Wednesday, October 22, 2025

karnataka news updates

ಜೆ.ಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ವಿತರಣೆ

Banglore News: ಗಣೇಶ ಚತುರ್ಥಿಯ ಪ್ರಯುಕ್ತ ಜೆ.ಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 10 ಸಾವಿರ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ವಿತರಣೆಯನ್ನು ಆಯೋಜಿಸಲಾಗಿದೆ. ಪ್ರತಿವರ್ಷ ಹೊಸದೊಂದು ಥೀಮ್‌ ನಲ್ಲಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸುವ ಹಾಗೂ ವಿಶೇಷ ಅಲಂಕಾರವನ್ನು ಮಾಡುವ ಮೂಲಕ ದೇಶದ ಗಮನವನ್ನು ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ...

ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ…! ಪ್ರಯಾಣಿಕರ ಎದೆ ಢವ ಢವ…!

Chikkaballapura News: ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಶಿಡ್ಲಘಟ್ಟ ಪಟ್ಟಣಕ್ಕೆ ಹೊರಟಿತ್ತು. ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಶಿಡ್ಲಘಟ್ಟ ರಸ್ತೆಯ ಮಿನಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲುತ್ತಿದ್ದಂತೆ… ಬಸ್ಸಿನಲ್ಲಿ ಮಾರುದ್ದ ನಾಗರ ಹಾವೊಂದು ಪ್ರತ್ಯಕ್ಷವಾಗಿ ಹೆಡೆ ಎತ್ತಿತ್ತು. ಇದನ್ನು ಕಂಡ ಪ್ರಯಾಣಿಕರು ಕಿರುಚಾಡುತ್ತಲೆ… ಒಬ್ಬರ ಮೇಲೊಬ್ಬರು ಬಿದ್ದು ಬಸ್ಸಿನಿಂದ ಇಳಿಯಲು ಯತ್ನಿಸಿದರು....

ಕಾಸರಗೋಡು: ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳ ಯತ್ನ..!

Kasaragod News: ಕೇರಳದ  ಕಾಸರಗೋಡಿನ ಬೇಕಲ ಸಮೀಪದ ಕೋಟಿಕುಳಂನಲ್ಲಿ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲನ್ನು ಹಳಿಗಳಿಂದ ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಸರಗೋಡಿನ ಕೋಟಿಕುಳಂ ಮತ್ತು ಬೇಕಲ ನಡುವಿನ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ದಿನಗಳ ಹಿಂದೆ ಕಬ್ಬಿಣದ ಸರಳುಗಳು, ಕಾಂಕ್ರೀಟ್ ಕಲ್ಲುಗಳನ್ನಿಟ್ಟು...

ಮೇಘನಾ ರಾಜ್ ಕೈಯಲ್ಲಿ ಆ ಹೆಸರು…? ಎರಡನೇ ಮದುವೆ ವಿಚಾರಕ್ಕೆ ಉತ್ತರ ಇದೇನಾ..?!

Film News: ಪತಿ ಚಿರಂಜೀವಿ ಸರ್ಜಾ ಅವರ ನೆನಪುಗಳು ಮೇಘನಾ ರಾಜ್ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಇರಲಿವೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಗಿದೆ. ಹೊಸದಾಗಿ ಟ್ಯಾಟೂ ಹಾಕಿಸಿಕೊಂಡು  ಮೇಘನಾ  ಪ್ರೀತಿಯನ್ನು ಶಾಶ್ವತವಾಗಿಸಿದ್ದಾರೆ. ಮೇಘನಾ ರಾಜ್​ ಸರ್ಜಾ ಅವರು ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದಾರೆ. ಅಲ್ಲಿಂದಲೇ ಅನೇಕ...

ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!

Crime News: ನಟಿ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಅನುಮಾನಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದೇ ಕೊಲೆ ವಿಚಾರ ಬಯಲಿಗೆ ಬರಲು ಕಾರಣವಾಯಿತು. ಹೃದಯಾಘಾತದ ಸಾವು ಎಂದು ಭಾವಿಸಿದ್ದ ಪೊಲೀಸರು, ತನಿಖೆ ಮುಂದುವರಿದಂತೆ ಹೊರಬರುತ್ತಿರುವ ಒಂದೊಂದೇ ಸಂಗತಿಗಳನ್ನು ಕಂಡು ಸ್ವತಃ ಅಚ್ಚರಿಗೆ ಒಳಗಾಗುತ್ತಿದ್ದಾರೆ. ಸೊನಾಲಿ ಅವರಿಗೆ ಮಾದಕ ವಸ್ತುವನ್ನು ನೀಡಲಾಗಿತ್ತು ಎಂಬುದು...

