Wednesday, February 5, 2025

Dharwad news

ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಚುನಾವಣಾ ಸಿಬ್ಬಂದಿ: ಮತದಾರರು ಆಕ್ರೋಶ

Dharwad News: ಧಾರವಾಡ: ಧಾರವಾಡ ಲೋಕಸಭೆ ಕ್ಷೇತ್ರದ ಮತಗಟ್ಟೆಯಲ್ಲಿ ಊಟಕ್ಕಾಗಿ ಮತದಾನವನ್ನೇ (voting) ನಿಲ್ಲಿಸುವ ಮೂಲಕ ಸಿಬ್ಬಂದಿ‌ಗಳು ಎಡವಟ್ಟು ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ. 180ರಲ್ಲಿ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ತೆಗೆದುಕೊಂಡಿದ್ದಾರೆ. ಮತದಾರರನ್ನು ಕ್ಯೂ ನಿಲ್ಲಿಸಿ ಮತಗಟ್ಟೆ ಬಾಗಿಲು ಹಾಕಿ ಊಟಕ್ಕೆ ಕುಳಿತುಕೊಂಡಿದ್ದಾರೆ. ಸಿಬ್ಬಂದಿ...

22 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

Dharwad News: ಧಾರವಾಡ: ಧಾರವಾಡದಲ್ಲಿ ಭಾರತೀಯ ಸೇನೆಯ ನಿವೃತ್ಥ ಸೈನಿಕನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಯೋಧನಾಗಿ ಕಲ್ಲಪ್ಪ ಮಾರುತಿ ಕುಂದರಿಗಿ ಎಂಬುವವರು 22 ವರ್ಷಗಳ ಕಾಲ ಸೇವೆ ಸಲ್ಲಿಸಿ, ಧಾರವಾಡಕ್ಕೆ ಬಂದಿದ್ದು, ಇವರಿಗೆ ಹಾರ, ಶಾಲು ಹಾಕಿ, ಆರತಿ ಮಾಡಿ, ಗಾಡಿಯಲ್ಲಿ ಮೆರವಣಿಗೆ ಮಾಡಿ, ಅದ್ದೂರಿ ಸ್ವಾಗತ ಕೋರಲಾಗಿದೆ. ಕಲ್ಲಪ್ಪ ಅವರು ರೈಲು ನಿಲ್ದಾಣಕ್ಕೆ ಆಗಮಿಸಿದಾಗ,...

ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ಮಾಡಿದ ವಿನೋದ್‌ ಅಸೂಟಿ

Dharwad News: ಧಾರವಾಡ: ಶಿಗ್ಗಾಂವಿ ತಾಲ್ಲೂಕಿನ ಅಗಡಿ ಗ್ರಾಮಕ್ಕೆ ಆಗಮಿಸಿದ್ದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ - ಧರ್ಮ ಕ್ಷೇತ್ರ ಕೂಡಲಸಂಗಮ ಮಹಾಸ್ವಾಮೀಜಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ, ಅರವಿಂದ...

ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ‌ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ

Dharwad News: ಧಾರವಾಡ: ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿದ್ದು, ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ. ನೇಹಾ ಕೊಲೆ ಪ್ರಕರಣವನ್ನ ಧಾರವಾಡ ಮುಸ್ಲಿಂ ಸಮುದಾಯ ಖಂಡಿಸುತ್ತದೆ. ಈಗಾಗಲೇ ಕಠಿಣ ಕ್ರಮ ಆಗಬೇಕು ಎಂದು ಕಮಿಷನರ್ ಅವರಿಗೆ ಮನವಿ ಕೊಡಲಾಗಿದೆ. ಒಂದು ಸ್ಡುಡೆಂಟ್ ಅಂತ ನಾವು ನೋಡುತ್ತೇವೆ. ಒಂದು ವಿದ್ಯಾರ್ಥಿನಿಗೆ...

ಧಾರವಾಡದಲ್ಲಿ ಮುರಿದು ಬಿದ್ದ ಸಿಗ್ನಲ್ ಕಂಬ: ತಪ್ಪಿದ ಭಾರೀ ದುರಂತ

Dharwad News: ಧಾರವಾಡ: ಧಾರವಾಡದಲ್ಲಿ ಸಿಗ್ನಲ್ ಕಂಬ ಮುರಿದು ಬಿದ್ದಿದ್ದು, ಭಾರೀ ದುರಂತ ತಪ್ಪಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಧಾರವಾಡದ ಯುಬಿ ಹಿಲ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ವಾಹನ ಸವಾರರು ಪಾರಾಗಿದ್ದಾರೆ. ಕಂಬದ ಕೆಳಭಾಗದಲ್ಲಿ ತುಕ್ಕು ಹಿಡಿದಿದ್ದು, ರಭಸವಾಗಿ ಬೀಸಿದ ಗಾಳಿಗೆ ಕಂಬ ಮುರಿದು ಬಿದ್ದಿದೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. https://karnatakatv.net/neha-is-a-very-good-girl-fayazs-mother-apologized-to-the-people-of-the-state/ https://karnatakatv.net/no-one-else-can-give-peace-to-my-daughters-soul-help-yourself-nehas-father-appeals-to-joshi/ https://karnatakatv.net/neha-h-case-rs-10-lakh-to-fayaz-rumda-chendadi-prize-announcement/

