ಹಾಸನ : ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ತಾಯಿ ಲಲಿತಮ್ಮ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಪುತ್ರ ಸ್ವರೂಪ್ ಪರ ಮತಯಾಚಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಲಲಿತಮ್ಮ ಕಣ್ಣೀರಿಟ್ಟಿದ್ದು, ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತು ಹಣದಿಂದ ಚುನಾವಣೆ ಮಾಡಲಿಲ್ಲ. ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ. ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಸ್ವರೂಪ್ ನಡೆಯುತ್ತಿದ್ದಾನೆ ಎಂದು ಹೇಳಿದರು.
ಕಳೆದ ಭಾರಿ ಚುನಾವಣೆಯಲ್ಲಿ ಪರಾಭವಗೊಂಡರು. ಈಗ ಚುನಾವಣೆ ಮಾಡಲು ಹಣ ಮಾಡಬೇಕು. ನನ್ನ ಮಗನಿಗೆ ಹೇಳಿದೆ ನಿನ್ನ ಬಳಿ ಹಣವಿಲ್ಲ ಎಂದು. ಆದರೂ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದಾನೆ. ಹಾಸನದಲ್ಲಿ ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ಹಾಸನ ಜನತೆ ನನ್ನ ಮಗನಿಗೆ ಆಶೀರ್ವಾದ ಮಾಡಿ. ನನ್ನ ಮಗ ಗೆದ್ದರೆ ನನ್ನ ಪತಿ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪತಿ ಸಾವು ನೆನೆದು ಸ್ವರೂಪ್ ತಾಯಿ ಲಲಿತಮ್ಮ ಕಣ್ಣೀರಿಟ್ಟಿದ್ದಾರೆ. ಅಲ್ಲದೇ, ಪುತ್ರ ಸ್ವರೂಪ್ ಮತ ನೀಡುವಂತೆ ಕೈಮುಗಿದು ಮನವಿ ಮಾಡಿದ್ದಾರೆ.
‘ಸ್ವರೂಪ್‌ಗಾಗಿ ಭವಾನಿ ತ್ಯಾಗ ಮಾಡಿದ್ದಾರೆ, ಅವನನ್ನು 3ನೇ ಮಗ ಎಂದಿದ್ದಾರೆ’
ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್‌ಶೋ ಬಗ್ಗೆ ರೇವಣ್ಣ ವ್ಯಂಗ್ಯ