ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರೋ ಅಕ್ಕಿಯ ಪ್ರಮಾಣವನ್ನು ಏರಿಕೆ ಮಾಡುವ ಕುರಿತಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಕಿ ವಿತರಣೆ ಜಾಸ್ತಿ ಮಾಡಿ ಅಂತ ಕಾಂಗ್ರೆಸ್, ಇಲ್ಲ ಜಾಸ್ತಿ ಮಾಡೋ ಚಾನ್ಸೇ ಇಲ್ಲ, ಅಂತ ಜೆಡಿಎಸ್ ಸಚಿವರು. ಹೀಗೆ ಚೌಕಾಸಿ ಮಾಡಿ ಕೊನೆಗೆ ಯಥಾವತ್ತಾಗಿ ಯೋಜನೆ ಮುಂದುವರಿಸಲು ತೀರ್ಮಾನ ಮಾಡಲಾಯ್ತು.
ಸಚಿವ...
ಕೋಲಾರ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನ ಕಾಂಗ್ರೆಸ್ ಗೆ ಮಾರಾಟ ಮಾಡಿದ್ದಾರೆ ಅಂತ ಮಾಜಿ ಶಾಸಕ ಮಂಜುನಾಥ್ ಗೌಡ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ, ಜಿಲ್ಲೆಯಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಕಾರಣ. ಮಾಲೂರು ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಅಂತ...
ಬೆಂಗಳೂರು: ಎಕ್ಸಿಟ್ ಪೋಲ್ ರಿಪೋರ್ಟ್ ಬಂದಾಗಿನಿಂದ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ನಾಯಕರು ಫಲಿತಾಂಶ ಬಂದ ಮೇಲೆ ಸುಮ್ಮನಾಗಿದ್ರು. ಆದ್ರೆ
ಇದೀಗ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವಿಎಂ, ವಿವಿ ಪ್ಯಾಟ್ ಹೊಂದಾಣಿಕೆಯಲ್ಲಿ ವ್ಯತ್ಯಾಸವಿದೆ. ಎರಡೂ...
ಬೆಂಗಳೂರು: ಸರ್ಕಾರ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡುತ್ತಿರೋ ಮೈತ್ರಿ ನಾಯಕರ ತಲೆಗೆ ಪಕ್ಷೇತರ
ಶಾಸಕರು ಹುಳ ಬಿಡುತ್ತಿದ್ದಾರೆ.
ಹೇಗಾದ್ರೂ ಮಾಡಿ ಪಕ್ಷೇತರ ಶಾಸಕರನ್ನ ತಮ್ಮತ್ತ ಸೆಳೆದು ಅವರು ಹೇಳಿದ ಷರತ್ತುಗಳಿಗೆಲ್ಲಾ ಒಪ್ಪಿಕೊಳ್ತೇವೆ ಅಂತ ಹೇಳಿದ್ದ ದೋಸ್ತಿಗಳಿಗೆ ಇದೀಗ ಗೊಂದಲ ಎದುರಾಗಿದೆ. ಯಾಕಂದ್ರೆ ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಯಾರ ಪರ ಇದ್ದಾರೆ, ಅವರ ಉದ್ದೇಶ...
ಬೆಂಗಳೂರು: ರಾಜ್ಯದ ಚುನಾವಣಾ ಫಲಿತಾಂಶ ನನಗೆ ದಿಗ್ಬ್ರಮೆ ಮೂಡಿಸಿದೆ. ಈ ಫಲಿತಾಂಶವನ್ನ ನಾನೆಂದೂ
ನಿರೀಕ್ಷೆ ಮಾಡಿರಲಿಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾನು ಪಕ್ಷದ ಅನುಮತಿ ಪಡೆದು ಫ್ಯಾಮಿಲಿ ಟ್ರಿಪ್ ಗೆ ಹೋಗಿದ್ದೆ. ಇದೀಗ ರಾಜ್ಯಕ್ಕೆ ಬಂದಿರೋ ನನಗೆ ಫಲಿತಾಂಶ ದಿಗ್ಬ್ರಮೆ ಮೂಡಿಸಿದೆ. ನನ್ನ ಸಹೋದರ ಗೆದ್ದಿದ್ದಾನೆ ಅನ್ನೋ ಖುಷಿಯೂ...
ಬೆಂಗಳೂರು: ಒಂದೆಡೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಿ ಹೇಗಾದ್ರೂ ಮನವೊಲಿಸಿಕೊಳ್ಳೋದಕ್ಕೆ ದೋಸ್ತಿಗಳು ಪ್ರಯತ್ನ ಮಾಡ್ತಿದ್ದಾರೆ. ಮತ್ತೊಂದೆಡೆ ಇದೇ ಅತೃಪ್ತ ಶಾಸಕರ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ದಾರಿ ತಪ್ಪಿಸೋ ಯತ್ನ ನಡೆಸುತ್ತಿದ್ದಾರೆ.
