Sunday, August 9, 2026

Hubli

Hubli News: ರೈತರ ಹೋರಾಟದ ವೇಳೆ ಡಿಸಿಪಿ ರವೀಶ್ ಭಾಷಣಕ್ಕೆ ಭಾರೀ ಮೆಚ್ಚುಗೆ

Hubli News: ಸಾಮಾನ್ಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿ ಕಾಣಿಸಿಕೊಳ್ಳುವ ಪೊಲೀಸ್ ಅಧಿಕಾರಿಯೊಬ್ಬರು, ರೈತರ ಹೋರಾಟದ ವೇದಿಕೆಯಲ್ಲಿ ಬಸವಣ್ಣನವರ ವಚನಗಳ ಮೂಲಕ ರೈತರ ಮಹತ್ವವನ್ನು ಸಾರಿದ ಅಪರೂಪದ ಕ್ಷಣವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಡಿಸಿಪಿ ರವೀಶ್ ಅವರ ಭಾಷಣಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯ ಹೆಸ್ಕಾಂ ಕಚೇರಿ ಎದುರು ನಡೆದ...

Hubli News: ನೀಟ್ ಹಗರಣ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

Hubli News: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ನೀಟ್ ಹಗರಣ ಖಂಡಿಸಿ ಇಂದು ಬೆಳಿಗ್ಗೆ 11.30ಕ್ಕೆ ಹುಬ್ಬಳ್ಳಿಯ ಬಿವಿಬಿ ವಿಶ್ವವಿದ್ಯಾಲಯ ವೃತ್ತದಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದ್ದು, ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ...

ವಿದ್ಯುತ್ ಸಮಸ್ಯೆ: ಎತ್ತಿನ ಬಂಡಿ- ಟ್ರ್ಯಾಕ್ಟರ್ ಮೂಲಕ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಸಾವಿರಾರು ರೈತರು

Hubli News: ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಸಾವಿರಾರು ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗಳು ಹಾಳಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ತಬೀಬ್‌ ಲ್ಯಾಂಡ್‌ನಲ್ಲಿರುವ ಹೆಸ್ಕಾಂ ಕಚೇರಿ ಆವರಣದಲ್ಲಿ ಇಂದು ರೈತರ ಆಕ್ರೋಶ ಭುಗಿಲೆದ್ದಿತ್ತು. ಎತ್ತಿನ ಬಂಡಿಗಳು, ಟ್ರ್ಯಾಕ್ಟರ್‌ಗಳು ಹಾಗೂ...

Hubli News: ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಲ್ಯಾಪ್‌ಟಾಪ್ ಕಳ್ಳರ ಬಂಧನ

Hubli News: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಿದ್ಯಾರ್ಥಿಗಳ ಪಿಜಿಗಳನ್ನು ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ ನೀಡಿ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ಬಿವಿಬಿ ಕಾಲೇಜು ಸುತ್ತಮುತ್ತಲಿನ ವಿದ್ಯಾರ್ಥಿಗಳ ಪಿಜಿಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿದ್ದವು. ವಿದ್ಯಾರ್ಥಿಗಳಂತೆ ಹಾಡಹಗಲೇ...

Hubli News: ಕಾರ್ ಸೈಡ್ ವಿಚಾರಕ್ಕೆ ಮಧ್ಯರಸ್ತೆಯಲ್ಲೇ ರೌಡಿಸಂ..!

Hubli News: ಹುಬ್ಬಳ್ಳಿಯಲ್ಲಿ ಕ್ಷುಲಕ ವಿಚಾರಕ್ಕೆ ಆರಂಭವಾದ ಜಗಳ ಮಾರಣಾಂತಿಕ ಹಲ್ಲೆಗೆ ತಿರುಗಿದೆ. ಕಾರ್ ಸೈಡ್ ವಿಚಾರಕ್ಕೆ ಯುವಕನನ್ನು ಮಧ್ಯರಸ್ತೆಯಲ್ಲೇ ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ಕಾರ್ ಸೈಡ್ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಕ್ಷಣಾರ್ಧದಲ್ಲೇ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ....

