Health Tips: ಇತ್ತೀಚಿನ ದಿನಗಳಲ್ಲಿ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಅಂದ್ರೆ, ಸಣ್ಣಪುಟ್ಟ ನೋವಿಗೂ ಮಾತ್ರೆ ತೆಗೆದುಕೊಳ್ಳಲೇಬೇಕು. ತಲೆನೋವು, ಕೈ ಕಾಲು ನೋವು, ಬೆನ್ನು ನೋವು, ಇತ್ಯಾದಿ ನೋವುಗಳನ್ನು ಕೆಲ ಗಂಟೆಗಳ ಕಾಲ ತಡೆದುಕೊಳ್ಳುವಷ್ಟು ಕೂಡ ಇಂದಿನ ಜನರಿಗೆ ತಾಳ್ಮೆ ಇಲ್ಲ. ಹಾಗಾಗಿ ಎಲ್ಲದಕ್ಕೂ ಪೇನ್ ಕಿಲ್ಲರ್ ತೆಗೆದುಕೊಂಡು ಬಿಟ್ಟರೆ, ಪಟ್ ಅಂತಾ ಎಲ್ಲ ನೋವೂ ವಾಸಿಯಾಗತ್ತೆ. ಆದರೆ ಇದೆಲ್ಲವೂ ತಾತ್ಕಾಲಿಕ. ಈಗ ನಿಮ್ಮ ನೋವನ್ನು ನಿವಾರಿಸಿರುವ ಮಾತ್ರೆಯ ಸೇವನೆ, ಮುಂದೊಂದು ದಿನ ನಿಮಗೆ ದೊಡ್ಡ ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಪಾರಂಪರಿಕ ವೈದ್ಯರಾದ ಪವಿತ್ರಾ ಅವರು ಹೆಚ್ಚು ಮಾತ್ರೆ ಸೇವಿಸಿದರೆ, ಏನಾಗುತ್ತದೆ ಎಂದು ವಿವರಿಸಿದ್ದಾರೆ.
ಅತೀ ಹೆಚ್ಚು ಮಾತ್ರೆಯನ್ನು ಪದೇ ಪದೇ ಸೇವಿಸಿದರೆ, ಅದು ನಿಮ್ಮ ಕಿಡ್ನಿಯನ್ನು ಹಾಳು ಮಾಡಬಹುದು. ಲಿವರ್ ಹಾಳಾಗುತ್ತದೆ. ಇವೆರಡು ಅಂಗಗಳು ನಮ್ಮ ದೇಹವನ್ನು ಶುದ್ಧೀಕರಣ ಮಾಡುತ್ತದೆ. ಹಾಗಾಗಿ ಈ ಅಂಗಗಳೇ ಹಾಳಾದ ಮೇಲೆ ನಮ್ಮ ಆರೋಗ್ಯ ಚೆನ್ನಾಗಿರಲು ಹೇಗೆ ಸಾಧ್ಯ..? ನಮ್ಮ ದೇಹ ಉಪಯೋಗಕ್ಕೆ ಬಾರದ ವಸ್ತುವಾಗಿ ಹಿಡುತ್ತದೆ. ಹಾಗಾಗಿ ವೈದ್ಯರ ಬಳಿ ಹೋಗದೇ, ನೀವೇ ಮಾತ್ರೆ ತೆಗೆದುಕೊಳ್ಳುವುದು ತಪ್ಪು ಅಂತಾರೆ ವೈದ್ಯರು.
ಅಷ್ಟೇ ಅಲ್ಲದೇ, ಶ್ವಾಸಕೋಶ ಮತ್ತು ಹೃದಯದ ಸಮಸ್ಯೆ ಉದ್ಭವಿಸಲು ಇದೂ ಒಂದು ಕಾರಣವಾಗಬಹುದು. ನರದೌರ್ಬಲ್ಯವಾಗುವ ಸಾಧ್ಯತೆ ಇರುತ್ತದೆ. ಎಷ್ಟೋ ಸಲ ವೈದ್ಯರ ಸಲಹೆ ಇಲ್ಲದೇ, ನಾವಾಗಿಯೇ ಮಾರುಕಟ್ಟೆಗೆ ಹೋಗಿ, ತೆಗೆದುಕೊಳ್ಳುವ ಕೆಲ ಮಾತ್ರೆಗಳು ನರದೌರ್ಬಲ್ಯ ಆಗಲು ಕಾರಣವಾಗುತ್ತದೆ. ಹಾಗಾಗಿ ಎಲ್ಲದಕ್ಕೂ ಮಾತ್ರೆ ತೆಗೆದುಕೊಳ್ಳುವ ಬದಲು, ಆ ನೋವಿಗೆ ಕಾರಣವೇನು ಅಂತಾ ತಿಳಿದುಕೊಳ್ಳುವುದು ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..