ಕೇರಳದಲ್ಲಿ ಭ್ರಷ್ಟ ಕಮ್ಯೂನಿಸ್ಟ್ ಆಡಳಿತದಿಂದ ತನ್ನ ಉದ್ಯಮ ಕಳೆದುಕೊಂಡ ಯುವಕ, ಅದೇ ಪಂಚಾಯಿತಿಯಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಪ್ರೇರಣಾದಾಯಕ ಸಂಗತಿ. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸು. ಆದರೆ ಸರ್ಕಾರದ ಕಚೇರಿ ಅಡೆತಡೆ, ಅನುಮತಿ ಪ್ರಕ್ರಿಯೆಗಳ ವಿಳಂಬ ಹಾಗೂ ಭ್ರಷ್ಟಾಚಾರದಿಂದ ಹಲವರ ಕನಸುಗಳು ಆರಂಭದಲ್ಲೇ ಮೊಟಕುಗೊಳ್ಳುತ್ತವೆ.
ಇಂತಹ ಅಡೆತಡೆ...
ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಬಿ ರಿಪೋರ್ಟ್ ಸಲ್ಲಿಸುವುದಾಗಿ ಹೇಳಿ ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಜಾಲ ಪೊಲೀಸ್ ಠಾಣೆಯ PSI ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸರ...
ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅವ್ಯವಹಾರ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೆ ಸಾರ್ವಜನಿಕರು ಅದೆಷ್ಟೋ ಬಾರಿ ಪಂಚಾಯಿತಿ ಎದುರು ಧರಣಿ...
ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಬಗ್ಗೆ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಟೀಕೆ ಮಾಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದು, ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ.
ಜನರ ಕಷ್ಟಗಳನ್ನು ಕೇಳುವ ಸಂವೇದನೆ ಮಂತ್ರಿಗಳಲ್ಲಿ ಇರಲಿಲ್ಲ. ಈಗಲಾದರೂ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾರು ಸಿಎಂ ಆಗುತ್ತಾರೋ ಮುಖ್ಯವಲ್ಲ, ಜನ...
ಮೈಸೂರು : ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊತ್ತಿದ್ದಾರೆ. ಈ ಮೂಲಕ ಡಬಲ್ ಎಂಜಿನ್ ಆಡಳಿತದ ಕನಸು ಕಂಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಕೇಂದ್ರ ಎನ್ಡಿಎ ಸರ್ಕಾರಕ್ಕೆ 11 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿರುವ...
ಹುಬ್ಬಳ್ಳಿ: ಅದು ರಾಜ್ಯದ ಎರಡನೇ ದೊಡ್ಡ ಪಾಲಿಕೆ. ಆ ಪಾಲಿಕೆಯಲ್ಲಿ ಹಗರಣಕ್ಕೇನೂ ಕಡಿಮೆ ಇಲ್ಲ. ಪಾಲಿಕೆಯಲ್ಲಿ ಖಾಸಿಲ್ಲದೆ ಯಾವುದೇ ಕೆಲಸ ಆಗೋದಿಲ್ಲ ಅನ್ನೋ ಅಲಿಖಿತ ನಿಯಮವೂ ಇದೆ. ಇದೀಗ ಪಾಲಿಕೆಯ ಒಂದೇ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಹಲವರು ಪಾಲಿಕೆ ಆಯುಕ್ತರಿಗೆ ದೂರು ಕೊಟ್ಟಿದ್ದರು....
ಹುಣಸೂರು:ತಾಲೂಕಿನ ಹನಗೋಡ ನಾಡಕಚೇರಿಯಲ್ಲಿ ನೀವೂ ಸರ್ಕಾರಕ್ಕೆ ಸಂಬಂಧ ಪಟ್ಟ ಯಾವುದೇ ಪ್ರಮಾಣ ಪತ್ರ ಪಡೆಯಬೇಕೆಂದರೆ ಹಣವನ್ನು ನೀಡಿ ಪಡೆಯಬೇಕಂತೆ ಅದು ಹತ್ತು ಇಪ್ಪತ್ತು ಅಲ್ಲ ಬರೋಬ್ಬರಿ 1000 ದಿಂದ 3000 ಸಾವಿರದ ವರೆಗೆ ಹಣವನ್ನು ಪಡೆದುಕೊಳ್ಳುತ್ತಾರಂತೆ ಅವರು ವಿಧವೆಯಾಗಿರಲಿ ಅಥವಾ ವೃದ್ದರಾಗಿರಲಿ ಹಣ ಕೊಟ್ಟು ಪ್ರಮಾಣ ಪತ್ರ ಪಡೆಯಬೇಕಂತೆ.
ಬೆಳಿಗ್ಗೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಅರ್ಜಿ...
ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ ₹6-8 ಲಕ್ಷ ಕಮಿಷನ್ ಕೇಳುತ್ತಿರುವ ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ವಜಾಗೊಳಿಸುವಂತೆ ಎಎಪಿ ಆಗ್ರಹಿಸಿದೆ. ಲೋಕಾಯುಕ್ತದಲ್ಲಿ ಸುಮೊಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ, ಕೃಷಿ ಸಚಿವರು ತಮ್ಮ...
ಧಾರವಾಡ: ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. 3 ತಿಂಗಳು ಆಯ್ತು ಸರ್ಕಾರ ಅಧಿಕಾರಕ್ಕೆ ಬಂದು ಅಭಿವೃದ್ಧಿ ಯೋಜನೆಗಳು ಆಗಿಲ್ಲಾ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾದ ಸಹಕಾರ ಕೊಡುತ್ತಿಲ್ಲಾ ಮಾಜಿ ಸಿಎಂ ಕುಮಾರಸ್ವಾಮಿ ನೈಸ್ ಹಗರಣದ ತನಿಖೆ ಆಗಲೆಂದು ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ತೆಗೆದಿಡೊದು ಸಾಲೋದಿಲ್ಲಾ.ರಸ್ತೆಗಳು ಹಾಳಾಗಿ ಹೋಗಿವೆ.ರಸ್ತೆಗಳ ಮೇಲೆ ಹೋಗಿ ಪ್ರತಿಭಟನೆ ಮಾಡುವಂತೆ ಎಲ್ಲಾ...
ಹುಬ್ಬಳ್ಳಿ: ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕಾರಣ ಮಾಡುವುದು ಸಹಜ. ಆದರೆ ಚುನಾಯಿತರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ವಿರುದ್ಧ ಚುನಾಯಿತ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಆರೋಪವೊಂದು ಗಂಭೀರವಾಗಿ ಕೇಳಿಬಂದಿದೆ....