ಕಟಕ್:ಹೆನ್ರಿಕ್ ಕ್ಲಾಸೆನ್ ಅವರ ಅಮೋಘ ಬ್ಯಾಟಿಂಗ್ ಗೆ ತತ್ತರಿಸಿದ ಭಾರತ ತಂಡ ದ.ಆಫ್ರಿಕಾ ವಿರುದ್ಧ ಎರಡನೆ ಸೋಲು ಅನುಭವಿಸಿದೆ.
ಇಲ್ಲಿನ ಬಾರ್ಬಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (1)ಹಾಗೂ ಇಶನ್ ಕಿಶನ್ (34)ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಶ್ರೇಯಸ್ ಅಯ್ಯರ್ 40, ರಿಷಭ್ ಪಂತ್ 5, ಹಾರ್ದಿಕ್ ಪಾಂಡ್ಯ 9, ಅಕ್ಷರ್ ಪಟೇಲ್ 10, ದಿನೇಶ್ ಕಾರ್ತಿಕ್ ಅಜೇಯ 30, ಹರ್ಷಲ್ ಪಟೇಲ್ ಅಜೇಯ 12 ರನ್ ಗಳಿಸಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
149 ರನ್ ಗುರಿ ಬೆನ್ನತ್ತಿದ ದ.ಆಫ್ರಿಕಾ ಆರಂಭಿಕ ಅಘಾತ ಅನುಭವಿಸಿತು.ಟೆಂಬಾ ಬಾವುಮೆ 35, ರೀಜಾ ಹೆಂಡ್ರಿಕ್ಸ್ 4, ಡ್ವೇನ್ ಪ್ರಿಟೋರಿಯಸ್ 4, ವೆನ್ ಡೆರ್ ಡುಸೆನ್ 1ರನ್ ಗಳಿಸಿದರು.
29 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಹೆನಿರಿಕ್ ಕ್ಲಾಸೆನ್ 7 ಬೌಂಡರಿ 5 ಸಿಕ್ಸರ್ ಸಿಡಿಸಿ 81 ರನ್ ಗಳಿಸಿದರು.ನಾಯಕ ಟೆಂಬಾ ಬಾವುಮೆ 35 ರನ್ ಗಳಿಸಿದರು.
ಡೇವಿಡ್ ಮಿಲ್ಲರ್ ಅಜೇಯ20 ರನ್ ಗಳಿಸಿದರು. ದ.ಆಪ್ರಿಕಾ 18.2 ಓವರ್ ಗಳಲ್ಲಿ 6 ವಿಕೆಟ್ 149 ರನ್ ಗಳಿಸಿತು. 81 ರನ್ ಗಳಿಸಿದ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.