Tuesday, October 15, 2024

Latest Posts

ಸಂಪುಟದಿಂದ ಯಾರಿಗೆ ಕೊಕ್ ಕೊಡ್ತಾರೆ ಸಿಎಂ…?

- Advertisement -

ಬೆಂಗಳೂರು: ಮೈತ್ರಿ ಸರ್ಕಾರ ಇವತ್ತು ಪತನವಾಗುತ್ತೆ, ನಾಳೆ ಪತನವಾಗುತ್ತೆ ಅಂತ ಬಿಜೆಪಿ ನಾಯಕರು ಬಾಂಬ್ ಹಾಕ್ತಿರೋದು ಇದೀಗ ದೋಸ್ತಿಗಳಿಗೆ ತಲೆನೋವಾಗಿದೆ. ಒಂದು ವೇಳೆ ಅವರು ಹೇಳಿದ ಹಾಗೆ ಆದರೆ ಏನ್ ಮಾಡೋದು ಅಂತ ಲೆಕ್ಕಾಚಾರ ಹಾಕಿರೋ ಮೈತ್ರಿ ಪಕ್ಷದ ನಾಯಕರು ಸಖತ್ ಪ್ಲಾನ್ ಮಾಡಿದ್ದಾರೆ.

ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿಬಿಡ್ತಾರೆ ಅನ್ನೋ ಭಯದಿಂದ ಇದೀಗ ಅಸಮಾಧಾನ ಹೊಂದಿರೋ ಮತ್ತು ಸಚಿವ ಸ್ಥಾನದ ಆಸೆ ಇಟ್ಟುಕೊಂಡಿದ್ದವರಿಗೆ ಮಣೆ ಹಾಕಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಈಗಾಗಲೇ ಖಾಲಿ ಇರುವ 3 ಸಚಿವ ಸ್ಥಾನವನ್ನು ಭರ್ತಿ ಮಾಡೋ ನಿಟ್ಟಿನಲ್ಲಿ ಬುಧವಾರ ಸಂಪುಟ ವಿಸ್ತರಣೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳ ಜೊತೆ ಸಿದ್ದಾರಮಯ್ಯ ನಿವಾಸದಲ್ಲಿ  ಈಗಾಗಲೇ ಚರ್ಚಿಸಲಾಗಿದ್ದು. ಇನ್ನು ಈ 3 ಸಚಿವ ಸ್ಥಾನವನ್ನು ಭರ್ತಿ ಮಾಡಿದ ಮೇಲೆ ಹಾಲಿ ಸಚಿವರನ್ನ ಸಂಪುಟದಿಂದ ಕೈಬಿಡೋ ಚಿಂತನೆ ಕೂಡ ಸಿಎಂ ಕುಮಾರಸ್ವಾಮಿ ಮಾಡಿದ್ದಾರೆ.

ಈ ತಪ್ಪುಗಳು ಆಗದೇ ಇದ್ರೆ ದೇವೇಗೌಡ್ರು ಗೆಲ್ತಿದ್ರೋ ಏನೋ…!! ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=jIf0DfGwMOc
- Advertisement -

Latest Posts

Don't Miss