ನೇಹಾ ತುಂಬಾ ಒಳ್ಳೆಯ ಹುಡುಗಿ : ಅವಳೇ ಮೊದಲು ಪ್ರಪೋಸ್ ಮಾಡಿದ್ದು: ಫಯಾಜ್ ತಾಯಿ ಮುಮ್ತಾಜ್

Dharwad News: ಧಾರವಾಡ : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧ ಆರೋಪಿ ತಾಯಿ ಮುಮ್ತಾಜ್ ಅವರು ರಾಜ್ಯದ ಜನರಿಗೆ ಕ್ಷಮೆಯಾಚಿಸಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗ ಮೊದಲು ಓದಿನಲ್ಲಿ ಬಹಳ ಜಾಣನಿದ್ದ. ಅವಳೇ (ನೇಹಾ) ಇವನಿಗೆ ಪ್ರಪೋಸ್ ಮಾಡಿದ್ದು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಅಂತ...

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

Dharwad News: ಧಾರವಾಡ : ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಮೋದಿ ಅವರ ಗಾಳಿ ಕಡಿಮೆ ಕಾಣುತ್ತಿದೆ. ಜನರ ನಂಬಿಕೆ ಬಿಜೆಪಿ ಕಳೆದುಕೊಂಡಿದೆ ಎಂದಿದ್ದಾರೆ. ಸುಳ್ಳು ಹೇಳಿ ಮನಸ್ಸು ಗೆದ್ದಿರುವ ಬಿಜೆಪಿ ಪರ ಜನರು ಇಲ್ಲ. 10 ವರ್ಷ ಏನು ಮಾಡಿದ್ರು ಅನ್ನೋದನ್ನ ಬಿಟ್ಟು ಬರೀ ಟೀಕೆ ಮಾಡುತ್ತಾರೆ. ಇದೇನು ಹೊಸದಲ್ಲ, ಅಮಿತ್ ಶಾ, ಮೋದಿ...

ಧಾರವಾಡದ ಮತ್ತೊಬ್ಬ ರೌಡಿಶೀಟರ್ ಗಡಿಪಾರು

Dharwad News: ಧಾರವಾಡ : ಧಾರವಾಡ ತೇಜಸ್ವಿನಗರ ನಿವಾಸಿ ರೌಡಿಶೀಟ‌ರ್ ಇರ್ಫಾನ್ ಶೇಖ್ ಅಲಿಯಾಸ್ ಛೋಟಾ ಇರ್ಫಾನ್ ಎಂಬಾತನನ್ನು ಗಡಿಪಾರು ಮಾಡಿ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಇರ್ಫಾನ್ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕವೂ ಆತ ಅಪರಾಧ ಕೃತ್ಯ ಮುಂದುವರೆಸಿದ್ದ. ಕಲಬುರ್ಗಿ ಜಿಲ್ಲೆ ನೆಲೋಗಲ್ ಪೊಲೀಸ್ ಠಾಣಾ...

ಮದುವೆ ಮನೆಗೆ ನುಗ್ಗಿ ಕನ್ನ ಹಾಕಿದ ಖದೀಮ: ಚಿನ್ನ, ವಜ್ರ ಲಕ್ಷ ಲಕ್ಷ ಹಣ ಲೂಟಿ

Dharwad News: ಧಾರವಾಡ: ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಪುತ್ರನ ಮದುವೆಯಲ್ಲಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ, ನಗದು ದೋಚಿ ಪರಾರಿಯಾಗಿರುವ ಘಟನೆ ಧಾರವಾಡದ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಂಗಾದರಪ್ಪ ಪಟ್ಟಣಶೆಟ್ಟಿ ಎಂಬುವವರ ಮಗ ಡಾ.ಶರಣಪ್ಪ ಹಾಗೂ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ ಗಿರಿಯಾಪುರ ಅವರ ಪುತ್ರಿ ಡಾ.ಪೂಜಾ ಅವರ...

ಧಾರವಾಡದಲ್ಲಿ ಮಾವಿನ ಬೆಳೆಗೆ ಮಂಜಿನ ಕಾಟ: ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

Dharwad News: ಮಾವಿನ ನಾಡು ಧಾರವಾಡದಲ್ಲಿ ಈ ಬಾರಿಯೂ ರೈತರಿಗೆ ಸಂಕಷ್ಟದ ಸಮಯ ಶುರುವಾಗಿದೆ. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ನಷ್ಟ ಅನುಭವಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ಒಳ್ಳೆಯ ಬೆಳೆಯ ನಿರೀಕ್ಷೆ ಇತ್ತು. ಆದರೆ, ಇದೀಗ ಎರಡು ದಿನಗಳಿಂದ ಬೀಳುತ್ತಿರುವ ಮಂಜು ಆತಂಕವನ್ನುಂಟು ಮಾಡಿದೆ. ಈ ಮಂಜು ಹೀಗೆಯೇ ಮುಂದುವರೆದಲ್ಲಿ...
- Advertisement -spot_img

Latest News

ಮದ್ವೆಯಾಗಿದ್ರು ಗರ್ಲ್‌ ಫ್ರೆಂಡ್‌ ಶೋಕಿ: ಕಳ್ಳನಿಂದ ಪ್ರೇಯಸಿಗೆ 3 ಕೋಟಿ ಮನೆ ಗಿಫ್ಟ್

News: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ . ಅಲ್ಲದೆ ಈತನು ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ...
- Advertisement -spot_img