ಹಾಸನ : ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಅವರನ್ನ ಗೆಲ್ಲಿಸಲು ಬಿಸಿಲು-ಮಳೆ ಎನ್ನದೆ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಜನ ಸಾಗರವೇ ಹರಿದು ಬಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಒಟ್ಟಿಗೆ ಬೃಹತ್ ರೋಡ್ ಶೋನಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಶಾಸಕ ಪ್ರೀತಂಗೌಡನನ್ನು ಸೋಲಿಸಲೇ ಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿ, ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕ್ರೀಡಾಂಗಣದ ಮುಂಬಾಗ ಬೆಳಿಗ್ಗೆ ೧೦ ಗಂಟೆಯಿಂದಲೇ ಜೆಡಿಎಸ್ ಮೆರವಣಿಗೆಯಲ್ಲಿ ಭಾಗವಹಿಸಲು ಸಾವಿರಾರು ಕಾರ್ಯಕರ್ತರು ಸರದಿಯಲ್ಲಿ ಗುಂಪು ಗುಂಪಾಗಿ ಬಂದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಅವರು ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಪ್ರಕಾಶ್ ರೋಡ್ ಶೋ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಮದ್ಯಾಹದ ವೇಳೆಗೆ ಪಾಲ್ಗೊಂಡರು.
ತೆರೆದ ವಾಹನದಲ್ಲಿ ಹೊರಟ ಬೃಹತ್ ಮೆರವಣಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ. ಪ್ರೀತಂ ಜೆ ಗೌಡ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿದ್ದಾನೆ. ಇಡಿ ನಮ್ಮ ಕುಟುಂಬದ ಸವಾಲು ಎಂದರೇ ಸ್ವರೂಪ್ ರವರನ್ನು ಗೆಲ್ಲಿಸುವುದು. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡನನ್ನು ಸೋಲಿಸಲೆಬೇಕು. ಶಾಸಕನಾಗಿ ಇದುವರೆಗೂ ಎನೆನು ಮಾಡಿದ್ದಾನೆ ಈಗ ಹೇಳಲ್ಲ. ಇನ್ನೊಂದು ದಿನ ಹಾಸನ ನಗರಕ್ಕೆ ಬಂದು ಎಲ್ಲಾ ಹೇಳುವೆ. ಪ್ರೀತಂ ಗೌಡನನ್ನು ಸೋಲಿಸಿ ಹೆಚ್.ಪಿ. ಸ್ವರೂಪ್ ಗೆಲ್ಲಿಸುವಂತೆ ಇದೆ ವೇಳೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಹಾಸನ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಶಾಸಕ ಪ್ರೀತಂ ಜೆ. ಗೌಡ ಕಳೆದ ೩-೪ ವರ್ಷಗಳಿಂದ ಮಾಡಿರುವು ಕೆಲಸಕ್ಕೆ ಹಲವಾರು ಕುಟುಂಬಗಳು ನೊಂದಿವೆ. ೩ ವರ್ಷಗಳಲ್ಲಿ ಆಕ್ರಮ ಹಣ ಲೂಟಿ ಮಾಡಿದ್ದಾರೆ. ಮಹಿಳೆಯರಿಗೆ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಟೋಪಿ ಹಾಕಿದ್ದಾರೆ.
ಮಾಜಿ ಪ್ರಧಾನಿ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದಾಗ ರೇವಣ್ಣನವರು ೧ ನಿಮಿಷ ಸಮಯ ವ್ಯರ್ಥ ಮಾಡದೆ ಹಾಸನ ಜಿಲ್ಲೆಯ ಅಭಿವೃದ್ಧಿ ಮಾಡಿದ್ದರು. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಂತಿಮವಾಗಿ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿದ್ದೆವೆ ಎಂದರು. ದಿವಂಗತ ಹೆಚ್.ಎಸ್. ಪ್ರಕಾಶ್ ಅವರು ತಮ್ಮ ಬದುಕಿನ ಸಮಯದಲ್ಲಿ ಅತ್ಯಂತ ಪ್ರಾಮಾಣಿಕ, ಸರಳ, ಸಜ್ಜನಿಕೆಯ ರಾಜಕಾರಣಿ. ಕಳೆದ ಚುನಾವಣೆಯಲ್ಲಿ ಪ್ರಕಾಶ್ ಅವರನ್ನು ಹಾಸನದ ಜನತೆ ಸೋಲಿಸಲಿಲ್ಲ.
ಸೋಲುವುದಕ್ಕೆ ಕಾರಣ ಬೆಂಗಳೂರು ಮಟ್ಟದಲ್ಲಿದ್ದಂತಹ ರಾಜ್ಯದ ಕೆಲ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ಇಲ್ಲಿಗೆ ಕರೆತಂದು ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಅಪಪ್ರಚಾರವನ್ನು ಮಾಡಿ ಮುಸಲ್ಮಾನರ ನಡುವೆ ನಮ್ಮ ವಯಕ್ತಿಕ ಸಂಬಂಧಗಳಲ್ಲಿ ಅನುಮಾನ ಮೂಡಿಸಿ ಸೋಲಿಗೆ ಕಾರಣವಾಯಿತು. ಎಂದು ಇದೆ ವೇಳೆ ದಿವಂಗತ ಹೆಚ್.ಎಸ್. ಪ್ರಕಾಶ್ ಅವರನ್ನು ಸ್ಮರಿಸಿದರು. ಈ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದಿಗೆ ರಾಜ್ಯ ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರ ಹಿಡಿದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಉಡುಗೊರೆಯಾಗಿ ಮತದಾರರು ನೀಡಲು ಮುಂದಾಗುವಂತೆ ಕರೆ ನೀಡಿದರು.
‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘
‘ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ’
‘ಕುಮಾರಸ್ವಾಮಿ ಒಬ್ಬ ದುರಾಹಂಕಾರಿ, ದುರಹಂಕಾರದ ಶಾಸಕ ಅಂದ್ರೆ ರವೀಂದ್ರ ಶ್ರೀಕಂಠಯ್ಯ’