- Advertisement -
Dharwad News: ಧಾರವಾಡ: ಧಾರವಾಡದ ತಡಕೋಡ ಗ್ರಾಮದಲ್ಲಿ ಸದ್ದಾಂ ಹುಸೇನ್ ಎಂಬ ಯುವಕ ರಾಮಮಂದಿರ ಫೋಟೋ ಮೇಲೆ ಹಸಿರು ಧ್ವಜ ಹಾರಿಸಿದಂತೆ ಫೋಟೋ ಎಡಿಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ. ಇದಾದ ಬಳಿಕ ಆ ಗ್ರಾಮದಲ್ಲಿ ದೊಡ್ಡ ಗಲಾಟೆ ನಡೆದಿತ್ತು.
ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಸದ್ದಾಂನನ್ನು ಬಂಧಿಸಿದ್ದರು. ಬಳಿಕ ಆ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಸದ್ದಾ ಮನೆ ಮುಂದೆ ಜಮಾಯಿಸಿದ ಕೆಲವರು ಗಲಾಟೆ ಮಾಡಿದ್ದರು. ಈ ವೇಳೆ ಗ್ರಾಮದಲ್ಲಿ ಅಶಾಂತಿ ಉಂಟಾಗಿತ್ತು.
ಈ ಕೇಸ್‌ಗೆ ಸಂಬಂಧಿಸಿದಂತೆ ಗರಗ ಠಾಣೆ ಪಿಎಸ್‌ಐ ತಲೆದಂಡವಾಗಿದೆ. ಪ್ರಕಾಶ್ ಡಿ ಎಂಬ ಗರಗ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ. ಉತ್ತರವಲಯ ಐಜಿ ವಿಕಾಸ್ ಕುಮಾರ್ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದ ಕಾರಣಕ್ಕೆ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ.
- Advertisement -