ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ವಿರುದ್ಧದ ಶಾಸಕ ಪ್ರೀತಂ ಗೌಡ ಅವರು ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್. ಪಿ ಸ್ವರೂಪ್ ಒತ್ತಾಯಿಸಿದರು.
ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು…!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ನಶೆಯಲ್ಲಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ. ರಾಜಕೀಯವಾಗಿ ಏನೇ ಇದ್ದರೂ ಅದನ್ನು ರಾಜಕೀಯವಾಗಿ ಎದುರಿಸಬೇಕು ಅದನ್ನು ಬಿಟ್ಟು ಒಬ್ಬ ಗೌರವಯುತ ಸ್ಥಾನದಲ್ಲಿ ಇರುವ ಶಾಸಕರು ಒಬ್ಬ ಮಹಿಳಾ ನಾಯಕಿಯ ಬಗ್ಗೆ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಅವರು ಕೂಡಲೇ ಕ್ಷಮೆ ಕೇಳದೆ ಇದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಡಾನೆ ದಾಳಿಗೆ ವ್ಯಕ್ತಿ ಸಾವು! ತಡವಾಗಿ ಬಂದು ಪರಿಹಾರ ಘೋಷಿಸಿದ ಸಚಿವ ಗೋಪಾಲಯ್ಯ!
ಉತ್ತಮ ಸಂಸ್ಕೃತಿ ಹೊಂದಿರುವುದಾಗಿ ಮಾತನಾಡುವ ಶಾಸಕರು ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ಡಿಎನ್ಎ ಬಗ್ಗೆ ಮಾತನಾಡುತ್ತಾರೆ. ಇದೇನಾ ಅವರು ಹೊಂದಿರುವ ಸಂಸ್ಕೃತಿ ಎಂದು ಕಿಡಿ ಕಾರಿದ ಅವರು ಈ ರೀತಿಯ ಹೇಳಿಕೆ ನೀಡಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಇರ್ಷಾದ್ ಪಾಷ. ಶಿವಣ್ಣ ಹಾಗೂ ನಗರ ಸಭೆ ಸದಸ್ಯರಾದ ಮಹೇಶ್, ರಫೀಕ್ ಮತ್ತಿರರು ಇದ್ದರು.