿದ್ದಾರೆ. ಹಲವು ಕಾರ್ಯಕರ್ತರು ಒಗ್ಗೂಡಿ ಈ ಕಾರ್ಯಕ್ರಮ ಮಾಡಬೇಕೆಂದಿದ್ದೇವೆ ಎಂದು ಸ್ವರೂಪ್ ಹೇಳಿದ್ದಾರೆ.

‘ನನ್ನನು ಹೊರತು ಪಡಿಸಿ ಇನ್ನೆಲ್ಲಾ ಅಭ್ಯರ್ಥಿಗಳು ಕೂಡ ನನಗೆ ಎದುರಾಳಿಗಳೇ’

ಶ್ರೀರಂಗಪಟ್ಟಣಕ್ಕೆ ಚಾಲೆಂಜಿಂಗ್ ಸ್ಟಾರ್ ಎಂಟ್ರಿ, ಸಚ್ಚಿದಾನಂದ್‌ಗೆ ಸಾಥ್ ಕೊಟ್ಟ ದರ್ಶನ್ ..

ನಾಮಪತ್ರ ಸಲ್ಲಿಸಿದ ಎಸ್.ಎನ್.ನಾರಾಯಣಸ್ವಾಮಿ ಮತ್ತು ವರ್ತೂರು ಪ್ರಕಾಶ್..

About The Author