www.karnatakatv.net: ರಾಯಚೂರು: ಬೇವಿನ ಮರಗಳಿಗೆ ವಿಚಿತ್ರ ರೋಗ ತಗುಲುತ್ತಿದ್ದು ರಾಯಚೂರಲ್ಲಿ ನೂರಾರು ಬೇವಿನ ಮರಗಳು ಒಣಗುತ್ತಿವೆ.
ಸಿಂಧನೂರು ತಾಲೂಕಿನಾದ್ಯಂತ ಸಾವಿರಾರು ಬೇವಿನ ಮರಗಳು ಏಕಾಏಕಿ ಒಣಗತೊಡಗಿವೆ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೇವಿನ ಮರಗಳು ಇದೀಗ ಒಣಗುತ್ತಿದ್ದು ಎಲೆಗಳಲೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇನ್ನು ರಸ್ತೆ ಬದಿಗಳಲ್ಲಿ ಒಣಗಿ ನಿಂತ ಮರಗಳು ಯಾವುದೇ ಸಮಯದಲ್ಲಾದ್ರೂ ಬಿದ್ದುಹೋಗಬಹುದು...