Monday, January 26, 2026

Tumkur

ಅಹೋರಾತ್ರಿ ಧರಣಿಗೆ ದಾಳಿ : ಶಾಂತ ಹೋರಾಟಕ್ಕೆ ಅಡ್ಡಿ

ಹುಳಿಯಾರು ಪಟ್ಟಣದಲ್ಲಿ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದ ಅಹೋರಾತ್ರಿ ಧರಣಿಗೆ ಕಿಡಿಗೇಡಿಗಳು ಅಡ್ಡಿಪಡಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಶಾಂತವಾಗಿ ಧರಣಿ ನಡೆಸುತ್ತಿದ್ದ ರೈತ ಸಂಘದ ಕಾರ್ಯಕರ್ತರ ಬ್ಯಾನರ್‌ಗಳನ್ನು ಕಿತ್ತು ಹಾಕಿ, ಧರಣಿ ಸ್ಥಳದಲ್ಲಿದ್ದ ಗುಡಾರಕ್ಕೆ ಬೆಂಕಿ ಹಚ್ಚಿರುವುದಾಗಿ ರೈತರು ಆರೋಪಿಸಿದ್ದಾರೆ. ಈ ಘಟನೆಯಿಂದ ಧರಣಿ ಸ್ಥಳದಲ್ಲಿ ಕೆಲಕಾಲ ಗೊಂದಲದ...

ಕಲ್ಲುಗಣಿಗಾರಿಕೆಗೆ ರೊಚ್ಚಿಗೆದ್ದ ರೈತರು! ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಕುಣಿಗಲ್ ತಾಲ್ಲೂಕಿನ ಹಿತ್ತಾಪುರ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಅನುಮತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕುಣಿಗಲ್ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು. ಹಿತ್ತಾಪುರ ಗ್ರಾಮದ ಸರ್ವೆ ನಂಬರ್ 52ರಲ್ಲಿ ಕಲ್ಲುಗಣಿಗಾರಿಕೆಗೆ ತಾಲೂಕು ಆಡಳಿತ ಅನುಮತಿ ನೀಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಉಜಿನಿ ಚೌಡೇಶ್ವರಿ ದೇವಸ್ಥಾನಕ್ಕೆ ಸೇರಿದ ಬೆಟ್ಟ ಪ್ರದೇಶವಾಗಿರುವುದರಿಂದ...

ಸಮಾಜ ತಿದ್ದುವ ಸಾಧನ ಪತ್ರಿಕೋದ್ಯಮ – ಶಾಸಕ ಷಡಕ್ಷರಿ

ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಪತ್ರಕರ್ತರಿಗೆ ಸಮಾಜವು ಗೌರವ ನೀಡುತ್ತದೆ. ಆಡಳಿತದಲ್ಲಿ ತಪ್ಪುಗಳಾಗಿದಾಗ ತಿದ್ದುವ ಜವಾಬ್ದಾರಿ ಪತ್ರಿಕಾಗಳದ್ದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಕೆ. ಷಡಕ್ಷರಿ ಹೇಳಿದರು. ಕಲ್ಪತರು ಕ್ರಾಂತಿ ವಾರಪತ್ರಿಕೆಯ 13ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ಲೋಕ ನಾಲ್ಕನೇ ಅಂಗವಾಗಿ...

APMCಯಲ್ಲಿ ಕಮೀಷನ್ ಹಾವಳಿಗೆ ಗರಂ ಆದ ಉಪ ಲೋಕಾಯುಕ್ತ !

ಇಂದು ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಪಟೂರು ನಗರದ ವಿವಿಧ ಸ್ಥಳಗಳಿಗೆ ಅಚಾನಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ತರಕಾರಿ ಮಾರುಕಟ್ಟೆ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಬಾಲಕರ ವಿದ್ಯಾರ್ಥಿ ವಸತಿಗೃಹ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರು ಪರಿಸ್ಥಿತಿ ನೇರವಾಗಿ ಅವಲೋಕಿಸಿದರು. ತರಕಾರಿ ಮಾರುಕಟ್ಟೆ ಪರಿಶೀಲನೆಯ ವೇಳೆ, ದಲ್ಲಾಳಿಗಳ ಕಮಿಷನ್ ಹಾವಳಿ ಕುರಿತು ರೈತರು...

ಅಧಿಕಾರಿಗಳಿಗೆ ಲಂಚ ಕೊಡಲು ಭಿಕ್ಷಾಟನೆಗೆ ಇಳಿದ BJP ಮುಖಂಡ ?

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭ್ರಷ್ಟಾಚಾರದ ವಿರುದ್ಧ ವಿಶಿಷ್ಟವಾದ ಪ್ರತಿಭಟನೆ ನಡೆದಿದೆ. ಬಿಜೆಪಿ ಓಬಿಸಿ ಮುಖಂಡ ಮುರುಳಿ ಅವರು ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಭಿಕ್ಷಾಟನೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೆಂಕಾಟಪುರ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹೇಮಂತ್ ಅವರ ವಿರುದ್ಧ ಲಂಚ ಬೇಡಿಕೆಯ ಆರೋಪ ಹೊರಿಸಿದ್ದಾರೆ. ಅನಿತಾ ಎಂಬುವರ ಹೆಸರಿನಲ್ಲಿ ದಾಖಲಾಗಿದ್ದ 30x40 ನಿವೇಶನದ ಖಾತೆ...