ಆಪರೇಷನ್ ಕಮಲದ ಭೀತಿಯಿಂದಾಗಿ ಅತೃಪ್ತ ಶಾಸಕರನ್ನ ಸಚಿವರನ್ನಾಗಿ ಪ್ರಮೋಟ್ ಮಾಡೋ ದೋಸ್ತಿಗಳ ಐಡಿಯಾ ಏನೋ ವರ್ಕ್ ಔಟ್ ಆಗೋ ರೀತಿ...
ಮಂಡ್ಯ: ಜಿಲ್ಲಾ ಜೆಡಿಎಸ್ ನವರು
ಕಾಂಗ್ರೆಸ್ಸಿಗರಿಗೆ ನಿರಂತವಾಗಿ ಕಿರುಕುಳ ನೀಡ್ತಿದ್ದಾರೆ. ಹೀಗೆ ಆದ್ರೆ ನಾವು ಬೀದಿಗಿಳಿದು ಹೋರಾಟ
ಮಾಡ್ತೀವಿ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ
ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ಸಿಗರನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕಿರುಕುಳ ನೀಡ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ಮಂಡ್ಯ ಕಾಂಗ್ರೆಸ್ಸಿಗರು ಸಭೆ...
ಬೆಂಗಳೂರು: ಮೈತ್ರಿ ಸರ್ಕಾರ ಇವತ್ತು ಪತನವಾಗುತ್ತೆ, ನಾಳೆ ಪತನವಾಗುತ್ತೆ ಅಂತ ಬಿಜೆಪಿ ನಾಯಕರು ಬಾಂಬ್ ಹಾಕ್ತಿರೋದು ಇದೀಗ ದೋಸ್ತಿಗಳಿಗೆ ತಲೆನೋವಾಗಿದೆ. ಒಂದು ವೇಳೆ ಅವರು ಹೇಳಿದ ಹಾಗೆ ಆದರೆ ಏನ್ ಮಾಡೋದು ಅಂತ ಲೆಕ್ಕಾಚಾರ ಹಾಕಿರೋ ಮೈತ್ರಿ ಪಕ್ಷದ ನಾಯಕರು ಸಖತ್ ಪ್ಲಾನ್ ಮಾಡಿದ್ದಾರೆ.
ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿಬಿಡ್ತಾರೆ ಅನ್ನೋ ಭಯದಿಂದ ಇದೀಗ...
ಚಿತ್ರದುರ್ಗ: ಮೈತ್ರಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೊಡೆತ ಬಿದ್ದಿದೆ ಅಂತ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಆಂಜನೇಯ, ಮೈತ್ರಿ ಸರ್ಕಾರ ನಡೆಸಲು ಸೀಮಿತವಾಗಿ ಚುನಾವಣೆ ಪ್ರತ್ಯೇಕವಾಗಿ ಮಾಡಬೇಕಿತ್ತು. ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೊಡೆತ ಬಿದ್ದಿಲ್ಲ. ಜೆಡಿಎಸ್ ಪಕ್ಷಕ್ಕೂ ಮೈತ್ರಿ ಹೊಡೆತ ಬಿದ್ದಿದೆ.
ಚುನಾವಣೆಯಲ್ಲಿ ಮೈತ್ರಿ ಬೇಕಿರಲಿಲ್ಲ ಅಂತ ಆಂಜನೇಯ ಅಭಿಪ್ರಾಯ...
ಬೆಂಗಳೂರು: ಬೆಂಗಳೂರು ಉತ್ತರ ಲೋಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿನ್ನೆಯಷ್ಟೇ ತಮ್ಮನ್ನು ಟೀಕಿಸಿದ್ದ ಸಿದ್ದಾರಮಯ್ಯ ವಿರುದ್ಧ ಟ್ವೀಟ್ ಮಾಡೋ ಮೂಲಕ ಸದಾನಂದಗೌಡ ಕಿಡಿ ಕಾರಿದ್ದಾರೆ.
ದುರಹಂಕಾರದಿಂದ ನನ್ನನ್ನು ಟೀಕಿಸಿದ, ನನ್ನ ನಗುವನ್ನು ಅಪಹಾಸ್ಯಗೈದ, ವೈಯುಕ್ತಿಕ ನಿಂದನೆಗೆ ಇಳಿದ ಅತಿ ಬುದ್ದಿವಂತ ವಿರೋಧ ಪಕ್ಷ ನಾಯಕರುಗಳಿಗೆ ನನ್ನ...