Karnataka TV Impact: ಮಂಟೂರು ರಸ್ತೆ ಬಗ್ಗೆ ಕರ್ನಾಟಕ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

Dharwad News: ಮಂಟೂರ್ ಗ್ರಾಮದ ರಸ್ತೆ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕರ್ನಾಟಕ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಈಗ ಆಡಳಿತ ಯಂತ್ರ ಚುರುಕಾಗಿದೆ. ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರ ಅಳಲಿಗೆ ಕೊನೆಗೂ ಅಧಿಕಾರಿಗಳು ಸ್ಪಂದಿಸಿದ್ದು, ಸ್ಥಳಕ್ಕೆ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಂಟೂರ್ ಗ್ರಾಮಸ್ಥರು...

ಧಾರವಾಡದಲ್ಲಿ ನಡುಕ ಹುಟ್ಟಿಸಿದ್ದ ಆ ಕಿಲಾಡಿ ಕಳ್ಳರು ಕೊನೆಗೂ ಲಾಕ್

ಧಾರವಾಡ ನಗರದಲ್ಲಿ ನಡೆದ ಸರ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲಾಗಿದೆ. ಬಂಧಿತರನ್ನು ಹುಬ್ಬಳ್ಳಿ ಮೂಲದ ಅಸೀಫ್ ಕಾಶಿಂಸಾಬ ಬೇಗ್ ಮತ್ತು ಅಮ್ಮಿನಭಾವಿ ಗ್ರಾಮದ ಗುರುಪ್ರಸಾದ ಶಿವಾನಂದ...

Hubli News: ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98.08 ಅಂಕ ಪಡೆದು ಸೈ ಎನ್ನಿಸಿಕೊಂಡ ಆಟೋ ಚಾಲಕನ ಮಗಳು

Hubli News: ಹುಬ್ಬಳ್ಳಿ: ಆಕೆ ಬಡ ಚಾಲಕನ ಮಗಳು. ಹುಟ್ಟಿ ಬೆಳೆದಿದ್ದು, ಬಡತನದಲ್ಲಿಯೇ ಆದರೂ, ಸಾಧನೆಯಲ್ಲಿ ಸಿರಿವಂತಳಾಗಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಓದಿ ಶೇ. 98.08ರಷ್ಟು ಅಂಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿನಿ ಶಕುಂತಲಾ ಹಸಬಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಈಕೆ ಕನ್ನಡ 125,...

Hubli News: ಮೊಬೈಲ್ ಕೊಡದಿದ್ದಕ್ಕೆ ಕೋಪದಲ್ಲಿ ತಪ್ಪು ನಿರ್ಧಾರ ಮಾಡಿದ 14 ವರ್ಷದ ಬಾಲಕ

Hubli News: ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಮಕ್ಕಳು ಕೂಡ ಮೊಬೈಲ್‌ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಕೊಡದಿದ್ರೆ ಊಟ ಮಾಡುವುದಿಲ್ಲ ಎನ್ನುವುದು ಕಂಡಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆಯೊಂದು ನಡೆದಿದೆ. ಹೌದು,,, ಹುಬ್ಬಳ್ಳಿಯ ಉದಯ ನಗರ ನಿವಾಸಿ ಸಮರ್ಥ ಎಂಬ ಬಾಲಕ ಆತ್ಮಹತ್ಯೆಗೆ ಶರಣಾದ ದುರ್ದೈವಿ....

Hubli News: ರಾತ್ರೋರಾತ್ರಿ ಜಾನುವಾರು ಕಳ್ಳರ ಹಾವಳಿ ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿದೆ ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದೊಡ್ಡ ಕಾರುಗಳನ್ನು ಬಳಸಿ ನಡುರಾತ್ರಿ ಸಮಯದಲ್ಲಿ ಜಾನುವಾರುಗಳನ್ನು ಡಿಕ್ಕಿಯಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಪ್ರಕರಣದ ಹಿನ್ನೆಲೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜಾನುವಾರು...
- Advertisement -spot_img

Latest News

Hubli News: ಜನರ ಭಕ್ತಿಯ ದುರುಪಯೋಗ: ಮಾರ್ಡನ್ ಅವಧೂತನ ಅಸಲಿ ಮುಖ ಬಯಲು

Hubli News: ಜನ ಮರಳೋ… ಜಾತ್ರೆ ಮರಳೋ… ಮಾನವ ಚಂದ್ರನ ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ....
- Advertisement -spot_img