ನಮ್ಮ ಮೆಟ್ರೋ ಗುಡ್‌ನ್ಯೂಸ್‌! ನೆಲಮಂಗಲ–ದಾಬಸ್‌ಪೇಟೆ–ತುಮಕೂರು

ಬೆಂಗಳೂರು ಮೆಟ್ರೋ ಮೊದಲ ಬಾರಿಗೆ ಅಂತರಜಿಲ್ಲೆ ಸಂಪರ್ಕದತ್ತ ಹೆಜ್ಜೆಯಿಡುತ್ತಿದೆ. 59.6 ಕಿ.ಮೀ ಉದ್ದದ ಹಸಿರು ಮಾರ್ಗ ವಿಸ್ತರಣೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ ತಯಾರಿಸಲು BMRCL ಟೆಂಡರ್ ಆಹ್ವಾನಿಸಿದೆ. ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿರುವ ಈ ಯೋಜನೆಗೆ ಕಂಪನಿಗಳು 4.5 ಲಕ್ಷ ರೂಪಾಯಿ ಠೇವಣಿ ಇಡಬೇಕಿದ್ದು, ನವೆಂಬರ್ 20ರವರೆಗೆ ಬಿಡ್ ಸಲ್ಲಿಸಲು ಗಡುವು ನಿಗದಿಯಾಗಿದೆ. ನವೆಂಬರ್ 21ರಂದು...

DK ಸಿಎಂ ಆಗಲು ಪ್ರಾರ್ಥನೆ – ಅಭಿಮಾನಿಗಳಿಂದ ಚಂಡಿಕಹೋಮ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗ ದೇವರ ಮೊರೆ ಹೋಗಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರು ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಆಶಯದೊಂದಿಗೆ ಭವ್ಯ ಚಂಡಿಕಾ ಹೋಮ ಆಯೋಜಿಸಿದ್ದಾರೆ. ಹುಲಿಯೂರಮ್ಮ ದೇವಾಲಯದ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತಿ ಮತ್ತು ಭರವಸೆಯ ವಾತಾವರಣದಲ್ಲಿ ನಡೆದ ಈ ಹೋಮದಲ್ಲಿ ನೂರಾರು ಮಂದಿ...

12 ವರ್ಷದ ಹಿಂದೆ ನಾಪತ್ತೆ : ಈಗ ಧರ್ಮಸ್ಥಳದಲ್ಲಿ ಐಡಿ ಪತ್ತೆ!

ತುಮಕೂರು: ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ತಿ ಪಂಜರ ಪಕ್ಕದಲ್ಲಿ ತುಮಕೂರು ಜಿಲ್ಲೆಯ ಯುವಕನ ಐಡಿ ಸಿಕ್ಕಿದೆ. 12 ವರ್ಷಗಳಿಂದ ನಾಪತ್ತೆಯಾಗಿದ್ದ ಆ ಯುವಕನ ಗುರುತು ಸಿಕ್ಕಿರುವ ಸುದ್ದಿ ಕೇಳಿ ಗ್ರಾಮದವರು ಬೆಚ್ಚಿಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಡಿ.ಕಲ್ಲಳ್ಳಿ ಗ್ರಾಮದ ಆದಿಶೇಷ ಎಂಬ ಯುವಕನ ಅಸ್ತಿ ಪಂಜರವೆಂದು ಶಂಕಿಸಲಾಗಿದೆ. ಗ್ರಾಮದಲ್ಲಿ ಬೋಜಯ್ಯ–ಚೆನ್ನಮ್ಮ ದಂಪತಿಗೆ ಪದ್ಮ, ಲಕ್ಷ್ಮಿ ಎಂಬ...

ಅಡ್ಡಮತದಾನ BJP-JDS ಸದಸ್ಯರಿಗೆ ಅನರ್ಹತೆ!

ತಿಪಟೂರು:ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಮೇರೆಗೆ, ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ನಾಲ್ವರು ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ನ್ಯಾಯಾಲಯ ಅನರ್ಹಗೊಳಿಸಿದೆ. 31ನೇ ವಾರ್ಡ್‌ ಬಿಜೆಪಿ ಬೆಂಬಲಿತ ಸದಸ್ಯೆ ಅಶ್ವಿನಿ ದೇವರಾಜು, 16ನೇ ವಾರ್ಡ್‌ ಬಿಜೆಪಿ ಬೆಂಬಲಿತ ಸದಸ್ಯೆ ಪದ್ಮಶಿವಪ್ಪ, 11ನೇ ವಾರ್ಡ್ ಜೆಡಿಎಸ್ ಬೆಂಬಲಿತ ಸದಸ್ಯ ಎಂ.ಬಿ.ಜಯರಾಂ, 24ನೇ ವಾರ್ಡ್‌...

ಸಂಪುಟದಿಂದ ಕೆ.ಎನ್. ರಾಜಣ್ಣ ವಜಾ ಆಗಿದ್ದು ಏಕೆ?

ಕೆ.ಎನ್‌ ರಾಜಣ್ಣ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಲಾಗಿದೆ. ರಾಜಣ್ಣ ಅವರ ವಜಾ ಕೇವಲ ಒಂದೇ ಒಂದು ದಿನದಲ್ಲಿ ನಡೆದಿರೋ ಬೆಳವಣಿಗೆಯಲ್ಲ. ರಾಜಣ್ಣ ಕಿಕ್ ಔಟ್ ಆದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಮುನ್ನಡೆಯಾದ್ರೆ, ಸಿದ್ದರಾಮಯಯ್ಯ ಬಣಕ್ಕೆ ಆದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದಕ್ಕೆ 4 ಪ್ರಮುಖ ಬೆಳವಣಿಗೆಗಳು ಕಾರಣವಾಗಿವೆ. ನಂಬರ್...
- Advertisement -spot_img

Latest News

DK ಎಂಟ್ರಿ ಕಾಂಗ್ರೆಸ್ ಅಲರ್ಟ್: ಹೊಸ ದಾಳಕ್ಕೆ ಬಂಡೆ ಸಿದ್ಧತೆ?

ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ 'ಗ್ರಹಣ' ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ...
- Advertisement -spot_img