ಬೆಂಗಳೂರಿನಲ್ಲಿ ಧಾರಾಕಾರಾ ಮಳೆ: ಜನರು ಹೈರಾಣ

Banglore News: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತಡರಾತ್ರಿಯಿಂದಲೇ ಶುರುವಾದ ಮಳೆ ಬೆಳಗ್ಗೆವರೆಗೂ ಭರ್ಜರಿಯಾಗಿ ಸುರಿದಿದೆ. ಸತತ ಮೂರು ಗಂಟೆಗಳಿಂದ ನಿರಂತರ ಮಳೆ ಸುರಿದಿದೆ. ಶಿವಾಜಿನಗರ, ವಿದ್ಯಾರಣ್ಯಪುರ, ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ 5 ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ....

ಮಂಡ್ಯದಲ್ಲಿ ನೂತನ ವಿವಿ ಸ್ಥಾಪನೆ: ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರಿಗೆ ಸಚಿವ ಡಾ.ನಾರಾಯಣಗೌಡ ಧನ್ಯವಾದ ಸಲ್ಲಿಕೆ

Mandya News: ಮಂಡ್ಯ, ಆ.26:  ಸಚಿವ ಸಂಪುಟ ಸಭೆಯಲ್ಲಿ ಮಂಡ್ಯ ಸೇರಿದಂತೆ ರಾಜ್ಯದಲ್ಲಿ 8 ನೂತನ ವಿಶ್ವ ವಿದ್ಯಾಲಯಗಳ ಸ್ಥಾಪನೆ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ...

ಸ್ನೇಹಿತೆಯಿಂದಲೇ ಕೊಲೆಯಾದ ಚಂದ್ರಕಲಾ…! 1 ವರ್ಷದ ಬಳಿಕ ರಹಸ್ಯ ಬಯಲು..!

Banglore Crime News: ವಿಠಲ ನಗರದ ಚಂದ್ರಕಲಾ ಬಾಲ್ಯದಿಂದ ಅನಾಥೆಯಾಗಿದ್ರೂ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದ ದಿಟ್ಟೆ. ಆದರೆ, ಒಂದು ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಈಕೆ ಕಥೆ  ದುರಂತದಲ್ಲಿಅಂತ್ಯ ಕಂಡಿದೆ. ಹೌದು, ಇತ್ತೀಚೆಗೆ ಠಾಣೆಯಲ್ಲಿ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಕಡತಗಳಿಗೆ ಮುಕ್ತಿ ನೀಡಲು ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಎರ್ರಿಸ್ವಾಮಿ ನೇತೃತ್ವದ ತಂಡ ಚಂದ್ರಕಲಾ ನಾಪತ್ತೆ ಫೈಲ್‌ ಧೂಳು ಕೊಡವಿ...

ಡೆಲಿವರಿ ಬಾಯ್ ಗುಂಡು ಹಾರಿಸಿದ ಸಹೋದರರು…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!

Utthar Pradesh News: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹರಿದ 200 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಪಿಜ್ಜಾ ಡೆಲಿವರಿ ಬಾಯ್‌ನ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಡೆಲಿವರಿ ಬಾಯ್‌ ಸಚಿನ್ ಕಶ್ಯಪ್ ಸ್ಥಿತಿ ಗಂಭೀರವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಹೋದರರು ಫೋನ್ ಮೂಲಕ ಪಿಜ್ಜಾವನ್ನು ಆರ್ಡರ್ ಮಾಡಿದ್ದು, ಪಿಜ್ಜಾ...

ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಎಕ್ಸ್-ಲೈನ್ ಕಾರು

Technology News: ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದೀಗ ಕಿಯಾ ಇಂಡಿಯಾದ ಅಧಿಕೃತವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಕ್ಸ್ ಲೈನ್ ರೂಪಾಂತರ ಟೀಸರ್ ಅನ್ನು ಬಿಡುಗಡೆಗೊಳಿಸಿದೆ....
- Advertisement -spot_img

Latest News

ನಾನು ಹೆಮ್ಮೆಯ ಕನ್ನಡಿಗಳು : ಮಜುಂದಾರ್‌ ಶಾ ತಿರುಗೇಟು

ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ರಾಶಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉದ್ಯಮಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಸರ್ಕಾರ–ಐಟಿ...
- Advertisement -spot_img