Saturday, July 12, 2025

Latest Posts

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

- Advertisement -

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.

ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಪಟ್ಟಣದ ಲಷ್ಮಿ ನಗರ ಹಾಗೂ ಬಸವನ ಬಾಗೇವಾಡಿಯಿಂದ ಜೈನಾಪುರಕ್ಕೆ ಹೋಗುವ ರಸ್ತೆಯಲ್ಲಿ ಹೊಲದಲ್ಲಿ ರೇಡ್ ಮಾಡಿದ್ದಾರೆ.

ಬಸವನ ಬಾಗೇವಾಡಿಯ ಸಿಪಿಐ ಗುರುಶಾಂತಗೌಡ ದಾಸ್ಯಾಳ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು,  ಲಷ್ಮಿ ನಗರದಲ್ಲಿ ನಾಲ್ಕು ಲೀಟರ್ ಹಾಗೂ ಜೈನಾಪುರ ರಸ್ತೆಯ ಹೊಲದಲ್ಲಿ 25-30 ಕೊಡದಲ್ಲಿ ತುಂಬಿದ ಕಳ್ಳ ಬಟ್ಟೆ ಸಾರಾಯಿ ಹಾಗೂ ತಯಾರಿಸುತ್ತಿದ್ದ ಕಚ್ಚಾ ಸಾಮಗ್ರಿಗಳನ್ನು ನಾಶ ಪಡಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest Posts

Don't Miss